ಕ್ಷಯ್ ರೋಗ ಮುಕ್ತ ಭಾರತ ಕಾರ್ಯಕ್ರಮಕ್ಕೆ ಗ್ರಾ ಪಂ ಅಧ್ಯಕ್ಷ ಕಾಶಿನಾಥ್ ಜೀರಿಗೆ ಚಾಲನೆ ನೀಡಿದರು.

ಕ್ಷಯ್ ರೋಗ ಮುಕ್ತ ಭಾರತ ಕಾರ್ಯಕ್ರಮಕ್ಕೆ ಗ್ರಾ ಪಂ ಅಧ್ಯಕ್ಷ ಕಾಶಿನಾಥ್  ಜೀರಿಗೆ  ಚಾಲನೆ ನೀಡಿದರು.

ಕ್ಷಯ್ ರೋಗ ಮುಕ್ತ ಭಾರತ ಕಾರ್ಯಕ್ರಮಕ್ಕೆ ಗ್ರಾ ಪಂ ಅಧ್ಯಕ್ಷ ಕಾಶಿನಾಥ್ ಜೀರಿಗೆ ಚಾಲನೆ ನೀಡಿದರು.

 ಕಮಲನಗರ.:ತಾಲೂಕಿನ ಠಾಣಾ ಕುಶ್ನೂರು ಗ್ರಾಮದಲ್ಲಿ ಮಂಗಳವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂರು ದಿನ ಕ್ಷಯ್ ರೋಗ ಮುಕ್ತ ಭಾರತ ಕಾರ್ಯಕ್ರಮಕ್ಕೆ ಗ್ರಾ ಪಂ ಅಧ್ಯಕ್ಷರಾದ ಕಾಶಿನಾಥ್ ಜೀರಿಗೆ ಚಾಲನೆ ನೀಡಿದರು.

ಅವರು ಮಾತನಾಡಿದ 2025 ರ ಅಂತ್ಯದೊಳಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಕ್ಷಯ್ ರೋಗ ಮುಕ್ತ ಭಾರತ್ ಸಂಕಲ್ಪ ವಾಗಬೇಕು, ಎಂದು ಉದ್ದೇಶವಾಗಿದೆ.

ಮತ್ತು ಕ್ಷಯ್ ರೋಗ ಮುಕ್ತ ಭಾರತ ಉದ್ದೇಶ ಧೂಮಪಾನ ಮತ್ತು ತಂಬಾಕು ಸೇವನೆ ಮಾಡಿ ತಮ್ಮ ಆರೋಗ್ಯವನ್ನು ಕೆಡಿಸುಕೊಳ್ಳುವುದನ್ನು ತಡೆಗಟ್ಟಲು ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಯಾವ ಆಸ್ಪತ್ರೆಯಲ್ಲಿ ಸಾಮಗ್ರಿಗಳು ಇಲ್ಲವೋ ಅಂತ ಆಸ್ಪತ್ರೆ ಗಳಿಗೆ ಸಾಮಗ್ರಿಗಳ ಜೊತೆಗೆ ಸಿಬ್ಬಂದಿಗಳನ್ನು ವ್ಯವಸ್ಥೆ ಮಾಡುತ್ತಿದ್ದಾರೆ. 

ಅದಕ್ಕಾಗಿ ಸಾರ್ವಜನಿಕರು ದಮ್ಮು ಮತ್ತು ಕೆಮ್ಮು ಕಂಡಲ್ಲಿ ಅಂತಾರೋಗಿಗಳು ತಮ್ಮ ಸಮೀಪದ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಕೊಳ್ಳಬೇಕು. ಅದರ ಸೌಲಭ್ಯವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

 ಠಾಣಾ ಕುಶ್ನೂರ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 70 ಜನರಿಗೆ ಹ್ಯಾಂಡ್ ಹೆಲ್ಡ್ ಎಕ್ಸ್ ರೇ ಮತ್ತು ಇಗ್ರಾ ಮುಖಾಂತರ ಸಕ್ಕರೆ ಕಾಯಿಲೆ ಹಾಗೂ ರಕ್ತದ ಒತ್ತಡ ರೋಗಿಗಳನ್ನ ತಪಾಸಣೆ ಮಾಡಲಾಯಿತು.

ಬಾಕ್ಸ ಮ್ಯಾಟರ್.

ಕ್ಷಯ್ ರೋಗದ ಲಕ್ಷಣಗಳು...

 1)ಎರಡು ವಾರಗಳಿಗೂ ಮೇಲ್ಪಟ್ಟ ಕೆಮ್ಮು ಸಾಮಾನ್ಯ ಲಕ್ಷಣವಾಗಿದೆ.

 2)ಸಂಜೆ ವೇಳೆ ಜ್ವರ ಬರುವುದು 

 3)ಎದೆ ನೋವು ಕೆಲವೊಮ್ಮೆ ಕಫದ ಜೊತೆ ರಕ್ತ ಬಿಡುವುದು 

 4)ಹಸಿವಾಗದಿರುವುದು ತೂಕ ಕಡಿಮೆ ಯಾಗುವುದು.

 5)ಮಕ್ಕಳಲ್ಲಿ ಸತತವಾಗಿ ತೂಕ ಕಡಿಮೆಯಾಗುವುದು ಅಥವಾ ಹೆಚ್ಚದೇ ಇರುವುದು.

 ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯರಾದ ಬಂಡೆಪ್ಪ ನಾಗುರೆ ಸಿಬ್ಬಂದಿಗಳಾದ ಜಿಲ್ಲಾ ಮೇಲ್ವಿಚಾರಕರು ಶಿವಕುಮಾರ ಸ್ವಾಮಿ, ಶಿವಕುಮಾರ್ ವಗ್ಗೆ, ಶರದ್ ಪಾಟೀಲ್, ಸೋಮಶೇಖರ್, ಭಗವಾನ್, ಕೇದಾರನಾಥ್, ಸತೀಶ್ ಬಿರಾದರ್, ವಿಜಯಲಕ್ಷ್ಮಿ, ಅರ್ಚನಾ, ಝರಿನ, ಸುಧಾರಾಣಿ, ರಾಕೇಶ್, ಹಾಗೂ ದಿನೇಶ್ ಗ್ರಾಮಸ್ಥರು ಉಪಸ್ಥಿತರಿದ್ದರು.