ವಿವಿ ಗಳಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳು ಖಾಯಂ ನೇಮಕಾತಿ ಆಗಲಿ, ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳು 371 J ನಿಯಮದಂತೆ ಭರ್ತಿ ಮಾಡಿ ಶಶೀಲ್ ಜಿ ನಮೋಶಿ

ವಿವಿ ಗಳಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳು ಖಾಯಂ ನೇಮಕಾತಿ ಆಗಲಿ, ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳು 371 J ನಿಯಮದಂತೆ ಭರ್ತಿ ಮಾಡಿ ಶಶೀಲ್ ಜಿ ನಮೋಶಿ

ವಿವಿ ಗಳಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳು ಖಾಯಂ ನೇಮಕಾತಿ ಆಗಲಿ, ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳು 371 J ನಿಯಮದಂತೆ ಭರ್ತಿ ಮಾಡಿ ಶಶೀಲ್ ಜಿ ನಮೋಶಿ 

ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಬೋಧಕ, ಬೋಧಕೇತರ ಹುದ್ದೆಗಳ ಖಾಲಿ ಇದ್ದು ಉನ್ನತ ಶಿಕ್ಷಣ ಪದ್ಧತಿ ಅವನತಿಯತ್ತ ಸಾಗುತ್ತಿದೆ ಈ ಕುರಿತು ಕೆಲವೊಂದು ದಿನಪತ್ರಿಕೆಗಳಲ್ಲಿ ಈ ಕುರಿತು ವರದಿಗಳು ಪ್ರಕಟವಾಗಿದ್ದು ಉನ್ನತ ಶಿಕ್ಷಣದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿವೆ, ಖಾಲಿಯಾದ ಖಾಯಂ ಹುದ್ದೆಗಳ ಭರ್ತಿಗಾಗಿ

 ಈಗಾಗಲೇ ನಾನು ಸದನದಲ್ಲಿ ಸಂಭಂದಿಸಿದ ಸಚಿವರ ಗಮನ ಸೆಳೆದಿದ್ದೆನೆ. ಹಲವಾರು ಬಾರಿ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ, ಚರ್ಚಿಸಿರುವೆ ಇಲ್ಲಿಯವರೆಗೂ ಇದಕ್ಕೆ ಪರಿಹಾರ ಒದಗಿಸಲು ಸರ್ಕಾರಗಳು ವಿಫಲವಾಗಿವೆ. ಉನ್ನತ ಶಿಕ್ಷಣ ಕ್ಷೇತ್ರ ಅತ್ಯುನ್ನತವಾಗಿ ಬೆಳೆಸಬೇಕಾದ ಸರಕಾರಗಳೆ ಅವನತಿಯತ್ತ ತಳ್ಳುತ್ತಿರುವಂತೆ ಕಂಡು ಬರುತ್ತಿದೆ. ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಅಭಿಪ್ರಾಯ ಪಟ್ಟಿದ್ದಾರೆ. ಉನ್ನತ ಶಿಕ್ಷಣ ಸಚಿವರು ನಾವು ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ 

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅತಿ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇದ್ದು ಸರಕಾರ ಬೋಧಕರ ಹುದ್ದೆಗಳ ನೇಮಕಾತಿಗೆ ಮನಸ್ಸು ಮಾಡದಿದ್ದರಿಂದ ಬಹುತೇಕ ವಿವಿಗಳಿಗೆ ಅತಿಥಿ ಉಪನ್ಯಾಸಕರೇ ಆಧಾರವಾಗಿದ್ದು, ಗುಣಮಟ್ಟದ ಶಿಕ್ಷಣದ ಪ್ರಶ್ನೆ ಕಾಡುತ್ತಿದೆ.

ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಯಡಿ ಬರುವ 12 ಸಾರ್ವಜನಿಕ ಎಶ್ವವಿದ್ಯಾಲಯಗಳಲ್ಲಿ ಬೋಧಕರ ಹುದ್ದೆಗಳು ಅತಿ ಹೆಚ್ಚು ಖಾಲಿ ಇದ್ದು ಸರಕಾರ ಮಾತ್ರ ನೇಮಕಾತಿಗೆ ಮನಸ್ಸು ಮಾಡುತ್ತಿಲ್ಲ, ಇದರಿಂದ ವಿಶ್ವವಿದ್ಯಾಲಯಗಳಲ್ಲಿ ಬೋಧಕರಿಲ್ಲದೆ ಗುಣಮಟ್ಟದ ಶಿಕ್ಷಣಕ್ಕೆ ಪೆಟ್ಟು ಬೀಳುವಂತಾಗಿದೆ. ವಿವಿಗಳಲ್ಲಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪತ್ರಿಕೆ ಅತ್ಯುತ್ತಮ ಬೆಳಕು ಚೆಲ್ಲಿದೆ.

ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಯಡಿ ಬರುವ 32 ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಹುದ್ದೆಗಳು ಅತಿ ಹೆಚ್ಚು ಖಾಲಿ ಇದ್ದು ಸರಕಾರ ಮಾತ್ರ ನೇಮಕಾತಿಗೆ ಮನಸ್ಸು ಮಾಡುತ್ತಿಲ್ಲ. ಇದರಿಂದ ವಿಶ್ವವಿದ್ಯಾಲಯಗಳಲ್ಲಿ ಬೋಧಕರಿಲ್ಲದೆ ಗುಣಮಟ್ಟದ ಶಿಕ್ಷಣಕ್ಕೆ ಪೆಟ್ಟು ಬೀಳುವಂತಾಗಿದೆ. ವಿವಿಗಳಲ್ಲಿ

ಕಾಯಂ ಸಹಾಯಕ ಪ್ರಾಧ್ಯಾಪಕ. ಸಹ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಅನೇಕ ವರ್ಷಗಳಿಂದ ವಿದ್ಯಾರ್ಹತೆ ಪಡೆದು ಲಕ್ಷಾಂತರ ಅಭ್ಯರ್ಥಿಗಳು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಎಷ್ಟೋ ಜನ ವಯೋಮಿತಿ ಮೀರಿ ಹೋಗುತ್ತಿದ್ದಾರೆ.

ಒಟ್ಟು 2723 ಬೋಧಕ ಹುದ್ದೆಗಳು ಖಾಲಿ ರಾಜ್ಯದ 32 ವಿಶ್ವವಿದ್ಯಾಲಯಗಳಲ್ಲಿ ಒಟ್ಟು 4709 ಹುದ್ದೆಗಳು ಮಂಜೂರಾಗಿದ್ದರೆ, ಇದರಲ್ಲಿ 2723 ಹುದ್ದೆಗಳು ಖಾಲಿ ಉಳಿದಿವೆ. ಪ್ರಸ್ತುತ ಎಲ್ಲ ವಿವಿಗಳಲ್ಲಿ ಕಾಯಂ ಕಾರ್ಯನಿರ್ವಹಿಸುವವರಿಗಿಂತ ಖಾಲಿ ಹುದ್ದೆಗಳ ಹೆಚ್ಚಿವೆ. ಈ ಹಿಂದೆ ನೇಮಕಗೊಂಡವರೂ ಸಹ ನಿವೃತ್ತಿಯಾಗಿದ್ದು ಕೆಲವರು ಮಾತ್ರ ಉಳಿದಿದ್ದು, ಇವರೂ ಕೆಲದೇ ವರ್ಷಗಳಲ್ಲಿ ನಿವೃತ್ತಿಯಾಗಲಿದ್ದಾರೆ.

ಸರ್ಕಾರ ಉನ್ನತ ಶಿಕ್ಷಣ ಸಚಿವರು ಖಾಯಂ ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳಲು ಮನಸ್ಸು ಮಾಡುತ್ತಿಲ್ಲ.

ಇನ್ನೂ ಬೋಧಕೇತರ ಹುದ್ದೆಗಳಿಗೂ ಇದೆ ಪರಿಸ್ಥಿತಿ 

ಬೋಧಕೇತರ ಹುದ್ದೆಗಳೂ ಹೆಚ್ಚು ಖಾಲಿ

ಬೋಧಕರನ ಪರಿಸ್ಥಿತಿ ಒಂದೆಡೆಯಾದರೆ ಇನ್ನು ಬೋಧಕೇತರ ಹುದ್ದೆಗಳೂ ಸಹ ಅತಿ ಹೆಚ್ಚು ಖಾಲಿಯಿವೆ. ರಾಜ್ಯದ 32 ವಿವಿಗಳಲ್ಲಿ ಬೋಧಕೇತರ ಹುದ್ದೆಗಳು 9317 ಮಂಜೂರಾಗಿದ್ದರೆ ಇದರಲ್ಲಿ 6328 ಹುದ್ದೆಗಳು ಖಾಲಿಯಿವೆ. ಇದರಿಂದ ವಿವಿಯಲ್ಲಿನ ವಿವಿಧ ಕೆಲಸಗಳನ್ನು ಮಾಡಲು ಸಿಬ್ಬಂದಿಯೇ ಇಲ್ಲ. ಹಲವು ಹುದ್ದೆಗಳನ್ನು ಒಬ್ಬರೇ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. *ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ ವಿಶೇಷ ಸ್ಥಾನಮಾನ ವಿಧಿ 371 J ಜಾರಿಯಾಗಿ ದಶಕ ಕಳೆದಿವೆ. ಆ ವಿಶೇಷ ಸ್ಥಾನಮಾನ 371 J ಅನ್ವಯ ಕಲ್ಯಾಣ ಕರ್ನಾಟಕ ಭಾಗದ ಯಾವುದೇ ಖಾಲಿ ಹುದ್ದೆಗಳಿಗೆ ಹಣಕಾಸು ಇಲಾಖೆಯ ಅನುಮತಿ ಬೇಕಾಗಿಲ್ಲ ಆದರೂ ಈ ನಿಯಮವನ್ನು ಸರ್ಕಾರ ಜಾರಿ ಮಾಡಿಲ್ಲ ಖಾಲಿ ಹುದ್ದೆ ಭರ್ತಿ ಯಾವಾಗ ಎಂದಾಗ ಹಣಕಾಸು ಇಲಾಖೆಯ ಕಡೆ ತೋರಿಸುವುದು ವಾಡಿಕೆಯಾಗಿದೆ. ಈಗಲಾದರೂ ವಿಶೇಷ ಸ್ಥಾನಮಾನ ಅನ್ವಯ ನಮ್ಮ ಭಾಗದ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆಗ್ರಹಿಸುತ್ತೇನೆ