ಹೈಕೋರ್ಟ್ ತೀರ್ಪು ಸತ್ಯಕ್ಕೆ ಸಂದ ಜಯ ಶಶೀಲ್ ಜಿ ನಮೋಶಿ

ಹೈಕೋರ್ಟ್ ತೀರ್ಪು ಸತ್ಯಕ್ಕೆ ಸಂದ ಜಯ ಶಶೀಲ್ ಜಿ ನಮೋಶಿ

ಹೈಕೋರ್ಟ್ ತೀರ್ಪು ಸತ್ಯಕ್ಕೆ ಸಂದ ಜಯ ಶಶೀಲ್ ಜಿ ನಮೋಶಿ 

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ಟೈಫಂಡ್ ವಿಷಯದಲ್ಲಿ 2024 ರ ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲಿ ಅಂದಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಮೇಲೆ ವೈದ್ಯಕೀಯ ವಿದ್ಯಾರ್ಥಿಗಳು ಪೋಲಿಸ್ ಎಫ್ ಐ ಆರ್ ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದರು ಇದು ಚುನಾವಣೆಯಲ್ಲಿ ಅಧ್ಯಕ್ಷರ ಸೋಲಿಗೂ ಕಾರಣವಾಗಿತ್ತು. ಆದರೆ ಈ ಸೋಲನ್ನು ಅರಗಿಸಿಕೊಳ್ಳಲು ಆಗದೆ ಹಿಂದಿನ ಸಂಸ್ಥೆಯ ಅಧ್ಯಕ್ಷರ ಚಿತಾವಣೆಯ ಮೇಲೆ ಕಾಣದ ಕೈಗಳು ವಿನಾಕಾರಣ ನನ್ನ ಮೇಲೆ ಹಾಗೂ ಹಿರಿಯರು ಹಿಂದಿನ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಭೀಮಳ್ಳಿ , ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ಹಿರಿಯ ವೈದ್ಯರಾದ ಡಾ ಮಲ್ಲಿಕಾರ್ಜುನ ಭಂಡಾರ, ಡಾ ಸಾಯಿನಾಥ ಆಂದೋಲಾ, ಡಾ ಶರಣಬಸಪ್ಪ ಹರವಾಳ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದರು.ಕಾನೂನು ರೀತಿಯಲ್ಲಿ ಅನುಮತಿ ಪಡೆದು ಸಂಸ್ಥೆಯಲ್ಲಿ ಇದ್ದ ನಿಷ್ಪ್ರಯೋಜಕ ದಾಖಲೆಗಳನ್ನು ಸುಟ್ಟು ಹಾಕಿದ್ದನ್ನು ಅವುಗಳು ಮಹತ್ವದ ದಾಖಲೆಗಳೆಂದು ಸುಳ್ಳು ಆರೋಪ ಹೊರಿಸಿದ್ದ ಪ್ರಕರಣಗಳನ್ನೆಲ್ಲ ಇಂದು ಮಾನ್ಯ ಹೈಕೋರ್ಟ್ ರದ್ದು ಪಡಿಸಿ ಆದೇಶ ನೀಡಿದ್ದು ಇದು ಸತ್ಯಕ್ಕೆ ಸಂದ ಜಯವಾಗಿದೆ. ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು 

