ಶಿವಯೋಗಿ ಸಿದ್ದರಾಮೇಶ್ವರ ಜಯಂತಿ : ಪೂರ್ವ ಭಾವಿ ಸಭೆ

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ : ಪೂರ್ವ ಭಾವಿ ಸಭೆ

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ : ಪೂರ್ವ ಭಾವಿ ಸಭೆ :.. 

ಶಹಾಬಾದ : - ನಗರದ ತಾಲ್ಲೂಕ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಜ.15 ಬುಧವಾರ ನಡೆಯಲಿರುವ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯ ಪೂರ್ವಭಾವಿ ಸಭೆ ತಹಸೀಲ್ದಾರ್ ಜಗದೀಶ ಚೌರ ರವರ ಅಧ್ಯಕ್ಷತೆಯಲ್ಲಿ ಜ. 8 ರಂದು ಬುಧವಾರ ನಡೆಯಿತು.

ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್, ಆದರ್ಶ ಪುರುಷರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಸರ್ಕಾರವು ಸಾರ್ವಜನಿಕರ ಹಾಗೂ ಸಮುದಾಯಗಳ ಸಹಭಾಗಿತ್ವದಲ್ಲಿ ಜಯಂತಿಗಳನ್ನು ಆಚರಿಸುತ್ತಿದೆ.

ಸಭಾಂಗಣದಲ್ಲಿ ಸಭೆ ನಡೆಸಿ ಪದ್ದತಿಯಂತೆ ತಾಲ್ಲೂಕು ಆಡಳಿತ ಜ.15 ರಂದು ಸಾಕೇತಿಕವಾಗಿ ತಹಶೀಲ ಕಾರ್ಯಾಲಯದಲ್ಲಿ ಹಾಗೂ ತಾಲ್ಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಿಸಲಾಗುವದು.

ಮುಂದಿನ ದಿನಗಳಲ್ಲಿ ಸಮುದಾಯದ ಸಹಭಾಗಿತ್ವದಲಿ ನಗರದಲ್ಲಿ ಅದ್ದೂರಿಯಾಗಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಮಾಡುವದಾಗಿ ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ತಾಲೂಕು ಬೋವಿವಡ್ಡರ ಸಂಘ ಹಾಗೂ ಸಾರ್ವಜನಿಕರ ಸಲಹೆ, ಸೂಚನೆಗಳನ್ನು ಪಡೆಯಲಾಯಿತು.

ಪೂರ್ವಭಾವಿ ಸಭೆಯಲ್ಲಿ ಗ್ರೇಡ್ 2 ತಹಶೀಲ್ದಾರ್ ಗುರುರಾಜ ಸಂಗಾವಿ, ನಗರ ಸಭೆ ಪೌರಾಯುಕ್ತ ಡಾ. ಕೆ.ಗುರುಲಿಂಗಪ್ಪ, ಸಿಡಿಪಿಒ ವಿಜಯಲಕ್ಷ್ಮಿ ಹೇರೂರ, ತಾ. ಪಂ ಯ ಈರಣ್ಣ ಸಾತಖೇಡ, ವಸತಿ ನಿಲಯದ ಮೇಲ್ವಿಚಾರಕ ರವಿ ಕುಮಾರ ಮುತ್ತಗಿ, ಜೆಸ್ಕಾಂ ನ ಮಹೇಶಕುಮಾರ, ಶಿಕ್ಷಣ ಇಲಾಖೆಯ ಸಿಆರಪಿ ಮರೇಪ್ಪ ಭಜಂತ್ರಿ ಸೇರಿದಂತೆ ಬೋವಿವಡ್ಡರ ಸಮಾಜದ ಅಧ್ಯಕ್ಷ ರಾಜು ಮೇಸ್ತ್ರಿ, ಕಳ್ಳೋಳಿ ಕುಸಾಳೆ, ಕನಕಪ್ಪ ದಂಡಗುಳ, ಸಂಜಯ ವಿಠಕರ, ಶ್ರೀನಿವಾಸ ನೇದಲಗಿ, ನಾಗರಾಜ ಕುಸಾಳೆ, ಪರಶುರಾಮ, ರಾಮಸ್ವಾಮಿ ದೇವಕರ, ಮೋತಿಲಾಲ ಪವಾರ ಸೇರಿದಂತೆ ಸಮಾಜದ ಅನೇಕ ಮುಖಂಡರು ಇದ್ದರು.

ಶಹಾಬಾದ:-ಸುದ್ದಿ ನಾಗರಾಜ್ ದಂಡಾವತಿ