ಖರ್ಗೆ ಯವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗೆ ಇಲ್ಲ :..
ಖರ್ಗೆ ಯವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗೆ ಇಲ್ಲ :..
ಶಹಾಬಾದ : - ಬೀದರ ಜಿಲ್ಲೆಯ ಗುತ್ತಿಗೆದಾರ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಸಚಿನ್ ಹಂಚಿನಾಳ ಡೆತ್ ನೋಟ್ ನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರ ಹೆಸರು ಎಲ್ಲಿಯಾದರೂ ಬರೆದಿದೇಯಾ, ಹಾಗೂ ಖರ್ಗೆ ಯವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ ತಿಳಿಸಿದ್ದಾರೆ.
ಅವರು ಮಾಧ್ಯಮದ ಜೊತೆ ಮಾತನಾಡಿ,
ಬಿಜೆಪಿ ನಾಯಕರಿಗೆ ನಾಚಿಕೆ ಬರಬೇಕು, ಸುಖ ಸುಮ್ಮನೆ ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆಯವರನ್ನು ರಾಜೀನಾಮೆ ನೀಡುವಂತೆ ಅಗ್ರಿಸುತ್ತಿದ್ದಾರೆ, ನಿಮ್ಮದೇ ಪಕ್ಷದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರನ್ನು ನಿಂದಿಸಿದ್ದಕ್ಕೆ ದೇಶದ ತುಂಬೆಲ್ಲ ಪ್ರತಿಭಟನೆ, ಬಂದಗಳು ನಡೆದರೂ ರಾಜೀನಾಮಿ ಕೊಟ್ಟಿಲ್ಲ, ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಹಿಳಾ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನಿಸಿ ಲಾಕಪ್ ಗೆ ಹೋದವರು ರಾಜೀನಾಮೆ ನೀಡಿಲ್ಲ, ಯಾವುದಕ್ಕೂ ಸಂಬಂಧ ಸೂತ್ರ ಇಲ್ಲದ ಸಚಿವ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ಕೇಳುವುದು ಬಿಜೆಪಿಯವರಿಗೆ ನಾಚಿಕೆ ಬರಬೇಕು ಎಂದು ಸಿದ್ದುಗೌಡ ಅಫಜಲಪುರಕರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.
ಶಹಾಬಾದ:-ಸುದ್ದಿ ನಾಗರಾಜ್ ದಂಡಾವತಿ