ಹಿಂದಿನ ಅಧ್ಯಕ್ಷರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ಸೋಲು ಅನುಭವಿಸಿದ ನಂತರ ಹತಾಶೆ ಗೊಂಡರು ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಹಜ ಸಂಸ್ಥೆ ಯು ಮತದಾರರ ತೀರ್ಪನ್ನು ಗೌರವಿಸಲೇಬೇಕು ಸಂಸ್ಥೆಯು ಸಮಾಜದ ಆಸ್ತೀ ಅದು ಸ್ವಂತದ್ದಲ್ಲ ಆದರೆ ಹಿಂದಿನ ಅಧ್ಯಕ್ಷರು ತಾವು ಸೋಲು ಅನುಭವಿಸಿದ ನಂತರ ಸಂಸ್ಥೆಯ ಹಿತವನ್ನು ಸಹ ಇವರು ಕಡೆಗಣಿಸಿ ಈಗೀನ ಆಡಳಿತ ಮಂಡಳಿಯು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ದಿನ ನಿತ್ಯದ ಕೆಲಸಗಳಿಗೆ ಅಡ್ಡಗಾಲು ಹಾಕುತ್ತ ಸಂಸ್ಥೆಯ ವಿರೋಧಿ ಕೆಲಸ ಮಾಡಿದರು, 2018 ರಿಂದ 2024 ವರೆಗೆ ಇವರ ಅವಧಿಯಲ್ಲಿ ಸುಮಾರು 80 ಕೋಟಿ ರೂಗಳ ಸ್ಟೈಪಂಢ್ ಹಗರಣದ ಕುರಿತು ಹಲವಾರು ವಿಧ್ಯಾರ್ಥಿಗಳು ಎಫ್ ಐ ಆರ್ ದಾಖಲಿಸಿದ್ದರು ಇವರು ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರಿದ್ದರಿಂದ ಇಲ್ಲಿಯವರೆಗೆ ಇವರ ಮೇಲೆ ಯಾವುದೇ ಕ್ರಮವಾಗಿಲ್ಲ ಇದರಲ್ಲಿ ಇವರು ಸರ್ಕಾರವನ್ನು ಸಹ ದುರುಪಯೋಗ ಪಡಿಸಿಕೊಂಡಿರುವದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಇವರು ದುರುದ್ದೇಶ ಪೂರಕವಾಗಿ 2009 ರಿಂದ 2015 ರ ಅವಧಿಯಲ್ಲಿ ಸ್ಟೈಫಂಡ್ ಹಗರಣವಾಗಿದೆ ಎಂದು ಆಧಾರ ರಹಿತವಾಗಿ ನನ್ನ ಮೇಲೆ ಹಾಗೂ ಹಿರಿಯರಾದ ಬಸವರಾಜ ಭೀಮಳ್ಳಿಯವರ ಮೇಲೆ ಹಿರಿಯ ವೈದ್ಯರ ಮೇಲೆ ದೂರು ದಾಖಲಾದಾಗ ಸುಮಾರು 15 ಜನ ಪೋಲಿಸರ್ ತಂಡ ನಮ್ಮ ಮೇಲೆ ಒಂದು ರೀತಿಯ ದಬ್ಬಾಳಿಕೆ ಮಾಡಿ ಸಂಬಂಧವಿಲ್ಲದ ಸಂಸ್ಥೆಯ ಮುಖ್ಯ ದಾಖಲೆಗಳನ್ನು ಪಡಿಸಿಕೊಂಡಿತು, ನಂತರ ದಿನ ನಿತ್ಯದ ಕೆಲಸವಾದ ಮುಖ್ಯಕಚೇರಿಯ ಕೆಲಸಗಳಿಗಿ ಇನ್ನೊಂದು ಸುಳ್ಳು ದೂರು ನೀಡಿ ದಿನ ನಿತ್ಯದ ಕೆಲಸಗಳಿಗೆ ತೊಂದರ ಮಾಡಿದರುಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ನಮ್ಮ ನಿತ್ಯದ ಕೆಲಸಗಳಿಗೆ ತೊಂದರರೆಯಾಯಿತು. ಆದರೆ ಹಿಂದಿನ ಅಧ್ಯಕ್ಷರ ಮೇಲೆ ಸ್ವತಃ ವಿಧ್ಯಾರ್ಥಿಗಳೆ ದೂರು ಕೊಟ್ಟಿದ್ದರು, 2018 ರಿಂದ 24 ರ ಅವಧಿಯವರೆಗೆ ಹಗರಣದ ದಾಖಲೆಗಳನ್ನು ಇಲಾಖೆಗೆ ಒದಗಿಸಿದ್ದರು ಪೋಲಿಸ ಇಲಾಖೆ ಯಾಕೆ ಮೌನ ವಹಿಸಿತ್ತು. ಆಧಾರ್ ರಹಿತವಾದ ಆರೋಪಕ್ಕೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿರುವುದಕ್ಕೆ ಇಂದು ಮಾನ್ಯ ಉಚ್ಛ ನ್ಯಾಯಾಲಯ ಕಪಾಳ ಮೋಕ್ಷ ಮಾಡಿದೆ ಯಾವಾಗಲೂ ಸತ್ಯಕ್ಕೆ ಗೆಲುವು ಎಂದು ಸಾರಿದೆ.

ಸಂಸ್ಥೆಯ ಅಭಿವೃದ್ಧಿಗೆ ಹಿನ್ನಡೆ ಮಾಡಲು ಯಾರೆ ಎಷ್ಟು ಪ್ರಯತ್ನಿಸಿದರೂ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೆವೆ. ಸುಳ್ಳನ್ನು ಸತ್ಯವೆಂದು ನಂಬಿಸಿ ನಮ್ಮ ಮುಖಕ್ಕೆ ಮಸಿ ಬಳೆಯಲು ಪ್ರಯತ್ನಿಸಿದವರ ಮಸಿ ಹೆಚ್ಚಿಸಿಕೊಂಡಿರುವ ಮುಖವಾಡ ಬಯಲಾಗಿದೆ

ವಿನಾಕಾರಣ ನಮ್ಮ ಮೇಲೆ ಆರೋಪ ಹೊರಿಸಿ ಸಂಸ್ಥೆಯ ಅಭಿವೃದ್ಧಿಗೆ ಹಿನ್ನಡೆ ಮಾಡಲು ನಮ್ಮ ಸಮಯಹರಣ ಮಾಡಿದ್ದಾಕ್ಕಾಗಿ ವೈಯಕ್ತಿಕವಾಗಿಯು ಹಾಗೂ ಸಂಸ್ಥಗೆ ಹಿನ್ನಡೆ ಮಾಡಲು ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಿದ್ದೇವೆ.