ಬೇಟಿ ಬಚಾವೋ ಕರಾಟೆ ಶಿಖಾವೊ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬೇಕು ರಿಯಾಜ್ ಪಟೇಲ್ ಹೊಸಮನಿ
ಬೇಟಿ ಬಚಾವೋ ಕರಾಟೆ ಶಿಖಾವೊ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬೇಕು ರಿಯಾಜ್ ಪಟೇಲ್ ಹೊಸಮನಿ
ರಾಜ್ಯದ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪಂಚ ಯೋಜನೆಗಳು ರಾಜ್ಯದಲ್ಲಿ ಜಾರಿಗೆ ತಂದಂತೆ ಅದೇ ರೀತಿಯಾಗಿ ಆರನೇ ಯೋಜನೆಯಾದ ಬೇಟಿ ಬಚಾವೋ ಕರಾಟೆ ಶಿಖಾವೊ ಕಾರ್ಯಕ್ರಮವನ್ನು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಅನುಷ್ಠಾನಕ್ಕೆ ತರಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ . ಯಾಕೆಂದರೆ ದೇಶದೇಲ್ಲಡೇ ಅಮಾನವೀಯ ಅಹಿತಕರ ಘಟನೆಗಳಾದ ಕೊಲೆ ಸುಲಿಗೆ ಗುಂಡಾಗಿರಿ ಅತ್ಯಾಚಾರದಂತಹ ಘಟನೆಗಳು ಕರ್ನಾಟಕ ರಾಜ್ಯದಲ್ಲಿಯೂ ಸಹಿತ ಪತ್ರಿಕೆಗಳಲ್ಲಿ ವರದಿ ಯಾಗುತ್ತಿರುವುದು. ರಾಜ್ಯದ ಪ್ರತಿಯೊಬ್ಬ ಪಾಲಕರು ಆತಂಕ ಪಡುವ ಸಂಗತಿಯಾಗಿದೆ. ಅದೇ ರೀತಿಯಾಗಿ ರಾಜ್ಯದ ಪ್ರತಿಯೊಬ್ಬ ಪಾಲಕರು ಮಕ್ಕಳ ಕೈಯಲ್ಲಿ ಮೊಬೈಲ ಕೊಡದೆ. ಪತ್ರಿಕೆಗಳನ್ನು ಓದಲು ಕೊಡಬೇಕು ಇದರಿಂದ ಪ್ರತಿಯೊಬ್ಬ ಮಗುವಿನ ವೈಚಾರಿಕ ಬೆಳವಣಿಗೆ ವೃದ್ಧಿಯಾಗುತ್ತದೆ. ಅದೇ ರೀತಿಯಾಗಿ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ಕೇಂದ್ರಗಳಿಗೆ ಕರಾಟೆ ಕಲಿಸಬೇಕು ಈ ವಿಷಯವನ್ನು ರಾಜ್ಯದ ಪ್ರತಿಯೊಬ್ಬ ಪಾಲಕರು ಗಂಭೀರವಾಗಿ ಪರಿಗಣಿಸಬೇಕು. ಅದೇ ರೀತಿಯಾಗಿ ರಾಜ್ಯದ ಪ್ರತಿಯೊಬ್ಬ ನಾಗರಿಕರು ಸರ್ಕಾರದ ಗಮನಸೆಳೆಯಲು ಕರಾಟೆ ಶಿಕ್ಷಣವನ್ನು ಶಾಲಾ ಕಾಲೇಜುಗಳಲ್ಲಿ ಕಡ್ಡಾಯಗೊಳಿಸಲು ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಮುಂಬೈ ನಗರದ ಖ್ಯಾತ ಉದ್ಯಮಿಯಾದ ರಿಯಾಜ್ ಪಟೇಲ್ ಹೊಸಮನಿ ಬಿಳವಾರ ಅವ್ರು ತಮ್ಮ ಅಭಿಪ್ರಾಯವನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಅತಿ ಶೀಘ್ರದಲ್ಲಿ ರಾಜ್ಯ ಸರ್ಕಾರವು ಬೇಟಿ ಬಚಾವೊ ಕರಾಟೆ ಶಿಖಾವೊ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕೆಂದು ಸರಕಾರಕ್ಕೆ ಸಲಹೆ ನೀಡಿದ್ದಾರೆ.
ವರದಿ ಜೆಟ್ಟೆಪ್ಪ ಎಸ್ ಪೂಜಾರಿ