ಕೇಂದ್ರ ಬಸ್ ನಿಲ್ದಾಣದಲ್ಲಿ ರಕ್ತದಾನ ಶಿಬಿರ

ಕೇಂದ್ರ ಬಸ್ ನಿಲ್ದಾಣದಲ್ಲಿ ರಕ್ತದಾನ ಶಿಬಿರ

ಕೇಂದ್ರ ಬಸ್ ನಿಲ್ದಾಣದಲ್ಲಿ ರಕ್ತದಾನ ಶಿಬಿರ

ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ವಿಭಾಗ - 1 ಮತ್ತು 2 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘಟನೆಗಳ ಜಂಟಿ ಸಮನ್ವಯ ಸಮಿತಿ ವತಿಯಿಂದ.

ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ 68ನೇ ಮಹಾ ಪರಿನಿರ್ವಾಣ ದಿನದ ಪ್ರಯುಕ್ತವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ ರಾಚಪ್ಪ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

68ನೇ ಮಹಾ ಪರಿನಿರ್ವಾಣ ದಿನದಂದು ಡಾ. ಮಮತಾ ವಿ. ಪಾಟೀಲ್ ರಕ್ತನಿಧಿ ಕೇಂದ್ರ ಜೀಮ್ಸ್ ಆಸ್ಪತ್ರೆ ಕಲಬುರ್ಗಿ ರವರ ನೇತೃತ್ವದಲ್ಲಿ ಬಸ್ ಚಾಲಕರು ಮತ್ತು ನಿರ್ವಾಹಕರು ಸೇರಿದಂತೆ ಅನೇಕ ಜನರು ರಕ್ತದಾನ ಮಾಡಿದರು.

ರಕ್ತದಾನ ಮಾಡಿದ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ದತ್ತು ಪಾಟೀಲ್ ರವರ ನೇತೃತ್ವದಲ್ಲಿ ಹಣ್ಣು ವಿತರಣೆ ಮಾಡಿದರು. 

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿಗಳಾದ ಗಂಗಾಧರ ಜಿ ವಿಭಾಗ 2 ಕಲಬುರ್ಗಿ, ಮುಖ್ಯ ಸಂಚಾರ ವ್ಯವಸ್ಥಾಪಕರಾದ ವಿ. ಎಚ್. ಸಂತೋಷ್, ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಸಹಾಯಕ ಆಡಳಿತ ಅಧಿಕಾರಿಗಳಾದ ರಾಜಕುಮಾರ್ ಯಕ್ಕಂಚಿ, ಭಾರತೀಯ ಬೌದ್ಧ ಮಹಾಸಭಾದ ಸೂರ್ಯಕಾಂತ ನಿಂಬಾಳ್ಕರ್, ಸುನೀಲ್ ಮಾನ್ಪಡೆ, ಚಂದ್ರಕಾಂತ ಗದ್ದಗಿ, ಶಿವಶಾಂತ ಎಂ ಮುನ್ನೋಳಿ, ಮಾರುತಿ ಶಾಖಾ, ಗಣಪತಿ ಚೌರ, ಸಂಗಣ್ಣಾ ಶಾಸ್ತ್ರಿ, ಸುರೇಶ್ ಬಿಲ್ಲಾಡ್, ವಸಂತ ಗೋಡಬೊಲೆ, ಅಮೃತ ಪಿರಂಗಿ, ವಿಠ್ಠಲ ಭೀಮನ, ದೇವಿಂದ್ರ, ಶಿವಶರಣಪ್ಪಾ ಡಬರಾಬಾದಿ, ಅಜಯ್ ಕಪನೂರ, ಶ್ರೀಮಂತ ಜಮಾದಾರ್, ಸುರೇಶ ಎಸ್. ಕಾನೇಕರ್, ಸೂರ್ಯಕಾಂತ ಸಿಂಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.