ಗುರು-ಶಿಷ್ಯರ ಸಂಸ್ಕೃತಿಗೆ ಕನ್ನಡ ನಾಡು ಸಂಸ್ಕಾರಭರಿತ ನೆಲವಾಗಿದೆ : ಡಾ. ಕೆ. ಗಿರಿಮಲ್ಲ

ಗುರು-ಶಿಷ್ಯರ ಸಂಸ್ಕೃತಿಗೆ ಕನ್ನಡ ನಾಡು ಸಂಸ್ಕಾರಭರಿತ ನೆಲವಾಗಿದೆ : ಡಾ. ಕೆ. ಗಿರಿಮಲ್ಲ

ಗುರು-ಶಿಷ್ಯರ ಸಂಸ್ಕೃತಿಗೆ ಕನ್ನಡ ನಾಡು ಸಂಸ್ಕಾರಭರಿತ ನೆಲವಾಗಿದೆ :ಡಾ. ಕೆ. ಗಿರಿಮಲ್ಲ 

ಡಾ|| ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮ ದಿನದ ಪ್ರಯುಕ್ತ ಶಿಕ್ಷಕರ ದಿನಾಚರಣೆಯ ಆಚರಣೆಯ

ಕಲಬುರಗಿ ಸರಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ, ದಿನಾಂಕ: 05-09-2024 ರಂದು ಡಾ|| ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮ ದಿನದ ನಿಮಿತ್ಯ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಪ್ರಾಚಾರ್ಯರಾದ ಡಾ. ಕೆ. ಗಿರಿಮಲ್ಲ ರವರು, ಗುರು-ಶಿಷ್ಯರ ಸಂಸ್ಕೃತಿಗೆ ಕನ್ನಡ ನಾಡು ಸಂಸ್ಕಾರಭರಿತ ನೆಲವಾಗಿದೆ, ಕಲಬುರಗಿಯ ಶ್ರೀ ಶರಣ ಬಸವೇಶ್ವರರು ಮತ್ತು ಅವರ ಗುರುಗಳಾದ ಮರುಳಾರಾಧ್ಯರು, ಸಂತ ಶಿಶುನಾಳ ಷರೀಫ-ಗುರು ಗೋವಿಂದ ಭಟ್ಟರು, ಕಡಕೋಳ ಮಡಿವಾಳೇಶ್ವರರು ಮತ್ತು ಗುರು ಮಹಾಂತರವರು ಹೀಗೆ ಗುರು-ಶಿಷ್ಯ ಪರಂಪರೆ ಬೆಳೆದು ಬಂದಿದೆ. ರಕ್ತ ಸಂಬಂಧಕ್ಕಿಂತಲೂ ಮಿಗಿಲಾದ ಸಂಬಂಧವೊಂದಿದ್ದರೆ ಅದು ಗುರು-ಶಿಷ್ಯ ಸಂಬಂಧವಾಗಿದೆ. ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿಯಾಗಿದ್ದು ಮನಃಪೂರ್ವಕವಾಗಿ ಸಮರ್ಪಣಾಭಾವದಿಂದ ಶಿಕ್ಷಕರು ಕೆಲಸ ಮಾಡಬೇಕು. ಮನೆಯ ಮಕ್ಕಳಿಗಿಂತ ಶಾಲೆಯ ಮಕ್ಕಳೇ ಮುಖ್ಯ ಎಂದು ಮಾರ್ಮಿಕವಾಗಿ ಮಾತನಾಡಿದರು.

            ಶಾಲೆಯ ಎಲ್ಲಾ ಗುರು ವೃಂದದವರಿಗೆ ವಿದ್ಯಾರ್ಥಿಗಳು ಶಾಲು ಹಾಕಿ, ಪೆನ್ನು ಕಾಣಿಕೆ ನೀಡಿ ಗೌರವಿಸಿದರು, ಹಾಡು, ನೃತ್ಯದ ಮೂಲಕ ಮನರಂಜನೆ ನೀಡಿದರು. ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದ್ದರು, ಕ್ರೀಯಾಶೀಲವಾಗಿ ಪಾಲ್ಗೊಂಡ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಿದ್ದು ವಿಶೇಷವಾಗಿತ್ತು.

            ಶಾಲೆಯ ಸಿಬ್ಬಂದಿಯವರಾದ ಬಾವುರಾವ್ ಪಾಟೀಲ್, ರಾಕೇಶ ಚವಾಣ, ಬಸವರಾಜ ಈರಣ್ಣ, ಸುನಂದಾ ನೀರೋಣಿ, ಉಮಾಶ್ರೀ, ಸುನಂದಾ ಬಿರದಾರ, ಪ್ರೀಯಾ, ಸಂಧ್ಯಾರಾಣಿ, ಶಿವರಾಜ ಪಾಟೀಲ್, ಪ್ರೀತಂ, ಬೀರಲಿಂಗ ಮುಂತಾದವರು ಹಾಜರಿದ್ದರು.