ರಾಜ್ಯ ಹೆದ್ದಾರಿ ಪಕ್ಕದಲ್ಲಿ ಮುಳ್ಳಿನ ಕಂಟಿಯಿಂದ ಸಾರ್ವಜನಿಕರಿಗೆ ತೊಂದರೆ. ವೀರಣ್ಣ ಗಂಗಾಣಿ ಆಗ್ರಹ

ರಾಜ್ಯ ಹೆದ್ದಾರಿ ಪಕ್ಕದಲ್ಲಿ ಮುಳ್ಳಿನ ಕಂಟಿಯಿಂದ ಸಾರ್ವಜನಿಕರಿಗೆ ತೊಂದರೆ. ವೀರಣ್ಣ ಗಂಗಾಣಿ ಆಗ್ರಹ

  ರಾಜ್ಯ ಹೆದ್ದಾರಿ ಪಕ್ಕದಲ್ಲಿ ಮುಳ್ಳಿನ ಕಂಟಿಯಿಂದ ಸಾರ್ವಜನಿಕರಿಗೆ ತೊಂದರೆ. ವೀರಣ್ಣ ಗಂಗಾಣಿ ಆಗ್ರಹ 

ಚಿಂಚೋಳಿ : ತಾಲೂಕಿನ ರಾಜ್ಯ ಹೆದ್ದಾರಿ 32 ರ ಸುಲೇಪೇಟ, ಕೋಡ್ಲಿ ರಟಕಲ್ ಹಾಗೂ ಇನ್ನಿತರ ಮಾರ್ಗಗಳ ಮುಖ್ಯ ರಸ್ತೆಗಳ ಎರಡು ಬದಿಗೆ ಮುಳ್ಳಿನ ಕಂಟಿಗಳು ಎತ್ತರಕ್ಕೆ ಬೆಳೆದು ಕೆಳಗೆ ಬಾಗಿಕೊಂಡಿವೆ. ಇದ್ದರಿಂದ ರಸ್ತೆಯ ವಾಹನ ಸವಾರರಿಗೆ ಪೂಟ್ ಪಾತ್ ಪಾದಚಾರಿಗಳಿಗೆ ಓಡಾಡುವುದಕ್ಕೆ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳು ಇತ್ತ ಗಮನ ಹರಿಸಿ, ಜಂಗಲ ಕಟ್ಟಿಂಗ್ ಮಾಡಿಸಿ ಸಾರ್ವಜನಿಕರಿಗೆ ಆಗುತ್ತಿರುವ ಅನಾಹುತ ಮತ್ತು ತೊಂದರೆಗಳನ್ನು ತಪ್ಪಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸೇನೆ ಹಾಗೂ ರೈತ ಸಂಘದ ತಾಲೂಕ ಅಧ್ಯಕ್ಷ ವೀರಣ್ಣ ಗಂಗಾಣಿ ಅವರು ಇಲಾಖೆಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಲೋಕೋಪಯೋಗಿ ಇಲಾಖೆ ಸಂಬಂಧಿಸಿದ ಅಧಿಕಾರಿಗಳ ದಿವ್ಯ ಕರ್ತವ್ಯ ನಿರ್ಲಕ್ಷದಿಂದಾಗಿ ತಾಲೂಕಿನ ಎಲ್ಲಾ ರಾಜ್ಯ ಮತ್ತು ಗ್ರಾಮಗಳಿಗೆ ತೆರೆಳುವ ಮುಖ್ಯ ರಸ್ತೆಗಳು ಮುಳ್ಳಿನ ಕಂಟಿಗಳು ಬೆಳೆದು, ನೆಲಕ್ಕೆ ಬಾಗಿಕೊಂಡಿದರಿಂದ ರಸ್ತೆ ಬದಿಗೆ ತೆರೆಳುವ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಮುಂದಿನ ರಸ್ತೆ ಹಾಗೂ ವಾಹನಗಳು ಕಾಣದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಗಳ ಪೂಟ್ ಪಾತ್ (ಸೈಡ್ ಸೋಲ್ಡರ್ ) ರಸ್ತೆಯ ಮಣ್ಣು ಕೂಡ ಡಾಂಬರಿಕರಣ ರಸ್ತೆಗಿಂತ ಕೆಳಗೆ ಕುಸಿದಿದ್ದರಿಂದ ದ್ವಿ ಚಕ್ರ ವಾಹನ ಸವಾರರು ಹೆದ್ದಾರಿ ರಸ್ತೆಯಿಂದ ಕೆಳಗೆ ಇಳಿಸಲು ಮತ್ತು ಮೇಲೆ ತೆಗೆದುಕೊಳ್ಳಲು ಹೋಗಿ ವಾಹನಗಳು ಸ್ಕಿಡ್ ಆಗಿ ವಾಹನಗಳು ಕೆಳಗೆ ಉರುಳಿ ಮೈ ಕೈಗೆ ಗಾಯಾಗಳು ಮಾಡಿಕೊಂಡಿರುವುದು ಕಂಡಿವೆ. ಹೀಗಾಗಿ ಚಿಂಚೋಳಿ ಮತ್ತು ಕಾಳಗಿ ತಾಳೂಕಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡಲೆ ಸಾರ್ವಜನಕರಿಗೆ ತೊಂದರೆಗೆ ಒಳಪಡಿಸುತ್ತಿರುವ ಜಂಗಲ್ ಕಟ್ಟಿಂಗ್ ಮತ್ತು ರಸ್ತೆ ಬದಿಯ ಸೈಡ್ ಸೋಲ್ಡರ್ ನಿರ್ಮಾಣ ಮಾಡಿಸಿ, ನಿರ್ಭಯವಾಗಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಗಂಗಾಣಿ ಅವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.