ಅಮಿತ್ ಶಾ ಹೇಳಿಕೆ ಖಂಡಿಸಿ ಆಳಂದ ಬಂದ್ ಯಶಸ್ವಿ
ಅಮಿತ್ ಶಾ ಹೇಳಿಕೆ ಖಂಡಿಸಿ ಆಳಂದ ಬಂದ್ ಯಶಸ್ವಿ
ಆಳಂದ: ಪಟ್ಟಣದಲ್ಲಿ ದಲಿತ ಸಮನ್ವಯ ಸಮಿತಿ ವತಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿವಾದಾಸ್ಪದ ಹೇಳಿಕೆಯನ್ನು ಖಂಡಿಸಿ ಬಂದ್ ಹಾಗೂ ಪ್ರತಿಭಟನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ವಿದ್ಯಾರ್ಥಿಗಳು, ಮಹಿಳೆಯರು.ಭಾಗವಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯು:ಸಮಿತಿಯ ಅಧ್ಯಕ್ಷ ದಯಾನಂದ ಶೇರಿಕಾರ್ ಅವರ ನೇತೃತ್ವದಲ್ಲಿ ನಡೆಯಿತು. ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಿ. ಆರ್ ಪಾಟೀಲ ಭೇಟಿ ನೀಡಿ ಆಳಂದ ಬಂದ್ ಕರೆಗೆ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ . ಮಾಜಿ ಸದಸ್ಯ ಸಿದ್ದಾರಾಮ ಪ್ಯಾಟೆ
ಬಾಬು ಅರುಣೋದಯ, ಬಸವಲಿಂಗಪ್ಪ ಗಾಯಕ್ವಾಡ್, ಆನಂದ ಗಾಯಕ್ವಾಡ್, ಪ್ರಕಾಶ ಮೂಲಭಾರತಿ, ದಿಲೀಪ್ ಕ್ಷೀರ ಸಾಗರ್ ಲಕ್ಷ್ಮಣ ಜಳಕಿ ಬಾಬುರಾವ ಚಿಚ ಕೋಟಿ. ಅಮಜದ ಅಲಿ ಕರಜಗಿ ವಾಹಿದಜರದಿ ತಯ್ಯಬ ಅಲಿ ಶೇಖ ಅಜಗರ ಹವಾಲ್ದಾರ ಖಾದರ ಜಾಕೀರ ಅನ್ಸಾರಿ, ಅಮಿತ ಪಾಟೀಲ ಲಿಂಗರಾಜ ಪಾಟೀಲ, ಲಕ್ಷ್ಮೀಕಾಂತ ಕೊರಳ್ಳಿ, ಶಶಿಕಾಂತ ಸಿಂಗೆ ಪವನ ಶೆಟ್ಟಿ, ಸೈಪನ ಪಟೇಲ,ಸಂದೇಶ ಜವಳಿ ಶಿವಪುತ್ರ ನಡಗೇರಿ ಕಲ್ಯಾಣಿ ದೇವಂತಗಿ ಶ್ರೀಮಂತ ನಡಗೇರಿ, ಪಿಂಕು ಭದ್ರೆ ತಥಾಗತ ಮೂಲಭಾರತಿ, ಭಾಕರ ಖುರೇಷಿ . ಶಿವಾನಂದ ನಾಗುರೆ, ಮಂಜು ಸಿಂಗೆ. ಸಿದ್ಧಾರ್ಥ ಸಿಂಗೆ ಚಂದ್ರು ಜಂಗಲೇ ಪಪ್ಪು ತೋಳೆ ಕಿಟ್ಟಿ ಸಾಲೇಗಾವ ಮಹಾದೇವ ಮೋಘಾ . ವಿದ್ಯಾಸಾಗರ ಕಾಂಬಳೆ, ದಯಾನಂದ ಸಾಲೆಗಾವ ಶಿವಪ್ಪ ತೊಳೆ ಮುತ್ತಣ್ಣ ಜಂಗಲೆ, ನಾಗರಾಜ ದೇವನೂರ ಶ್ಯಾಮರಾವ ಅಷ್ಟಗಿ, ಸೋಮೇಶ ಬಂಗರಗಾ ಸಂದೀಪ ಕಾಂಬಳೆ ಚಂದ್ರಶ್ಯಾ ಹೊದಲೂರ ಧರ್ಮಾ ಬಂಗರಗಾ ಪ್ರವೀಣ ಮೊದಲೆ ಫಿರಾಸತ್ ಅನ್ಸಾರಿ ಮಹಾದೇವ ಕಾಂಬಳೆ ಮಹೇಶ ಕಾಂಬಳೆ ಅಕ್ಷಯ ಮಂಟಗಿ ಮಿಲಿಂದ ಮೋಘಾ ಅಜಯ ಸಿ.ಎಮ್. ಆನಂದ ಮುದಗಲೆ ಬೋಗೇಶ ಜಳಕಿ ತೆಹರಿಕ- ಇ- ಖುದದಾದ ಸಂಘಟನೆಯ ಕಲ್ಯಾಣ ಕರ್ನಾಟಕದ ಅಧ್ಯಕ್ಷ ಮಹ್ಮದ ರಫೀಕ ಮುಲ್ಲಾ ಇತರ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಧ್ವನಿಯನ್ನು ಪ್ರಜಾಪ್ರಭುತ್ವದ ಪರವಾಗಿ ಪ್ರಬಲಗೊಳಿಸಿದರು.
