ಜ. 11 ಕ್ಕೆ ಗಿರಿ ಸಿರಿ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ :..

ಜ. 11 ಕ್ಕೆ ಗಿರಿ ಸಿರಿ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ :..

ಜ. 11 ಕ್ಕೆ ಗಿರಿ ಸಿರಿ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ :.. 

ಶಹಾಬಾದ : - ಗಿರಿ ಸಿರಿ ಸಾಂಸ್ಕೃತಿ ಕಲಾ ಸಂಸ್ಥೆ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕವಿ ಗೋಷ್ಠಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಜ. 11ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮರಲಿಂಗ ಯಾದಗಿರಿ ಹೇಳಿದರು. 

ಅವರು ಮಾದ್ಯಮಗಳ ಜೊತೆ ಮಾತನಾಡಿ, ಶನಿವಾರ ಬೆಳಗ್ಗೆ 10:30ಕ್ಕೆ ನಗರದ ಶ್ರೀ ಜಗದಂಬ ಮಂದಿರದ ಸಭಾಂಗಣದಲ್ಲಿ ಜರುಗುವ ಸಮಾರಂಭದ ದಿವ್ಯ ಸಾನಿಧ್ಯವನ್ನು ತೊನಸನಹಳ್ಳಿ ಗ್ರಾಮದ ಕಾಶಿ ವಿಶ್ವನಾಥ ಮಂದಿರ ಶಿವಸಾಯಿ ಧ್ಯಾನ ಧಾಮದ ಪೂಜ್ಯಶ್ರೀ ಶರಣ ಕೋತಲಪ್ಪ ವಹಿಸಿಕೊಳ್ಳುವರು, ಸಮಾರಂಭವನ್ನು ನಗರದ ಖ್ಯಾತ ಉದ್ಯಮಿದಾರ ನರೇಂದ್ರ ವರ್ಮ ರವರು ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಪತ್ರಕರ್ತ ಲೋಹಿತ್ ಕಟ್ಟಿ ವಹಿಸಿಕೊಳ್ಳುವರು, ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ವನ್ನು ಪ್ರಾಚಾರ್ಯರಾದ ಪ್ರೊ. ಕೆಬಿ.ಬಿಲ್ಲವ ಹಾಗೂ ಪ್ರೊ. ಬಾಲರಾಜ ಮಾಚನೂರು ನೀಡುವರು, ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಮಲ್ಲಿನಾಥ ತಳವಾರ ವಹಿಸಿಕೊಳ್ಳುವರು. 

ಕವಿ ಗೋಷ್ಠಿ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ದಸಂಸ ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ, ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ. ರಾಮಕೃಷ್ಣ, ನಗರ ಪೊಲೀಸ್ ಠಾಣೆಯ ಸಿಪಿಐ ನಟರಾಜ ಲಾಡೆ, ಕದಸಂಸ ಜಿಲ್ಲಾ ಸಂಚಾಲಕ ಸುರೇಶ ಮೆಂಗನ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ, ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳುಗೋಳ್ಕರ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರಣು ಪಗಲಪುರ, ನಗರಸಭೆ ಸದಸ್ಯ ಶ್ರೀಮತಿ ಸಬೇರಾ ಬೇಗಂ, ಮಾಜಿ ಸದಸ್ಯ ಅಶೋಕ ಜಿಂಗಾಡೆ, ಅರ್ಯ ಈಡಿಗ ಸಮಾಜದ ಅಧ್ಯಕ್ಷ ಭೀಮಯ್ಯ ಗುತ್ತೇದಾರ ಹಾಗೂ ಅಶೋಕ್ ಯಾದಗಿರಿ ಉಪಸ್ಥಿತರಿರುವರು ಎಂದು ಮರಲಿಂಗ ಯಾದಗಿರಿ ತಿಳಿಸಿದರು.

ಈ ಸಂಧರ್ಭದಲ್ಲಿ ಕಾರ್ಯಕ್ರಮದ ಸಂಚಾಲಕ ಅನಿಲಕುಮಾರ ಮೈನಾಳಕರ ಇದ್ದರು.

ಶಹಾಬಾದ:-ಸುದ್ದಿ ನಾಗರಾಜ್ ದಂಡಾವತಿ