ಕೆಪಿಎಸ್ಸಿ ಪರೀಕ್ಷಾರ್ಥೀಗಳ ಬೃಹತ್ ಪ್ರತಿಭಟನೆ ಬೆಂಬಲ :- ಶಶೀಲ್ ಜಿ ನಮೋಶಿ

ಕೆಪಿಎಸ್ಸಿ ಪರೀಕ್ಷಾರ್ಥೀಗಳ ಬೃಹತ್ ಪ್ರತಿಭಟನೆ ಬೆಂಬಲ :- ಶಶೀಲ್ ಜಿ ನಮೋಶಿ

ಕೆಪಿಎಸ್ಸಿ ಪರೀಕ್ಷಾರ್ಥೀಗಳ ಬೃಹತ್ ಪ್ರತಿಭಟನೆ ಬೆಂಬಲ :- ಶಶೀಲ್ ಜಿ ನಮೋಶಿ 

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಆಗಸ್ಟ್ 27 (ಪೂರ್ವಭಾವಿ ಪರೀಕ್ಷೆ) ಹಾಗೂ ಡಿಸೆಂಬರ್ 29ರಂದು (ಮರು ಪೂರ್ವಭಾವಿ ಪರೀಕ್ಷೆ) ಎರಡು ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಕೆಪಿಎಸ್ಸಿ ( ಕರ್ನಾಟಕ ಲೋಕಸೇವಾ ಆಯೋಗವು) ಉದ್ದೇಶಪೂರ್ವಕವಾಗಿ ಪ್ರಶ್ನೆ ಪತ್ರಿಕೆಗಳಲ್ಲಿ ಭಾಷಾಂತರ ದೋಷ ಎಸಗಿದ್ದು ಪರೀಕ್ಷೆ ಎದುರಿಸುವ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಘೋರವಾದ ಅನ್ಯಾಯವೆಸಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹೇಳಿದ್ದಾರೆ.

 ಈ ಅನ್ಯಾಯ ಸರಿಪಡಿಸಲು ಮತ್ತೊಮ್ಮೆ ಮರು ಪರೀಕ್ಷೆ ಇಲ್ಲವೇ ಪರೀಕ್ಷೆ ತೆಗೆದುಕೊಂಡ ಎಲ್ಲಾ ಅಭ್ಯರ್ಥಿಗಳಿಗೂ ಮುಖ್ಯ ಪರೀಕ್ಷೆಗೆ ಅರ್ಹತೆ ನೀಡುವ ಕುರಿತು ಪ್ರತಿಭಟನೆಯನ್ನು ಪರೀಕ್ಷಾರ್ಥಿಗಳು ಹಮ್ಮಿಕೊಂಡಿದ್ದು ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.

 ಈ ಹಿಂದಿನಿಂದ ನಾನು ಹೇಳುತ್ತಿದ್ದೇನೆ ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಸುಧಾರಣೆಯಾಗಬೇಕೆಂದು ಈಗ ಪರೀಕ್ಷಾರ್ಥಿಗಳ ಎರಡನೆ ಬೇಡಿಕೆಯು ಇದೆ ಆಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಗೊಂದಲ ಕುರಿತು

ಇದೇ ಜನವರಿ 16ರಂದು ಬೃಹತ್ ಪ್ರತಿಭಟನೆಯನ್ನು ಪರಿಕ್ಷಾರ್ಥೀಗಳು ಹಮ್ಮಿಕೊಂಡಿದ್ದು ಈ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ 

ಅವರ ಪ್ರಮುಖ ಬೇಡಿಕೆಗಳಾದ-

ಕೆಎಎಸ್ ಪೂರ್ವಭಾವಿ ಪರೀಕ್ಷೆ ಎದುರಿಸಿದ ಎಲ್ಲಾ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಅರ್ಹತೆ ನೀಡುವುದು 

 ಪದೇ ಪದೇ ಕರ್ತವ್ಯ ಲೋಪ ಎಸಗುತ್ತಿರುವ ಕೆಪಿಎಸ್ಸಿ ಪರೀಕ್ಷೆ ಗಳಲ್ಲಿ ಉದ್ದೇಶಪೂರ್ವಕವಾಗಿ ಅನ್ಯಾಯ ಮಾಡುತ್ತಿರುವ ಅಧಿಕಾರಿಗಳ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು 

 ಪರೀಕ್ಷಾ ನಿಯಂತ್ರಕರನ್ನು ಸಂಪೂರ್ಣವಾಗಿ ಬದಲಾಯಿಸದೆ ಯಾವುದೇ ಪರೀಕ್ಷೆಗಳನ್ನ ಕೆಪಿಎಸ್ಸಿ ನಡೆಸಬಾರದು 

 ಗ್ರೂಪ್ ಎ ಮತ್ತು ಗ್ರೂಪ್ ಬಿ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ನೇತೃತ್ವದ ಅತ್ಯುತ್ತಮ ಹಾಗೂ ಪಾರದರ್ಶಕ ಪರೀಕ್ಷೆಗೆ ಹೆಸರಾದ ಯುಪಿಎಸ್ಸಿಗೆ ನೀಡಬೇಕು 

ಇತ್ತೀಚಿಗೆ ನಡೆದ ಗ್ರೂಪ್ ಸಿ ಪರೀಕ್ಷೆಗಳಲ್ಲಿ OMR ತಿದ್ದುಪಡಿಯಾಗಿದ್ದು ಕೂಡಲೇ ಸಮಗ್ರ ತನಿಖೆಯಾಗಿ ಪಾರದರ್ಶಕ ನೇಮಕಾತಿ ಆಗಬೇಕು 

ಬಾಕಿ ಉಳಿದಿರುವ ಎಲ್ಲಾ ಫಲಿತಾಂಶಗಳನ್ನು ಕೂಡಲೇ ಬಿಡುಗಡೆಗೊಳಿಸಬೇಕು 

ಈ ಮೇಲ್ಕಂಡ ಬೇಡಿಕೆಗಳಗಾಗಿ ಪರೀಕ್ಷಾರ್ಥಿಗಳು ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ನಾನು ಸಹ ಭಾಗವಹಿಸುವೆ ಎಂದು ಹೇಳಿದ್ದಾರೆ