ಈ ಪ್ರತಿಭಟನೆಯು ದಲಿತ ಸಮುದಾಯದ ಮೇಲೆ ಪ್ರಭಾವ ಬೀರುವಂತಹ ಹೇಳಿಕೆಗಳನ್ನು ಖಂಡಿಸಿ ಮತ್ತು ಸಮಾನತೆಯ ಪರವಾಗಿ ಜಾಗೃತಿ ಮೂಡಿಸುವ ದಿಸೆಯಲ್ಲಿ ನಡೆಸಲಾಯಿತು.
ಆಳಂದ ಪಟ್ಟಣದ ವ್ಯಾಪ್ತಿಯಲ್ಲಿ ಬಂದ್ ಯಶಸ್ವಿಯಾಗಿ ನಡೆದಿದ್ದು, ದಲಿತ ಸಮುದಾಯದ ಸಂಕಲ್ಪ ಮತ್ತು ಏಕತೆಯನ್ನು ಸ್ಪಷ್ಟಪಡಿಸಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡರು ಸಂವಿಧಾನದ ಮೇಲಿನ ಚರ್ಚೆಯ ವಿಷಯದಲ್ಲಿ ಗೃಹ ಸಚಿವ ಅಮಿತ್ ಶಾ ಸಂವಿಧಾನ ಮೇಲಿನ ಚರ್ಚೆಯ ವಿಷಯದಲ್ಲಿ ಮಾತನಾಡುತ್ತಾ ಸಂಸತ್ತಿನಲ್ಲಿಯೇ ಭಾರತ ಭಾಗ್ಯ ವಿಧಾತ ಆಧುನಿಕ ಭಾರತದ ಪಿತಾಮಹ ವಿಜ್ಞಾನಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಾ ಈ ಮೂಲಕ ಭಾರತದ ಬಹು ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು ಜಾತೀಯತೆ ಒಂದು ಮನುರೋಗಿಯಾಗಿ ಜಾತಿಯ ಶ್ರೇಷ್ಠತೆಯನ್ನು ತಲೆಗೇರಿಸಿಕೊಂಡು ಮಾನವೀಯತೆ ಮರೆತು ಜಾತಿಯತೆಯನ್ನು ಪ್ರಚೋದಿಸಿ ಜಾತಿವಾದಿಯಾಗಿ ವರ್ತಿಸಿದ್ದನ್ನು ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆಯನ್ನು ಖಂಡಿಸುತ್ತವೆ
ಭಾರತದ ಪ್ರಧಾನ ಮಂತ್ರಿಗಳು ಅಮಿತ್ ಶಾ ರನ್ನು ಗ್ರಹ ಖಾತೆಯಿಂದ ರಾಜೀನಾಮೆ ಪಡೆದು ಅವರ ಲೋಕಸಭಾ ಸದಸ್ಯತ್ವವನ್ನು ವಜಾಗೊಳಿಸ ಬೇಕು ಎಂದು ಆಗ್ರಹಿಸಿ
ಬಂದ ಕರೆಯಿಂದಾಗಿ ಸಾರಿಗೆ ಸಂಸ್ಥೆಯ ಬಸ್ ಹಾಗೂ ಖಾಸಗಿ ವಾಹನಗಳ ಸಂಪರ್ಕ ಬಂದ್ ಮಾಡಿ ಅಂಗಡಿ ವ್ಯಾಪಾರಗಳು ಮುಚ್ಚಲ್ಪಟ್ಟಿದ್ದವು ಪ್ರತ್ಯೇಕವಾಗಿ ಸಿದ್ದಾರ್ಥ್ ಚೌಕ ಬಸ್ ನಿಲ್ದಾಣ ಚೆಕ್ ಪೋಸ್ಟ್ ಹತ್ತಿರ ಪ್ರತಿಭಟನೆ ಗುಂಪುಗಳು ಕೈಗೊಂಡು ಕೇಂದ್ರ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ಆಗದಂತೆ ಆ್ಯಡಿಷನಲ್ ಎಸ್ಪಿ. ಶ್ರೀನಿಧಿ. ಡಿ.ವೈ.ಎಸ್ಪಿ.ಬಿ .ಆರ್. ಗೋಪಿ. ಆಳಂದ ಪೊಲೀಸ್ ಠಾಣೆಯ ಪಿ.ಐ.ಶರಣಬಸಪ್ಪ ಕೊಡ್ಲಾ ಸಿಪಿಐ ಪ್ರಕಾಶ ಯಾತನೂರ ಪಿ.ಎಸ್.ಐ. ಭೀಮರಾಯ ಬಂಕ್ಲಿ
ಎ ಎಸ್ ಐ .ಪ್ರಭಾವತಿ ಎ.ಎಸ್ ಐ ಶೆಬ್ಬಿರ . ಗಣಪತಿ ಘಂಟೆ. ಸಿದ್ದಾರಾಮ ಬಿರಾದಾರ ಮಹೆಬೂಬ ಶೇಖ ಚಂದ್ರಶೇಖರ ಕಾರಬಾರಿ ವೆಂಕಟ ಚವ್ಹಾಣ ಮಂಜುನಾಥ ಮಹೇಶ ಮಲ್ಲಿಕಾರ್ಜುನ ಸಾವಳೇಶ್ವರ. ಮುಂತಾದ ಪೊಲೀಸ ಸಿಬ್ಬಂದಿಗಳು ಸಹಕರಿಸಿದರು .
ವರದಿ ಡಾ ಅವಿನಾಶ ಎಸ್ ದೇವನೂರ ಆಳಂದ