ಸಂಶೋಧಕ ಹನಿ ದೇಸಾಯಿ ಸೇರಿ ಹಲವು ಸಾಧಕರಿಗೆ ನಗನೂರ ಮಠದಲ್ಲಿ ಸನ್ಮಾನ
ಸಂಶೋಧಕ ಹನಿ ದೇಸಾಯಿ ಸೇರಿ ಹಲವು ಸಾಧಕರಿಗೆ ನಗನೂರ ಮಠದಲ್ಲಿ ಸನ್ಮಾನ
ನಗನೂರಿನ ಶ್ರೀ ಸೂಗುರೇಶ್ವರ ದೇವರ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ನಡೆದ ಧರ್ಮ ಸಭೆಯಲ್ಲಿ 2024 ನೇಸಾಲಿನ ಸುರಪುರ ಕಸಾಪ "ವರ್ಷದ ವ್ಯಕ್ತಿ ಪ್ರಶಸ್ತಿ "ಗೆ ಭಾಜನರಾದ ಸಾಹಿತಿ, ಸಂಶೋಧಕರು ಶ್ರೀಮಠದ ಪರಮ ಭಕ್ತರಾದ ಶ್ರೀ ನಿಂಗನಗೌಡ. ಹ. ದೇಸಾಯಿ ( ಹನಿ) ಪರಸನಹಳ್ಳಿ ಯವರನ್ನು ಶ್ರೀಮಠದ ಪರಮ ಪೂಜ್ಯರಾದ ಶ್ರೀಷ .ಬ್ರ. ಸೂಗುರೇಶ್ವರ ಶಿವಾಚಾರ್ಯರು ಸನ್ಮಾನಿಸಿ ಗೌರವಿಸಿದರು . ಜೊತೆಯಲ್ಲಿ ಹಿರಿಯ ಸಂಗೀತಗಾರರಾದ ಶ್ರೀ ನೀಲಪ್ಪ ಚೌದ್ರಿ ಹಾಗೂ ಮಿಮಿಕ್ರಿ ಕಲಾವಿದ ಸುನಿಲಕುಮಾರ್ ರವರನ್ನು ಸನ್ಮಾನಿಸಿದರು, ಸಮಾರಂಭದಲ್ಲಿ ನಗನೂರಿನ ಪೂಜ್ಯರಾದ ಶ್ರೀ ಶರಣಪ್ಪಶರಣರು ದೇವರಮನಿ , ಶ್ರೀ ಖಂಡಪ್ಪ ತಾತನವರು,ಕೆಂಭಾವಿಯ ಶ್ರೀಗಳಾದ ಶ್ರೀ ಚನ್ನಬಸವ ಶಿವಾಚಾರ್ಯರು ಸಗರ, ನಾಗಠಾಣ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ನಾವದಗಿಯ ಪೂಜ್ಯರಾದ ಶ್ರೀ ರಾಜೇಂದ್ರ ಒಡೆಯರ್ ಶಿವಾಚಾರ್ಯರು ಮತ್ತು ಶರಣ ಸೋಮನಾಳದ ಶ್ರೀಗಳಾದ ಮಹದೇವ್ ಶಾಸ್ತ್ರಿಗಳು ಹಾಗೂ ಗಣ್ಯರಾದ ಶ್ರೀ ಶಂಕ್ರಣ್ಣ ವಣಿಕ್ಯಾಳ ರವರು ಶ್ರೀ ಅಮೇನರೆಡ್ಡಿ ಪಾಟೀಲ ಸಂಘಟಕರಾದ ಶ್ರೀ ಪ್ರಕಾಶ ಅಂಗಡಿ ಕನ್ನಳ್ಳಿ , ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡಿ ಶ್ರೀಗಳು ಸನ್ಮಾನಿಸಿ ಗೌರವಿಸಿದರು ಹಾಗೂ ಇತರ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿ ಪಡೆದ ಸಾಧಕರನ್ನು ಕೂಡ ಈ ಸಂದರ್ಭದಲ್ಲಿ ಗೌರವಿಸಿದರು ಸಮಾರಂಭಕ್ಕೆ ಸಾಕ್ಷಿಯಾಗಿ, ನಗನೂರ, ಗೌಡಗೇರ, ಖಾನಾಪುರ, ಕಿರದಳ್ಳಿ ,ಪರಸನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಅನೇಕ, ಗಣ್ಯರು, ಭಕ್ತರು ,ತಾಯಂದಿರು, ಸಾಹಿತಿಗಳು, ಸಂಗೀತಗಾರರು ಕಲಾವಿದರು ,ಉಪಸ್ಥಿತರದ್ದು ಸಮಾರಂಭಕ್ಕೆ ಶೋಭೆ ತಂದರು, ಶ್ರೀ ಸಿದ್ದನಗೌಡ ಗೂಗಲ್ ನಿರೂಪಿಸಿದರು ಶ್ರೀ ನಾಗಭೂಷಣ್ ಪತ್ತಾರ್ ಸ್ವಾಗತಿಸಿದರು ಶ್ರೀ ಅಪ್ಪಯ್ಯ ಹಿರೇಮಠ ವಂದನಾರ್ಪಣೆ ಮಾಡಿದರು