ಯಜಮಾನ್ ಟಿ. ನಾರಾಯಣಪ್ಪ ಪ್ರಶಸ್ತಿಗೆ ವಿನಯಭಾಸ್ಕರರೆಡ್ಡಿ ಎಂ ಆಯ್ಕೆ

ಯಜಮಾನ್ ಟಿ. ನಾರಾಯಣಪ್ಪ ಪ್ರಶಸ್ತಿಗೆ ವಿನಯಭಾಸ್ಕರರೆಡ್ಡಿ ಎಂ ಆಯ್ಕೆ

ಯಜಮಾನ್ ಟಿ. ನಾರಾಯಣಪ್ಪ ಪ್ರಶಸ್ತಿಗೆ ವಿನಯಭಾಸ್ಕರರೆಡ್ಡಿ ಎಂ ಆಯ್ಕೆ 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕವು ಇದೇ ಜ.18 ಹಾಗೂ 19ರಂದು ತುಮಕೂರಿನಲ್ಲಿ ನಡೆಯಲಿರುವ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನದಲ್ಲಿ ಕೊಡಮಾಡುವ ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ (ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿ ವರದಿಗೆ) ಪ್ರಶಸ್ತಿಗೆ ಭಾಜನರಾದ ಉದಯವಾಣಿ ಯಾದಗಿರಿ‌ ಜಿಲ್ಲಾ‌ ವರದಿಗಾರ ವಿನಯಭಾಸ್ಕರರೆಡ್ಡಿ ಎಂ ಅವರನ್ನು ಆಯ್ಕೆ ಮಾಡಿದಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹರ್ಷ ವ್ಯಕ್ತಪಡಿಸಿದೆ ಈ ಕುರಿತು ಪ್ರಕಟಣೆ ಹೊರಡಿಸಿರುವ ಸಂಘವು ಯಾದಗಿರಿಗೆ ಪ್ರಶಸ್ತಿ ನೀಡಿ ನಮ್ಮ ಜಿಲ್ಲೆಗೆ ಮನ್ನಣೆ ನೀಡಿದಕ್ಕೆ ಜಿಲ್ಲಾ ಘಟಕವು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಪ್ರ.ಕಾರ್ಯದರ್ಶಿ ಜಿ.ಸಿ. ಲೋಕೇಶ ಸೇರಿದಂತೆ ರಾಜ್ಯ ಘಟಕದ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಆಯ್ಕೆ ಸಮಿತಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಪ್ಪ ಸಂಕೀನ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಕಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