ದಾದಿಯರು ಆಸ್ಪತ್ರೆಗಳ ಬೆನ್ನೆಲುಬು ಶಶೀಲ್ ಜಿ ನಮೋಶಿ

ದಾದಿಯರು ಆಸ್ಪತ್ರೆಗಳ ಬೆನ್ನೆಲುಬು ಶಶೀಲ್ ಜಿ ನಮೋಶಿ

ದಾದಿಯರು ಆಸ್ಪತ್ರೆಗಳ ಬೆನ್ನೆಲುಬು ಶಶೀಲ್ ಜಿ ನಮೋಶಿ 

ಕಲಬುರ್ಗಿ:ದಾದಿಯರು ಆಸ್ಪತ್ರೆಗಳ ಬೆನ್ನೆಲುಬು ಎಂದುಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು 

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ದಾದಿಯರ ನೇತೃತ್ವದಲ್ಲಿ ನಡೆದ ವಿಶ್ವ ದಾದಿಯರ ದಿನಾಚರಣೆ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

 ಚಿಕಿತ್ಸೆಗಾಗಿ ಬಂದಂತಹ ರೋಗಿಗಳನ್ನು ದಾದಿಯರು ನಗು ಮುಖದಿಂದ ಸ್ವಾಗತಿಸಿದಾಗಲೇ ರೋಗಿಗಳ ಅರ್ಧ ಕಾಯಿಲೆ ಗುಣ ಆಗಿರುತ್ತದೆ ಮತ್ತು ಅವರು ರೋಗಿಗಳೊಂದಿಗೆ ಆತ್ಮೀಯವಾಗಿ ಒಡನಾಡಿ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ನರ್ಸಿಂಗ್ ವೃತ್ತಿ ಎಷ್ಟು ಪ್ರಾಮುಖ್ಯವಾದುದು ಎಂಬುದನ್ನು ಫ್ಲಾರೆನ್ಸ್‌ ನೈಟಿಂಗೇಲ್ ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದರು 

ಶುಷ್ರೂಷಕರು ತಮ್ಮ ಕೆಲಸವನ್ನು ಬೇಸರ ಮಾಡಿಕೊಳ್ಳದೆ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ವೃತ್ತಿಯಲ್ಲಿ ಮೇಲೆ ಬರಲು ಸಾಧ್ಯ’ ಎಂದು ಕಿವಿಮಾತು ಹೇಳಿದರು 

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಮಾತನಾಡಿ ಎಲ್ಲರೂ ಕೆಲಸ ಮಾಡುತ್ತಾರೆ. ಆದರೆ, ತಮ್ಮ ಕೆಲಸದ ಮೂಲಕ ಗುರುತಿಸಿಕೊಳ್ಳುವುದು ಬಹಳ ಮುಖ್ಯ. ದಾದಿಯರ ವೃತ್ತಿಗೆ ವಿಶೇಷ ಸ್ಥಾನಮಾನ ಇದೆ. ನಾವು ಯಾವುದೇ ಕೆಲಸ ಮಾಡಿದರೂ ಅದನ್ನು ದಾಖಲಿಸಬೇಕು. ಅದು ಮುಂದಕ್ಕೆ ಪ್ರಯೋಜನಕ್ಕೆ ಬರುತ್ತದೆ’ ಎಂದರು

ರೋಗಿಗಳ ಪಾಲಿನ ನರ್ಸ್‌ಗಳು ಸಂಜೀವಿನಿಗಳು. ಪರಿಸರ, ಗಾಳಿ, ನೈರ್ಮಲ್ಯಕ್ಕೆ ಎಷ್ಟು ಪ್ರಾಮುಖ್ಯ ಕೊಡಬೇಕು ಎಂದು ಫ್ಲಾರೆನ್ಸ್‌ ನೈಟಿಂಗೇಲ್ ಅವರು ಅಂದೇ ತಿಳಿಸಿದ್ದರು. ನರ್ಸಿಂಗ್ ಈಗ ಬರೀ ಸೇವೆ ಆಗಿರದೆ ವೃತ್ತಿ ಆಗಿದೆ. ಒಂದು ಆಸ್ಪತ್ರೆ ಚೆನ್ನಾಗಿದೆ ಎಂದರೆ, ಅಲ್ಲಿ ಕೆಲಸ ಮಾಡುವ ದಾದಿಯರು ಮುಖ್ಯ ಕಾರಣ ಆಗುತ್ತಾರೆ’ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ , ಬಸವೇಶ್ವರ ಆಸ್ಪತ್ರೆಯ ಸಂಚಾಲಕರು ಡಾ ಕಿರಣ್ ದೇಶಮುಖ್ ಹಾಗೂ ಆಡಳಿತ ಮಂಡಳಿ ಸದಸ್ಯರು, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಶರಣಗೌಡ ಪಾಟೀಲ್ ,ವೈಸ್ ಡೀನ್ ಡಾ ವಿಜಯಕುಮಾರ್ ಕಪ್ಪಿಕೇರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಆನಂದ ಗಾರಂಪಳ್ಳಿ ಆಡಳಿತಾಧಿಕಾರಿಗಳಾದ ಡಾ ಎಂ ಆರ್ ಪೂಜಾರಿ ಉಪಸ್ಥಿತರಿದ್ದರು 

ಆಸ್ಪತ್ರೆಯ ನರ್ಸಿಂಗ್ ಮೇಲ್ವಿಚಾರಕರಾದ ಎಲ್ ಸುಮತಿ ಸ್ವಾಗತಿಸಿದರು, ರೇಣುಕಾ ಪ್ರಾರ್ಥಿಸಿದರು, ಅಪೀಲು ಕಾರ್ಯಕ್ರಮ ನಿರೂಪಿಸಿದರು ಲೀನಾ ವಂದಿಸಿದರು