ಏಳನೇಯ ಭಾರತೀಯ ಸಂಸ್ಕೃತಿ ಉತ್ಸವ - ವಿಜ್ಞಾನ ಲೋಕ
ಏಳನೇಯ ಭಾರತೀಯ ಸಂಸ್ಕೃತಿ ಉತ್ಸವ - ವಿಜ್ಞಾನ ಲೋಕ
ಜನೇವರಿ 29 ರಿಂದ ಫೆ. 6, 2025 ರವರೆಗೆ ಕಲಬುರಗಿ- ಸೇಡಂ ರಾಜ್ಯ ಹೆದ್ದಾರಿಯಲ್ಲಿ ಬರುವ ಬೀರನ ಹಳ್ಳಿಗೆ ಹೋಗುವ ರಸ್ತೆಯ ಇಕ್ಕೆಲದ 240 ಎಕರೆ ಭೂಪ್ರದೇಶದಲ್ಲಿ ಏಳನೇಯ ಭಾರತೀಯ ಸಂಸ್ಕೃತಿ ಉತ್ಸವ ಆಯೋಜಿಸುತ್ತಿರುವುದು ಈಗಾಗಲೇ ತಿಳಿದಿದೆ. ಸಮಾಜದ ಸುಸ್ಥಿರ ಅಭಿವೃದ್ಧಿಗಾಗಿ ಆಯೋಜಿಸಲಾಗುತ್ತಿರುವ ರಾಷ್ಟ್ರೀಯ ಕಾರ್ಯಕ್ರಮವಿದು. ಕಲ್ಯಾಣ ಕರ್ನಾಟಕದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ (BSS) ಸೇಡಮ್‌ನ ಸುವರ್ಣ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಈ ಭವ್ಯ ಉತ್ಸವದ ಆಯೋಜನೆಯಲ್ಲಿ ಶ್ರೀ BSS ಸೇಡಮ್ ಜೊತೆಗೆ ವಿಕಾಸ ಅಕಾಡೆಮಿ, ಕಲಬುರಗಿ ಮತ್ತು ಭಾರತ ವಿಕಾಸ ಸಂಗಮ ಸಂಸ್ಥೆಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ.
ಈ ಉತ್ಸವದಲ್ಲಿ ಆಯೋಜಿಸುತ್ತಿರುವ ವಿವಿಧ ಲೋಕಗಳಲ್ಲಿ ವಿಜ್ಞಾನ ಲೋಕವೂ ಒಂದಾಗಿದೆ. ಈ ಲೋಕದ ಎಲ್ಲಾ ಕಾರ್ಯಕ್ರಮ ಮತ್ತು ವ್ಯವಸ್ಥೆಗಾಗಿ ಗುಲ್ವರ್ಗ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ. ಬಿ.ಜ. ಮೂಲಿಮನಿಯವರ ಮಾರ್ಗದರ್ಶನದಲ್ಲಿ 16 ಜನರ ಒಂದು ಸಮಿತಿಯನ್ನು ರಚಿಸಲಾಗಿದೆ. ಆ ಸಮಿತಿಯ ಮೂಲಕ ಈ ಲೋಕದಲ್ಲಿ ಕಾರ್ಯನಿರ್ವಹಣೆಯನ್ನು ಮಾಡಲಾಗುವುದು .
ವಿಜ್ಞಾನ ನಿಂತ ನೀರಲ್ಲ , ಹರಿಯುತ್ತಿರುವ ಪ್ರವಾಹ. ವಿಜ್ಞಾನ ಕಲಿಕೆಗೆ ಪ್ರೇರಣೆ ಮತ್ತು ಮಕ್ಕಳ ಜ್ಞಾನವರ್ಧನೆಗೆ , ಸೃಜನಶೀಲತೆಗೆ ಸುವರ್ಣ ಅವಕಾಶ ಕಲ್ಪಿಸುವ ವಿಜ್ಞಾನ ಲೋಕವು 6 ಎಕರೆ ಪ್ರದೇಶದಲ್ಲಿ ವ್ಯಾಪಿಸಲಿದೆ. ಇಲ್ಲಿ ಅಗಸ್ತ್ಯ ಇಂಟರ್‌ನ್ಯಾಷನಲ್ ಪೌಂಡೇಶನ್ ವತಿಯಿಂದ ಮೂಲಭೂತ ವಿಜ್ಞಾನಕ್ಕೆ ಕುರಿತಂತೆ 400 ಮಾದರಿಗಳನ್ನು ಪ್ರದರ್ಶಿಸಲಾಗುವುದು. ಈ ಮಾದರಿಗಳ ವಿವರಣೆ ನೀಡಲು ಸೇಡಂ ಸುತ್ತಮುತ್ತಲಿನ ಶಾಲೆಗಳ ಸುಮಾರು 1500 ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು ಅವರಿಗೆ ಅಗಸ್ತ್ಯ ಇಂಟರ್‌ನ್ಯಾಷನಲ್ ಪೌಂಡೇಶನ್ ವತಿಯಿಂದ ತರಬೇತಿಯನ್ನು ನೀಡಲಾಗಿದೆ.
