ನೌಕರರ ಆಸ್ತಿ ಸಾರ್ವಜನಿಕ ಪೋರ್ಟಲ್'ನಲ್ಲಿ ಬಹಿರಂಗಗೊಳಿಬಾರದೆಂದು ನೌಕರ ಸಂಘದ ಅಧ್ಯಕ್ಷ ರಮೇಶ್ ಸಂಗಾ ವತ್ತಾಯ
ನೌಕರರ ಆಸ್ತಿ ಸಾರ್ವಜನಿಕ ಪೋರ್ಟಲ್'ನಲ್ಲಿ ಬಹಿರಂಗಗೊಳಿಬಾರದೆಂದು ನೌಕರ ಸಂಘದ ಅಧ್ಯಕ್ಷ ರಮೇಶ್ ಸಂಗಾ ವತ್ತಾಯ
ಬೆಂಗಳೂರು : ಸರ್ಕಾರಿ ಅಧಿಕಾರಿ/ನೌಕರರ ಆಸ್ತಿ ಹೊಣೆಗಾರಿಕೆ ವಿವರವನ್ನು ಸಾರ್ವಜನಿಕ ಪೋರ್ಟಲ್'ನಲ್ಲಿ ಅಪ್ಲೋಡ್ ಮಾಡುವ ಮೂಲಕ ಬಹಿರಂಗಗೊಳಿಸಬೇಕು ಎಂದು ಕರ್ನಾಟಕ ಲೋಕಾಯುಕ್ತ ಕಚೇರಿಯಿಂದ ಮಾನ್ಯ ಮುಖ್ಯ ಕಾರ್ಯದರ್ಶಿಯವರಿಗೆ ಬರೆಯಲಾಗಿದ್ದ ಪತ್ರದ ಕೋರಿರುವಂತೆ ಲೋಕಾಯುಕ್ತದವರ ಬೇಡಿಕೆಯನ್ನು ಪರಿಗಣಿಸಬಾರದೆಂದು ಸಚಿವಾಲಯ ನೌಕರ ಸಂಘದ ಅಧ್ಯಕ್ಷರಾದ ಶ್ರೀ ರಮೇಶ್ ಸಂಗಾ ಅವರ ನೇತೃತ್ವದ ಮಾನ್ಯ ಮುಖ್ಯ ಕಾರ್ಯದರ್ಶಿಯವರಾದ ಶಾಲಿನಿ ರಜನೀಶ್ ಮೇಡಂ ಅವರಿಗೆ ಮನವಿ ಸಲ್ಲಿಸಿದರು
ಕೇವಲ ಶೇ. 1 ಕ್ಕಿಂತಲೂ ಕಡಿಮೆಯಿರುವ ಆರೋಪಿತ ಅಧಿಕಾರಿ/ನೌಕಾರರಿಗಾಗಿ ಎಲ್ಲ ನೌಕರರ ಆಸ್ತಿ ಹೊಣೆಗಾರಿಕೆ ವಿವರಗಳನ್ನು ಬಹಿರಂಗಗೊಳಿಸಿದರೆ, ಪ್ರಾಮಾಣಿಕ ಮತ್ತು ಮುಗ್ಧ ನೌಕರರು ಅನಾವಶ್ಯಕ ಕಿರುಕುಳ ಮತ್ತು ತೊಂದರೆಗೆ ಒಳಗಾಗಬಹುದು ಎಂದು ಮಾನ್ಯ ಮುಖ್ಯ ಕಾರ್ಯದರ್ಶಿಯವರಿಗೆ ತಿಳಿಸಿದರು .
ಭ್ರಷ್ಟಾಚಾರದ ಆರೋಪ ಇರುವ ಸರ್ಕಾರಿ ಅಧಿಕಾರಿ/ನೌಕರನ ಆಸ್ತಿ ವಿವರ ಪಡೆದುಕೊಳ್ಳಲು ಮಾತ್ರ ಲೋಕಾಯುಕ್ತಕ್ಕೆ ಈಗಾಗಲೇ ಅಧಿಕಾರವಿದ್ದು, ಅದನ್ನು ಮುಂದುವರೆಸುವಂತೆ ಹಾಗೂ ಲೋಕಾಯುಕ್ತ ಯಾವುದೇ ಆರೋಪಿತ ಅಧಿಕಾರಿ/ನೌಕರನ ವಿವರ ಕೇಳಿದ ಸಂದರ್ಭದಲ್ಲಿ ಸಂಬಂಧಿತ ಇಲಾಖಾ ಮುಖ್ಯಸ್ಥರು ಅಥವಾ ಪ್ರಾಧಿಕಾರ ಯಾವುದೇ ಸಬೂಬು ಹೇಳದೇ ಮತ್ತು ಕಾಲ ವಿಳಂಬವಿಲ್ಲದೆ ಸದರಿ ಮಾಹಿತಿಯನ್ನು ಒದಗಿಸಬೇಕೆಂದು ಮತ್ತೊಮ್ಮೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು
ಆದರೆ ಸಚಿವಾಲಯದ ಅಧಿಕಾರಿ/ನೌಕರರ ಆಸ್ತಿ ವಿವರಗಳ ಮಾಹಿತಿಯ ಬಹಿರಂಗವನ್ನು ಸಚಿವಾಲಯ ನೌಕರರ ಸಂಘವು ವಿರೋಧಿಸುತ್ತೇವೆ. ಅನಿವಾರ್ಯವಾದರೆ ಈ ಬಗ್ಗೆ ಪ್ರತಿಭಟಿಸುವುದಾಗಿಯೂ ಮಾನ್ಯ ಮುಖ್ಯಕಾರ್ಯದರ್ಶಿಯವರಿಗೆ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಅಧ್ಯಕ್ಷರು ಪದಾಧಿಕಾರಿಗಳು ತಿಳಿಸಿದ್ದಾರೆ.