ವಚನ ಸಾಹಿತ್ಯ ರಕ್ಷಣೆ ನಮ್ಮೆಲ್ಲರ ಹೂಣೆ: ಶಾಸಕ ಅಲ್ಲಮಪ್ರಭು ಪಾಟೀಲ್.

ವಚನ ಸಾಹಿತ್ಯ ರಕ್ಷಣೆ ನಮ್ಮೆಲ್ಲರ ಹೂಣೆ: ಶಾಸಕ ಅಲ್ಲಮಪ್ರಭು ಪಾಟೀಲ್.

ವಚನ ಸಾಹಿತ್ಯ ರಕ್ಷಣೆ ನಮ್ಮೆಲ್ಲರ ಹೂಣೆ: ಶಾಸಕ ಅಲ್ಲಮಪ್ರಭು ಪಾಟೀಲ್.

ಕಲಬುರಗಿ: ಫೆ.1 (ಕಲ್ಯಾಣ ಕಹಳೆ ವಾರ್ತೆ)- ಸಮಾಜದ ಅನೇಕ ಜ್ವಲಂತ ಸಮಸ್ಯೆಗಳಿಗೆ ವಚನ ಸಾಹಿತ್ಯವು ದಾರಿದೀಪವಾಗಿದೆ. ಇಂತಹ ಅಮೂಲ್ಯವಾದ ವಚನ ಸಾಹಿತ್ಯವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವಾಗಬೇಕು ಎಂದು ದಕ್ಷಿಣ ಮತ್ತು ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

ರವಿವಾರದಂದು ಡಾ. ಎಸ್. ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರ್ಗಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರ್ಗಿ ಹಾಗೂ ಶ್ರೀ ಮಡಿವಾಳ ಮಾಚಿದೇವರ ಜಯಂತೋತ್ಸವ ಸಮಿತಿ ಕಲ್ಬುರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

12ನೇ ಶತಮಾನದಲ್ಲಿ ವಚನ ಸಾಹಿತ್ಯದ ರಕ್ಷಣೆಗೆ ಮಡಿವಾಳ ಮಾಚಿದೇವ ನೀಡಿದ ಕೊಡುಗೆ ಅಪಾರ. ಕಾಯಕವೇ ಕೈಲಾಸ ಎಂದು ನಂಬಿದ್ದ ಅವರು, ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾಯಕದ ಮೂಲಕವೇ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ಅಕ್ಕ ಮಹಾದೇವಿ ಆಶ್ರಮದ ತಾಯಿ ಪೂಜ್ಯ ಪ್ರಭುಶ್ರೀ ತಾಯಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿ, ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ, ಹೂಗಾರ ಮಾದಯ್ಯ ಸೇರಿದಂತೆ ಹನ್ನೆರಡನೇ ಶತಮಾನದ ಎಲ್ಲಾ ಶರಣರು ತಮ್ಮ ತಮ್ಮ ಕಾಯಕದ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸಿದ್ದಾರೆ. ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಬುದ್ಧ, ಬಸವಣ್ಣನವರಿಂದ ಹಿಡಿದು ಡಾ. ಬಿ.ಆರ್. ಅಂಬೇಡ್ಕರ್ ವರೆಗೆ ಎಲ್ಲರೂ ಸಮಾನತೆಗಾಗಿ ಹೋರಾಡಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆಲ್ಲರಿಗೂ ಹಕ್ಕುಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಜಯಂತಿ ಎನ್ನುವುದು ಕೇವಲ ಆಚರಣೆಯಾಗಬಾರದು, ಮಹಾಪುರುಷರ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕು ಎಂದು  ಹೇಳಿದರು.

ಮಾಡಿವಾಳ ಮಾಚಿದೇವರು 12 ನೇ ಶತಮಾನದ ಅನೇಕ ಶರಣರು ತಮ್ಮ ಕಾಯಕದ ಮೂಲಕ ಗುರುತಿಸಿಕೊಂಡಿದ್ದರು ಎಂದರು.

 ಪ್ರಾಧ್ಯಾಪಕರು ಪಿಡಿಎ ಇಂಜಿನಿಯರಿಂಗ್ ಕಾಲೇಜ್ ಶ್ರೀ ಸಂಜಯ್ ಮಾಕಲ್ ವಿಶೇಷ ಉಪನ್ಯಾಸ ನೀಡಿದರು. 

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಜಗದೀಶ್ವರಿ  ನಾಸಿ ಅವರು ಸ್ವಾಗತಿಸಿದರು.

ಶ್ರೀನಿವಾಸ ಸರಡಗಿ, ತಾಜ ಸುಲ್ತಾನಪುರ ಹಾಗೂ ಕುರಿಕೋಟ ಪೂಜ್ಯ ಷ. ಬ್ರ ಡಾ: ರೇವಣಸಿದ್ದ ಶಿವಾಚಾರ್ಯರು ದಿವ್ಯ ಸಾನ್ನಧ್ಯ ವಹಿಸಿ ಮಾತನಾಡಿದರು. 

 ಕಾರ್ಯಕ್ರಮದ ಮುನ್ನ ಬೆಳಿಗ್ಗೆ 8 ಗಂಟೆಗೆ ಹುಮ್ನಾಬಾದ್ ವರ್ತುಲ ರಸ್ತೆಯಲ್ಲಿರುವ ಮಾಚಿದೇವರ ವೃತದಲ್ಲಿ ಕತೃಗದ್ದಿಗೆ ಪೂಜೆಯನ್ನು  ಶ್ರೀ ನಿವಾಸ ಸರಡಗಿಯ ಶ್ರೀ. ಷ. ಬ್ರ ಡಾ: ರೇವಣಸಿದ್ದ ಶಿವಾಚಾರ್ಯರು ದಿವ್ಯ ಸಾನಿಧ್ಯದಲ್ಲಿ ನೆರವೇರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯಕುಮಾರ್ ಪಾಟೀಲ್ ತೆಗಲತಿಪ್ಪಿ ಮಡಿವಾಳ ಸಮಾಜ ಜಿಲ್ಲಾದ್ಯಕ್ಷರಾದ ರವಿಕುಮಾರ ಶಹಾಪೂರಕರ್ ಗೌರವಾಧ್ಯಕ್ಷರು ಶಿವಪುತ್ರ ಮಲ್ಲಾಭಾಕರ್ ಕಾರ್ಯದರ್ಶಿ ಶಾಂತಕುಮಾರ್ ಕಣ್ಣೂರ್ ಉಪಾಧ್ಯಕ್ಷರು ಚಂದ್ರಶೇಖರ್ ಲಿಂಗಪ್ಪ ಮಡಿವಾಳ್ ಸಂಜು ಮಡಿವಾಳ ಗಂಗಾಧರ್ ಮಡಿವಾಳ ಸೂರ್ಯಕಾಂತ್ ಮಡಿವಾಳ್ ಸೇರಿದಂತೆ ಅನೇಕ ಸಮಾಜ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.