ಉಚಿತ 226 ಸೈಕಲ್ ಮತ್ತು ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ವಿತರಣಾ ಸಮಾರಂಭ
ಉಚಿತ 226 ಸೈಕಲ್ ಮತ್ತು ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ವಿತರಣಾ ಸಮಾರಂಭ
ಕಲಬುರಗಿ: ನಗರದ ಸೇಂಟ್ ಮದರ ತೇರೆಸಾ ಸಭಾಂಗಣ, ಸೇಂಟ್ ಮೇರಿ ಚರ್ಚನಲ್ಲಿ ಎಸ್ ವಿ. ಪಿ. ಹೀರೋ ಸೈಕಲ್ ದಸರ ಮತ್ತು ಮಾರ್ಗದರ್ಶಿ ಸಂಸ್ಥೆ, ಇವರುಗಳ ಸಂಯುಕ್ತಾಶ್ರಯದಲ್ಲಿ ಉಚಿತ 226 ಸೈಕಲ್ ಮತ್ತು ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಉದ್ಘಾಟಿಸಿದರು.
ಡಾ. ಶರಣಪ್ಪ ಎಸ್.ಡಿ ಅವರು ಮಾತನಾಡಿ ಮಕ್ಕಳಿಗೆ ರಕ್ಷಣೆಯ ಬಗ್ಗೆ ಮತ್ತು ಸೈಕಲ್‌ಗಳ ಉಪಯೋಗ ಮಾಡಿಕೊಳ್ಳುವ ಬಗ್ಗೆ ಧೈರ್ಯವಾಗಿ ಶಾಲೆಗೆ ಹೋಗಲು ಆತ್ಮಸ್ಮರವನ್ನು ತುಂಬಿಸಿದರು.
ಅದೇ ರೀತಿಯಾಗಿ ಈ ಕಾರ್ಯಕ್ರಮದಲ್ಲಿ ಫಾದರ್ಜೋಸೆಫ್ ಪ್ರವೀಣ್ ದೈವಾನುಗ್ರಹ ಮಾತೆ ಪ್ರಧಾನ ದೇವಾಲಯ ಕಲಬುರ್ಗಿ ಅವರು ಮಾತನಾಡಿ ಮಕ್ಕಳು ಈ ಸೈಕಲ್ ಕೊಡುವುದರಿಂದ ಮಕ್ಕಳಲ್ಲಿ ವಿದ್ಯಾಭ್ಯಾಸದ ಮಟ್ಟ ಹೆಚ್ಚಿಗೆ ಆಗಬೇಕು ಅಂಕಗಳು ಹೆಚ್ಚಿಗೆ ಗಳಿಸಬೇಕು ಎಂದು ಹೇಳಿದರು.
ಸೈಕಲ್ ಹೀರೋ ಸೈಕಲ್ ಸಂಸ್ಥೆಯ ನಿರ್ದೇಶಕರಾದ ನವೀನ್ ಪಾಲ್ ಅವರು ಮಕ್ಕಳಿಗೆ ಸೈಕಲ್ ಕೊಡುವುದರಿಂದ ಶಿಕ್ಷಣಕ್ಕೆ ಅನುಕೂಲವಾಗುತ್ತೆ ಶಾಲೆಗೆ ನಿರಂತರ ಹೋಗುವುದರಿಂದ ಶಾಲೆಯಲ್ಲಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಿಗೆ ಬೌದ್ಧಿಕವಾಗಿ ಶಾರೀರಿಕವಾಗಿ ಸದೃಢರಾಗುತ್ತಾರೆ ಆದ್ದರಿಂದ ಹೀರೋ ಸೈಕಲ್ ಇದರ ಉಪಯೋಗ ಹೆಚ್ಚಿನದಾಗಿ ಕಂಡು ಬಂದರೆ ಇನ್ನೂ ಹೆಚ್ಚಾಗಿ ಸೈಕಲ್ ಗಳನ್ನು ಹೆಣ್ಣು ಮಕ್ಕಳಿಗೆ ಕೊಡುವುದಾಗಿ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಮಂಜುಳಾ ವಿ ಪಾಟೀಲ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮಾತನಾಡಿ ಮಕ್ಕಳು ಸುರಕ್ಷತೆಯಿಂದ ಇರಬೇಕು ಮಕ್ಕಳಿಗೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಅಥವಾ ಸಂಕಷ್ಟದಲ್ಲಿ ಇದ್ದರೆ 1098 ಕರೆ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷಿಯ ಭಾಷಣವನ್ನು ಶ್ರೀಮತಿ ಪದ್ಮಶ್ರೀ ವಿಪಿ ಇಂಡಿಯಾ ಬೆಂಗಳೂರು ಇವರು ಮಕ್ಕಳೊಂದಿಗೆ ಸಂವಾದ ಮಾಡುತ್ತಾ ಮಕ್ಕಳಿಗೆ ಈ ಸೈಕಲ್ ಕೊಡುವುದರಿಂದ ಏನೆಲ್ಲಾ ಉಪಯೋಗವಾಗುತ್ತದೆ ಎಂಬುದರ ಕುರಿತು ಸವಿಸ್ತಾರವಾಗಿ ಚರ್ಚೆಯ ಮೂಲಕ ವಿವರಿಸಿ ಹೇಳಿದರು.
ರಾಜ್ ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದ್ ಒಂದನಾರ್ಪಣೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಎಸ್ ವಿಪಿಯ ಸದಸ್ಯರಾದ ಅಬ್ಬುಬಕ್ಕರ್ ಚೇರ್ ಪರ್ಸನ್ ಎಸ್ ವಿ ಪಿ ಇಂಡಿಯಾ ಬೆಂಗಳೂರು, ಮನಿಷ್ ಗುಪ್ತ ಎಸ್ ವಿಪಿ ಇಂಡಿಯಾ ಬೆಂಗಳೂರು, ಶ್ರೀಮತಿ ಶ್ವೇತಾ ಪ್ರೋಗ್ರಾಮ್ ಮ್ಯಾನೇಜರ್, ಸ್‌ವಿಪಿ ಇಂಡಿಯಾ ಹಾಗೂ ಮಾರ್ಗದರ್ಶಿ ಸಂಸ್ಥೆಯ ಸದಸ್ಯರಾದ ರಾಯಪ್ಪ ರೆಡ್ಡಿ, ಶ್ರೀಮತಿ ಯಶೋದ ಅಧ್ಯಕ್ಷರು ಮಾರ್ಗದರ್ಶಿ ಚಾಟಿ ಟ್ರಸ್ಟ್ ಕಲ್ಬುರ್ಗಿ ಸೇರಿದಂತೆ ಮಕ್ಕಳು ಪಾಲಕರು ಶಿಕ್ಷಕರು, ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 125 ಮಕ್ಕಳು ಮಾರ್ಗದರ್ಶಿ ಸಂಸ್ಥೆಯ ವತಿಯಿಂದ ಕಂಪ್ಯೂಟರ್ ತರಬೇತಿಯನ್ನು ವಿವಿಧ ಕಂಪ್ಯೂಟರ್ ಸೆಂಟರ್ ಗಳಲ್ಲಿ ಕಲಿತುಕೊಂಡಿದ್ದರು ಅವರಿಗೆ ಈ ಸಂದರ್ಭದಲ್ಲಿ ಕಂಪ್ಯೂಟರ್ ತರಬೇತಿಯ ಸರ್ಟಿಫಿಕೇಟ್ಗಳನ್ನು ವಿತರಿಸಲಾಯಿತು.
