ಚಂದ್ರಕಾಂತ ಪಾಟೀಲ ಶಾಲೆಯಲ್ಲಿ ಶೈಕ್ಷಣಿಕ ವಸ್ತು ಪ್ರದರ್ಶನ, ಉತ್ಸವ ಕಾರ್ಯಕ್ರಮಕ್ಕೆ ಚಾಲನೆ
ಚಂದ್ರಕಾಂತ ಪಾಟೀಲ ಶಾಲೆಯಲ್ಲಿ ಶೈಕ್ಷಣಿಕ ವಸ್ತು ಪ್ರದರ್ಶನ, ಉತ್ಸವ ಕಾರ್ಯಕ್ರಮಕ್ಕೆ ಚಾಲನೆ
ಕಲಬುರಗಿ: ನಗರದ ಪ್ರತಿಷ್ಠಿತ ಚಂದ್ರಕಾಂತ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಸಿ.) ಶಾಲೆಯಲ್ಲಿ ಶನಿವಾರ ಶೈಕ್ಷಣಿಕ ಮಕ್ಕಳ ವಸ್ತು ಪ್ರದರ್ಶನ ಉತ್ಸವ ಕಾರ್ಯಕ್ರಮವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಹಿರಿಯ ವಿಜ್ಞಾನಿಗಳಾದ ಶ್ರೀ ಡಾ.ಟಿ.ಎನ್. ಸುರೇಶಕುಮಾರ ಅವರು ಉದ್ಘಾಟಿಸಿದರು.
ನಂತರ ಅವರ ಮಾತನಾಡುತ್ತಾ ಮಕ್ಕಳಲ್ಲಿಯ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕೆಂದು ಹೇಳಿದರು.
ಗೌರವಾನ್ವಿತ ಅತಿಥಿಗಳಾದ ಕಲಬುರ್ಗಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ದಯಾನಂದ ಅಗಸರ ಅವರು ಮಕ್ಕಳನ್ನು ಕುರಿತು ಆರೋಗ್ಯ, ಪೌಷ್ಠಿಕ ಆಹಾರ, ಪರಿಸರ ಮತ್ತು ವಾತಾವರಣ ಬದಲಾವಣೆ ಕುರಿತು ಉತ್ತಮ ಅಂಶಗಳನ್ನು ಬೆಳೆಸಿಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಬಿ.ಜಿ. ಪಾಟೀಲ್, ಎಸ್.ಬಿ. ಪಾಟೀಲ್ ಸಂಸ್ಥೆಯ ಆಡಳಿತ ನಿರ್ದೇಶಕ ಚಂದ್ರಕಾಂತ ಬಿ.ಪಾಟೀಲ್, ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೈಲಾಸ ಬಿ. ಪಾಟೀಲ್, ಪ್ರಾಂಶುಪಾಲ ಕೆ. ರವಿಕುಮಾರ, ಉಪಪ್ರಾಂಶುಪಾಲ ಆಕಾಶ ಡಿ. ಉಬಾಳೆ ಸೇರಿದಂತೆ ಶಾಲೆಯ ಸಂಯೋಜಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದರು.
ನಂತರ ಮಕ್ಕಳು ಹಿರಿಯ ವಿಜ್ಞಾನಿಗಳೊಂದಿಗೆ ಸಂದರ್ಶಿಸಿದಾಗ ಅವರು ಬೌದ್ಧಿಕ ವಿಕಸನ ಹಾಗೂ ಸೃಜನಶೀಲತೆ ಅಂಶಗಳನ್ನು ಅರಿತುಕೊಂಡರು. ವಸ್ತು ಪ್ರದರ್ಶನದೊಂದಿಗೆ ಇಡೀ ಶಾಲೆಯ ಮಕ್ಕಳು ಸಂತೋಷ ಹರ್ಷದಿಂದ ಸಂಭ್ರಮಿಸಿದರು.