ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿಗೆ ಮತ್ತೋಂದು ಗರಿಮೆ
ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿಗೆ ಮತ್ತೋಂದು ಗರಿಮೆ
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು *AICTE-IDEA ಲ್ಯಾಬ್* ಸ್ಥಾಪನೆಗಾಗಿ 1.1 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿದೆ ಎಂದು ಹೇಳಲು ನಮಗೆ ಹರ್ಷ
ಎನಿಸುತ್ತದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಹಾಗೂ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ IDEA ಲ್ಯಾಬ್ ನಮ್ಮ ಕಾಲೇಜಿನ ಪ್ರಾಧ್ಯಾಪಕರಿಗೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳಿಗೆ ಹೊಸ ಹೊಸ ನವೀನ್ ತಂತ್ರಜ್ಞಾನಗಳನ್ನು ಅನ್ವೇಷಣೆ ಮಾಡಲು ಹಲವಾರು ನವನವೀನ ಯೋಜನೆಗಳಲ್ಲಿ ತೊಡಗಸಿಕೊಳ್ಳಲು ಅವರ ಆಲೋಚನೆಗಳಿಗೆ ಪೂರಕವಾಗಿ ಕಾರ್ಯ ಮಾಡಲು ಈ ಪ್ರಯೋಗಾಲಯ ಮೀಸಲು ಸ್ಥಳವಾಗಿದೆ.
ವಿಜ್ಞಾನ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅತ್ಯಾಧುನಿಕ ಸಂಶೋಧನೆಗಳನ್ನು ಉತ್ತೇಜಿಸುವ ನಾವು ಮಾಡುತ್ತಿರುವ ಪ್ರಯತ್ನಗಳಿಗೆ ಈ ಅನುದಾನವು ಒಂದು ಮೈಲಿಗಲ್ಲು ಆಗಲಿದೆ.
ಕಾಲೇಜಿನ ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್ ರವರು ಈಗೀನ ಆಡಳಿತ ಮಂಡಳಿಯು ಸದಾ ಅಭಿವೃದ್ಧಿ ಪರವಾಗಿದ್ದು ಇಂತಹ ಕೆಲಸಗಳಿಗಾಗಿ ಪ್ರಾಮಾಣಿಕವಾಗಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ ಈಗ ದೊರೆತ ಈ ಅನುದಾನ ಹಾಗೂ IDEA ಲ್ಯಾಬ್ ನಮ್ಮ ಶೈಕ್ಷಣಿಕ ಮತ್ತು ಸಂಶೋಧನಾ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದರಲ್ಲಿ ಇ ಸಂದೇಹವೇ ಇಲ್ಲ ಆದ್ದರಿಂದ ಇದರ ಪರಿಣಾಮಗಳ ತುಂಬಾ ಉತ್ಸಕರಾಗಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.