ವಾತ್ಸಲ್ಯಾ ಮನೆ ಹಸ್ತಾಂತರ

ವಾತ್ಸಲ್ಯಾ ಮನೆ ಹಸ್ತಾಂತರ

ವಾತ್ಸಲ್ಯಾ ಮನೆ ಹಸ್ತಾಂತರ 

ಚಿಟಗುಪ್ಪ : ತಾಲೂಕಿನ ಕೊಡಂಬಲ ಗ್ರಾಮದಲ್ಲಿ ಮಾಶಾಸನ ಪಡೆಯುತ್ತಿರುವ ಫಲಾನುಭವಿ ಕಾಶಮ್ಮ ಚಂದ್ರಪ್ಪಾ ನವರ ಬಡತನವ ಕಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯಾ ಕಾರ್ಯಕ್ರಮ ಅಡಿಯಲ್ಲಿ ಮನೆಯನ್ನು ನಿರ್ಮಿಸಿ, ಮನೆಯನ್ನು ಹಸ್ತಾಂತರ ಮಾಡಲಾಯಿತು.

ತಾಲೂಕು ಯೋಜನಾಧಿಕಾರಿ ಬಸವರಾಜ ರವರು ಮನೆ ಹಸ್ತಾಂತರಿಸಿ ಮಾತನಾಡಿದ ಅವರು, ಅತಿ ಬಡವರಾದ ಕಾಶಮ್ಮ ತಾಯಿಯವರಿಗೆ ನಮ್ಮ ಯೋಜನೆ ವತಿಯಿಂದ ಮನೆ ನಿರ್ಮಾಣ ಮಾಡಿ,ಅವರ ಕನಸಿನ ಸೂರು ಕಟ್ಟಿಕೊಡುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇವೆ. ಬಡವರ ಪರವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಾ ಕಾಲ ಇದೆ. ಈ ನಿಟ್ಟಿನಲ್ಲಿ ಬಡವರ ನೊಂದವರ ಪರವಾಗಿ ನಿಸ್ವಾರ್ಥ ಸೇವೆಯನ್ನು ಈ ಯೋಜನೆಯಿಂದ ನಿರಂತರವಾಗಿ ಮಾಡುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ಸಾಹಿತಿ ಸಂಗಮೇಶ ಎನ್ ಜವಾದಿ ಮಾತನಾಡಿ ಕಡು ಬಡತನದಲ್ಲಿ ವಾಸುಸುತ್ತಿರುವ ಅನೇಕ ಬಡವರಿಗೆ ಧರ್ಮಸ್ಥಳ ಸಂಸ್ಥೆ ವತಿಯಿಂದ ಸಹಾಯಸ್ತ ಮಾಡುತ್ತಿದ್ದಾರೆ. ಧರ್ಮಸ್ಥಳ ಸಂಸ್ಥೆ ಎಂಬುದು ಒಂದು ಸಾಮಾಜಿಕ ಸಂಸ್ಥೆಯಾಗಿ ತನ್ನದೇ ಆದಂತ ನಿಸ್ವಾರ್ಥ ಸೇವೆಯಲ್ಲಿ ತೊಡೆಸಿಕೊಂಡಿದೆ. ನಾಡಿನ ಅಭಿವೃದ್ಧಿಯಲ್ಲಿ ತನ್ನದೇ ಆದ ವಿಶಿಷ್ಟ ಪಾತ್ರ ವಹಿಸಿ ಕೆಲಸ ಮಾಡುತ್ತಿದೆ. ದೇಶದ ಹೆಮ್ಮೆಯ ಯೋಜನೆಯಂದು ಖ್ಯಾತಿ ಸಹ ಗಳಿಸಿದೆ. ತಾಲೂಕಿನ ಅಭಿವೃದ್ಧಿಗಾಗಿ ಟೊಂಕಕಟ್ಟಿಕೊಂಡು ಈ ಯೋಜನೆಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.

ಬಡವರ ಪರವಾಗಿ ಈ ಸಂಸ್ಥೆ ಕೆಲಸ ಮಾಡುತ್ತಿರುವುದು ನಮಗೆಲ್ಲರಿಗೂ ನೆಮ್ಮದಿ ಮತ್ತು ಸಂತೋಷ ತಂದಿದೆ ಎಂದು ತಿಳಿಸಿದರು.

ಜನಜಾಗೃತಿ ವೇದಿಕೆ ಸದಸ್ಯರಾದ ನರಸಪ್ಪ ಪತ್ಮಾಪೂರ, ಅಸ್ಲಾಂಮಿಯಾ ಆಜಾಮ್ ಸ್ವೀಟ್ ಹೌಸ್ ಹಾಜರಿದ್ದರು.

ಸಮನ್ವಯಾಧಿಕಾರಿ ಶೋಭಾ ಅವರು ನಿರೂಪಿಸಿ, ವಂದಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೈಜಪ್ಪಾ ಭೋಸಗಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಗ್ರಾಮದ ಹಿರಿಯರು, ಗಣ್ಯರು, ಮಾತೆಯರು,ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.