ಸಾರಿಗೆ ಆಯುಕ್ತರ ಕಚೇರಿಎದುರು ಸಾಂಕೇತಿಕ ಧರಣಿ : ಆನಂದ ಪಾಟೀಲ

ಸಾರಿಗೆ ಆಯುಕ್ತರ ಕಚೇರಿಎದುರು ಸಾಂಕೇತಿಕ ಧರಣಿ : ಆನಂದ ಪಾಟೀಲ

ಸಾರಿಗೆ ಆಯುಕ್ತರ ಕಚೇರಿ ಎದುರು ಸಾಂಕೇತಿಕ ಧರಣಿ : ಆನಂದ ಪಾಟೀಲ 

ಕರ್ನಾಟಕ ರಾಜ್ಯ ಮೋಟಾರ್ ವಾಹಾನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಒಕ್ಕೂಟ ರಿ ಬೆಂಗಳುರ. ವತಿಯಿಂದ ದಿನಾಂಕ 08-01-2024 ರಂದು ಬೆಳಿಗ್ಗೆ 10.00 ಗಂಟೆಗೆ ಜಂಟಿ ಸಾರಿಗೆ ಆಯುಕ್ತರ ಕಚೇರಿ ಕಲಬುರಗಿ ಹಾಗು ಪ್ರಾದೇಶಿಕ ಸಾರಿಗೆ ಕಚೇರಿ ಕಲಬುರಗಿ ಎದುರಗಡೆ ಒಂದು ದಿನ ಸಾಂಕೇತಿಕ ಧರಣಿಯು ಕಲಬುರಿಗಿ ನಗರದ ಅರ.ಟಿ.ಪಿ.ಡ್ರೈವಿಂಗ ಟ್ರಾಕದಿಂದ ಆರಂಬ ಗೊಳಲದೆ ಮಾರ್ಗ ಖರ್ಗೆ ಸರ್ಕಲ್.ಅನ್ನಪೂರ್ಣ ಕ್ರಾಸ್.ತಿಮ್ಮಾಪುರಿ ಸರ್ಕಲ್. ಕೋರ್ಟ.ಎನ ವಿ ಕಾಲೇಜ.ಆರ.ಟಿ.ಓ.ಕಚೇರಿ ಸಾರ್ವಜನಿಕ ಉದ್ಯಾನ ವನದ ಮಾರ್ಗವಾಗಿ ರ್ಯಾಲಿ ನಡೆಯಲಿದೆ ಎಂದು ಪಾಟೀಲ ತಿಳಿಸಿದರು.

ಕಲ್ಯಾಣ ಕರ್ನಾಟಕದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಮತ್ತು ಎನ ಐ ಸಿ ಮತ್ತು ರೋಜಮಾರ್ಟ ಮೇಲ್ಮಚಾರಕರು ಸುಮಾರು 5 ರಿಂದ 10 ವರ್ಷಗಳವರೆಗೆ ಒಂದೆ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಅಧಿಕಾರಿಗಳ ಲಾಗಿನ ಐಡಿ ಗಳನ್ನು ದುರ್ಬಳಿಕೆ ಮಾಡಿ ದಲ್ಲಾಳಿ ಕೆಲಸ ನಿರ್ವಹಿಸುತ್ತಾ ಹಣ ಪಡೆದು ಬ್ರಷ್ಟಾಚಾರ ಮಡುತ್ತಿದ್ದಾರೆ ಎಂದು ದೂರಿದರು.

ಸಾರ್ವಜನಿಕರು ಹಾಗು ಮೋಟಾರ ವಾಹಾನ ತರಬೇತಿ ಶಾಲೆಯ ಮಾಲೀಕರು ಕೆಲಸ ಕಾರ್ಯಕ್ಕಾಗಿ ಕಚೇರಿಗೆ ಹೋದರೆ ಅಲ್ಲಿಯ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸುತ್ತಾ ಯಾವುದೇ ರೀತಿ ಸಹಕಾರ ನೀಡುತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕಲಬುರ್ಗಿಯಲ್ಲಿರುವ ಕ ಕ ರ ಸಾ ಸಂಸ್ಥೆಯ ಅಡಿಯಲ್ಲಿ ಪರವಾನಗೆ ನವಿಕರಣದ ಸಮಯದಲ್ಲಿ ಭಾರಿ ವಾಹಾನದ ಒಂದು ದಿನ ಚಾಲನಾ ತರಬೇತಿಗಾಗಿ ಸಾರ್ವಜನಿಕರು ಹೊದರೆ ಸಾರಿಗೆ ಇಲಾಖೆಯ ಆದೇಶದಂತೆ ಅಭ್ಯಾರ್ಥಿಗಳಿಂದ ಕೇವಲ 50ರ ಶೂಲ್ಕ ನಿಗದಿಪಡಿಸಲಾಗಿತ್ತು ಆದರೆ ಅಭ್ಯಾರ್ಥಿಗಳಿಂದ 800 ರುಪಾಯಿ ಶುಲ್ಕ ಪಡೆದು ಭ್ರಷ್ಟಾಚಾರ ಮಾಡುತ್ತಿದ್ದಾರೆ ತರಬೇತಿ ಕೆಂದ್ರದಲ್ಲಿ ಯಾವುದೆ ಮೂಲಭೂತ ಸೌಕರ್ಯ ಇರುವುದಿಲ್ಲಾ ಭ್ರಷ್ಟಾಚಾರ ಅದಿಕಾರಿಗಳನ್ನು ಕುಡಲೆ ಅಮಾನಾತು ಗೋಳಿಸಬೆಕು ಎಂದರು.

ಬೀದರ ಪ್ರಾದೇಶಿಕ ಸಾರಿಗೆ ಕಚೇರಿಗೆ ಖಾಯಂ ಅಧಿಕಾರಿಗಳನ್ನು ನೆಮಿಸಬೇಕು

ರಾಯಪುರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮೋಟಾರ್ ವಾಹನ ನಿರೀಕ್ಷಕರು ಸರಿಯಾಗಿ ಸಮಯಕ್ಕೆ ಡಿ ಎಲ್ ಟೆಸ್ಟ ಮಾಡುತ್ತಿಲ್ಲ ಸಾರ್ವಜನಿಕರಿಗೆ ತಿರ್ವ ತೋಂದರೆ ಅನುಭವಿಸುತ್ತಿದ್ದರೆ ಎಂದರು 

ಕಲಬುರಗಿ ವಿಭಾಗದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ ಡ್ರೈವಿಂಗ ಲೈಸನ್ನ ಕಾರ್ಡುಗಳು ಮತ್ತು ವಾಹನಕ್ಕೆ ಸಂಬದಿಸಿದ ಕಾರ್ಡುಗಳು ಆರು ತಿಂಗಳಾದರು ಕೂಡಾ ಸಾರ್ವಜನಿಕರಿಗೆ ಸಿಗುವುದಿಲ್ಲಾ

ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಬ್ರಷ್ಟಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಮೋಟಾರ್ ವಾಹಾನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಒಕ್ಕೂಟ ರಿ ಬೆಂಗಳೂರು.ವತ್ತಾಯಿಸಿತ್ತದೆ ಎಂದು ಹೇಳಿದರು