ಮೂಲಭೂತ ವಿಜ್ಞಾನದಲ್ಲಿ ಆದ ಆವಿಷ್ಕಾರಕ್ಕೆ , ತಂತ್ರಜ್ಞಾನ ಮತ್ತು ಇಂಜಿನಿರಿಂಗ್ ಅಳವಡಿಸುವುದರ ಮೂಲಕ ತಯಾರಿಸಲಾದ ವಿವಿಧ ಸಾಧನಗಳು, ಯಂತ್ರಗಳು , ಸಾಮಗ್ರಿಗಳು ನಮ್ಮ ಜೀವನದಲ್ಲಿ ಸಾಕಷ್ಟು ಬಲಾವಣೆಯನ್ನು ತರುವುದಲ್ಲದೇ ಉನ್ನತ ಮಟ್ಟಕ್ಕೆ ಏರಿಸಿವೆ. ಮೂಲಭೂತ ವಿಜ್ಞಾನ ಮತ್ತು ನಾವೀನ್ಯತೆಯ ಮೂಲಕ ಎಲ್ಲಾ ಕ್ಷೇತ್ರಕ್ಕೆ ಅನ್ವಯವಾಗಬಲ್ಲ ಹೊಸ - ಹೊಸ ಗ್ಯಾಡ್ಜೆಟ್ಟುಗಳು ತಯಾರಾಗದ ಹೊರತು ದೇಶದ ಪ್ರಗತಿ ಸಾಧ್ಯವಿಲ್ಲ. ಈ ಹಿನ್ನೆಯಲ್ಲಿ ವಿಜ್ಞಾನ ಕಲಿಕಾ ನಿಲ್ದಾಣ ಎಂಬ ವಿನೂತನ ವಿಭಾಗ ವಿಜ್ಞಾನ ಲೋಕದಲ್ಲಿ ಇರಲಿದೆ. ಇದರಲ್ಲಿ ಮೂಲಭೂತ ವಿಜ್ಞಾನದ 100 ಕಲಿಕಾ ಸಾಮಗ್ರಿಗಳು ಇರುತ್ತವೆ. ಇಲ್ಲಿ ಕಲ್ಯಾಣ ಕರ್ನಾಟಕದ ಸಂಪನ್ಮೂಲ ಶಿಕ್ಷಕರಿಂದ ಮಕ್ಕಳಿಗೆ ವಿಜ್ಞಾನವನ್ನು ಅರ್ಥಪೂರ್ಣವಾಗಿ ಕಲಿಸಲಾಗುವುದು ಹಾಗೂ ವಿಜ್ಞಾನ ಕಲಿಕೆಗೆ ಪ್ರೇರಣೆ ನೀಡಲಾಗುವುದು. ವಿಜ್ಞಾನ ಲೋಕದಲ್ಲಿ ಒಂದು ವೀಡಿಯೋ ಕೋಣೆಯನ್ನು ಅಳವಡಿಸಲಾಗುವುದು. ಅಲ್ಲಿ ವಿಜ್ಞಾನಿಗಳ ಜೀವನ ಚರಿತ್ರೆ, ವಿಜ್ಞಾನ – ತಂತ್ರಜ್ಞಾನದ ಕುರಿತ ವೀಡಿಯೋ ಪ್ರದರ್ಶನ ತೋರಿಸುವುದಲ್ಲದೆ , ಮಕ್ಕಳಿಗೆ ಕುತೂಹಲ ಮೂಡಿಸಿ ಸರಳವಾಗಿ ವಿಜ್ಞಾನ ಕಲಿಸಬಲ್ಲ ದೃಷ್ಠಾಂತ ಉಪನ್ಯಾಸಗಳ ವೀಡಿಯೋಗಳನ್ನೂ ಕೂಡ ಪ್ರದರ್ಶಿಸಲಾಗುವುದು. ಭಾರತ ವಿಕಾಸ ಸಂಗಮದ ವತಿಯಿಂದ ‘ ಮಹರ್ಷಿ ಕಣಾದನಿಂದ ಕಲಾಂವರಗೆ’ ಎಂಬ ಶೀರ್ಷಿಕೆಯಡಿ ನಮ್ಮ ಪರಂಪರೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯಲು ಕಾರಣೀಕರ್ತರಾದ ಹಲವಾರು ವಿಜ್ಞಾನಿಗಳ ಚಿತ್ರಸಹಿತ ಪ್ರದರ್ಶನ ಏರ್ಪಡಿಸಲಾಗುತ್ತದೆ. ಆಖಆಔ ದ ಮಾಜಿ ಸಂಶೋಧನಾ ವಿಜ್ಞಾನಿ ಮತ್ತು ಹಿರಿಯ ಎರೋಸ್ಪೇಸ್ ಎಂಜಿನಿಯರ್ & ಕಾಲಿನ್ಸ್ ಎರೋಸ್ಪೇಸ್ ಏವಿಯೇಷನ್ ಆರ್ಟಿಸ್ಟ್, ಬೆಂಗಳೂರು ಇವರಿಂದ ಭಾರತದಲ್ಲಿ ತಯಾರಾಗುತ್ತಿರುವ ವಿವಿಧ ವಿಮಾನಗಳ 2ಆ ಮಾದರಿ ಮತ್ತು ಚಿತ್ರಸಹಿತ ವಿವರಣೆ ಪ್ರದರ್ಶನವಿರಲಿದೆ. ಜಿಲ್ಲಾ ವಿಜ್ಞಾನ ಕೇಂದ್ರ ಕಲಬುರಗಿ, ಇಸ್ರೋ ಬೆಂಗಳೂರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ , ಪರಿಸರ ಶಿಕ್ಷಣ ಕೇಂದ್ರ ಇತ್ಯಾದಿ ಸಂಸ್ಥೆಗಳಿಂದ ಸಂಚಾರಿ ಪ್ರದರ್ಶನ ಏರ್ಪಡಿಸಲು ಆಹ್ವಾನ ನೀಡಲಾಗಿದೆ.
ವಿಜ್ಞಾನ ಲೋಕದಲ್ಲಿ ಪ್ರತಿದಿನ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಿಂದ/ ವಿಜ್ಞಾನಿಗಳಿಂದ ವಿಜ್ಞಾನ ಕ್ಷೇತ್ರದ ಸಾಧಕರಿಂದ ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆಕಾಲ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದ ವಿಷಯಗಳ ಕುರಿತು ಉಪನ್ಯಾಸ ಮತ್ತು ಸಂವಾದ ಏರ್ಪಡಿಸಲಾಗುತ್ತದೆ. ಅಲ್ಲದೆ ದೇಶದ ಹೆಸರಾಂತ ಕಂಪನಿಗಳಿAದ ವಿಜ್ಞಾನದ ಕಿಟ್ಟುಗಳನ್ನು , ವಿಜ್ಞಾನ ಕಲಿಕಾ ಸಾಮಗ್ರಿಗಳನ್ನು , ವಿಜ್ಞಾನದ ಆಟಿಕೆಗಳನ್ನು ಮತ್ತು ವಿಜ್ಞಾನ ಪುಸ್ತಕಗಳ ಮಾರಾಟ ಮಳಿಗೆಗಳನ್ನೂ ಹಾಕುವಂತೆ ಆಹ್ವಾನಿಸಲಾಗಿದೆ. ಈ ಲೋಕದ ಉದ್ಘಾಟನೆ ದಿ.28.1.2025 ರಂದು ಮಧ್ಯಾನ್ನ 3.00 ಗಂಟೆಗೆ , ಸಮಾರೋಪ 6.2.2025 ರಂದು ಮಧ್ಯಾನ್ನ 3.00 ಗಂಟೆಗೆ.
