ವಡಗೇರಾ ತಾಲೂಕಿನ ಐಕುರ ಗ್ರಾಮದಿಂದ ರೊಟ್ಟಿ ಸೇವೆ

ವಡಗೇರಾ ತಾಲೂಕಿನ ಐಕುರ ಗ್ರಾಮದಿಂದ  ರೊಟ್ಟಿ ಸೇವೆ

ವಡಗೇರಾ ತಾಲೂಕಿನ ಐಕುರ ಗ್ರಾಮದಿಂದ ರೊಟ್ಟಿ ಸೇವೆ

ಕಲಬುರಗಿ: ವಡಗೇರಾ ತಾಲೂಕಿನ ಐಕುರ ಗ್ರಾಮದಿಂದ ದಕ್ಷಿಣ ಭಾರತದ ಕುಂಭಮೇಳವೆAದೆ ಪ್ರಸಿದ್ಧವಾದ ಕೊಪ್ಪಳದ ಐತಿಹಾಸಿಕ ಗವಿ ಸಿದ್ದೇಶ್ವರ ಜಾತ್ರೆಗೆ ನಾಡಿನ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುತ್ತಾರೆ, ಕೊಪ್ಪಳದ ಗವಿಸಿದ್ದೇಶ್ವರ ಮಠದ ಶಾಲೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತ ಶಿಕ್ಷಣ ವಸತಿ ಊಟ ಪಡೆಯುತ್ತಿದ್ದು, ಈ ಭಾಗದ ಬಡ ಮಕ್ಕಳಿಗೆ ಹೆಚ್ಚಿನ ಅನುಕೂಲ ಆಗುತ್ತಿರುವುದು ಹೆಮ್ಮೆಯ ವಿಚಾರ, ನಮ್ಮ ಗ್ರಾಮದಿಂದ ಎರಡು ವರುಷದಿಂದ ರೊಟ್ಟಿ ಸೇವೆ ಜೊತೆಗೆ 30 ಕ್ಕೂ ಹೆಚ್ಚು ಯುವಕರು ಮೂರು ದಿನ ನಡೆಯುವ ಜಾತ್ರೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಕಳೆದ ವರುಷ 5000ಕ್ಕೂ ಹೆಚ್ಚು ರೊಟ್ಟಿ ಈ ಭಾರಿ 10000 ಕ್ಕೂ ಹೆಚ್ಚು ರೊಟ್ಟಿಗಳು ಗ್ರಾಮದ ಎಲ್ಲಾ ಮಹಿಳೆಯರು ಹಾಗೂ ಯುವಕರ ಪರಿಶ್ರಮದಿಂದ ತಯಾರಾಗಿ ಜನವೇರಿ ದಿನಾಂಕ 15 16 17 ರಂದು ಮೂರು ದಿನ ನಡೆಯುವ ಜಾತ್ರೆಗೆ ಹೊರಟಿರುವುದು ಖುಷಿಯ ಸಂಗತಿ ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಶರಣಗೌಡ ಐಕುರ ಹೇಳಿದರು. 

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ವೆಂಕಟರಾಯಗೌಡ ಮಲಘಾಣ, ಶರಣಪ್ಪಗೌಡ ಬಿರಾದಾರ, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ, ನಾಗರಾಜ್ ಲಕ್ಕನೊರ, ಸಂತೋಷ ಸಜ್ಜನ, ಮಲ್ಲಿಕಾರ್ಜುನ ಹೆರುಂಡಿ, ಚಂದ್ರಪ್ಪ ದೇಸಾಯಿ, ಸಾಯಬಣ್ಣ ಮೆದರಗಾಳ, ಹುಲಗಪ್ಪ ಹೊಸಳ್ಳಿ ಸೇರಿದಂತೆ ಅನೇಕ ಯುವಕರು ಪಾಲ್ಗೊಂಡಿದ್ದರು.