ಕಲಿಕಾ ಹಬ್ಬ ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ :.. ಬಿರಾದರ.
ಕಲಿಕಾ ಹಬ್ಬ ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ :ಬಿರಾದರ.
ನಾಗರಾಜ್ ದಂಡಾವತಿ ವರದಿ ಶಹಾಬಾದ : - ಶಹಾಬಾದ ಹಾಗೂ ಹೊನಗುಂಟ ಕ್ಲಸ್ಟರ್ ನ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಗಂಜ್ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಶಿಧರ ಬಿರಾದರ ಉದ್ಘಾಟಿಸಿ ಮಾತನಾಡಿ, ಕಲಿಕಾ ಹಬ್ಬವು ಮಕ್ಕಳಲ್ಲಿರುವ ವಿವಿಧ ಬಗೆಯ ಪ್ರತಿಭೆಯ ಸಾಮರ್ಥ್ಯವನ್ನು ಪ್ರಸ್ತುತಪಡಿಸಲು ಅವಕಾಶ ಮಾಡಿ ಕೊಡುತ್ತದೆ, ಜೊತೆಗೆ ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುವಂತೆ ಮಾಡುತ್ತದೆ, ಕಲಿಕಾ ಹಬ್ಬ ಚಟುವಟಿಕೆ ಆಧಾರಿತ ವಾಗಿದೆ, ಇದರಿಂದ ಹೊಸ ಹೊಸ ಬಗೆಯ ಪತ್ಯೇತರ ಚಟುವಟಿಕೆಯನ್ನು ಮಗು ಕಲಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವಪುತ್ರ ಕರ್ಣಿಕ್ ಮಾತನಾಡಿ, ಪಠ್ಯದ ಜೊತೆಗೆ ಪಠೇತರ ಚಟುವಟಿಕೆ ಆಧಾರಿತ ಕಲೆಯನ್ನು ಮಕ್ಕಳಲ್ಲಿ ತುಂಬಿದರೆ ಜೀವನ ದಲ್ಲಿ ಸ್ವಾವಲಂಬಿಯಾಗಿ ಬದುಕಲು ಕಲಿಸಿಕೊಟ್ಟಾಂತಾಗುತ್ತದೆ ಎಂದರು.
ಸಿಆರಪಿ ಸತ್ಯನಾರಾಯಣ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಜ್ ಶಾಲೆಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾ ಪ್ರಿಯದರ್ಶಿನಿ, ಶಿವಲಿಂಗಪ್ಪ ಹೆಬ್ಬಾಳ್ಕರ, ಜಾಫರ ಪಟೇಲ, ಹಾಗೂ ಇನ್ನಿತರದ ಕಾರ್ಯಕ್ರಮದಲ್ಲಿ ಉಪಸ್ಥಿರಿದರು.
ಶಹಾಬಾದ ಹಾಗೂ ಹೊನಗುಂಟ ಶಾಲೆಯ ೨೦೦ ವಿಧ್ಯಾರ್ಥಿಗಳು ಹಾಗೂ ೧೦೦ ಜನ ಶಿಕ್ಷಕ ವೃಂದದವರು ಭಾಗವಹಿಸಿದ್ದರು.