ಈ ಭವ್ಯವಾದ ಕಾರ್ಯಕ್ರಮದ ಮೂಲ ಕಲ್ಪನೆಯು ಪರಿಸರ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡುವುದು. ಇದರಲ್ಲಿ ಸರ್ಕಾರಿ ಸಂಸ್ಥೆಗಳು ಸೇರಿದಂತೆ ಇಡೀ ಸಮಾಜವು ಒಟ್ಟುಗೂಡುತ್ತದೆ ಮತ್ತು ಪ್ರಕೃತಿ-ಕೇಂದ್ರಿತ ಅಭಿವೃದ್ಧಿ - ಸುಸ್ಥಿರ ಮಾದರಿಗೆ ಕಾರಣವಾಗುವ ಅಭ್ಯಾಸಗಳನ್ನು ಅಳವಡಿಸಿಕೊಳಾಗುತ್ತದೆ. ಈ ಮಾದರಿಯು ಮಾನವರ ಕಲ್ಯಾಣಕ್ಕಾಗಿ ಮಾತ್ರವಲ್ಲದೆ ಎಲ್ಲಾ ಜೀವಿಗಳ ಉಳಿವಿಗೆ ಬದ್ಧವಾಗಿದೆ. ಅಲ್ಲದೇ ಎಲ್ಲರಿಗೂ ಶುದ್ಧ ನೀರು, ಗಾಳಿ ಮತ್ತು ಆಹಾರದ ಲಭ್ಯತೆಯನ್ನು ಪ್ರತಿಪಾದಿಸುವುದೇ ಈ ಉತ್ಸವದ ಉದ್ದೇಶ . ಈ ದಿಸೆಯಲ್ಲಿ ಭಾರತೀಯ ಸಂಸ್ಕೃತಿ ಉತ್ಸವ-7 ಒಂದು ದಾರಿದೀಪವಾಗಬಲ್ಲದು ಎಂದು ಆಶಿಸೋಣ. ಈ ರಾಷ್ಟ್ರದ ನಾಗರೀಕರನ್ನು ಪ್ರಕೃತಿ ಕೇಂದ್ರಿತ ಅಭಿವೃದ್ಧಿಯ ಉದಾತ್ತ ದೃಷ್ಟಿಗೆ ತಮ್ಮನ್ನು ಸಮರ್ಪಿಸಿಕೊಳ್ಳಲು ಪ್ರೇರೇಪಿಸುವುದಲ್ಲದೇ ಭಾರತೀಯ ನೀತಿ ಮತ್ತು ಜಾಗತಿಕ ದೃಷ್ಟಿಕೋನ ಎರಡನ್ನೂ ಅಳವಡಿಸಿಕೊಳ್ಳುತ್ತದೆ.
6 ಎಕರೆ ವಿಸ್ತಾರದಲ್ಲಿ ಆಯೋಜಿಸುತ್ತಿರುವ ವಿಜ್ಞಾನ ಲೋಕದ ಒಳಗೆ ಬಂದವರು ಆಶ್ಚರ್ಯಚಕಿತರಾಗುವುದರಲ್ಲಿ ಸಂಶಯವಿಲ್ಲ. ಒಳಗೆ ಬಂದು ಎಲ್ಲವನ್ನೂ ವೀಕ್ಷಿಸಿ , ವಿಜ್ಞಾನ ಲೋಕದ ವಿಸ್ಮಯವನ್ನು ತಿಳಿದು ಧನ್ಯರಾಗುತ್ತಾರೆ ಎಂಬ ನಂಬಿಕೆ ನಮಗಿದೆ.
ಶ್ರೀ ಸಿ.ಎನ್. ಲಕ್ಷ್ಮಿ ನಾರಾಯಣ ಹೆಬ್ಬಾರ್ವೈಜ್ಞಾನಿಕ ಸಲಹೆಗಾರರು, ಏಳನೇ ಭಾ. ಸಂ. ಉ, ಸದಾನಂದ ಪೆರ್ಲ,