ಹಿಂದೂಗಳು ಎದ್ದರೆ ದೇಶ ಎದ್ದುನಿಲ್ಲುತ್ತದೆ; ಆ ಕಾಲ ಸಮೀಪಿಸಿದೆ : ಡಾ. ಸುಧಾ ಹಾಲಕಾಯಿ
ಹಿಂದೂಗಳು ಎದ್ದರೆ ದೇಶ ಎದ್ದುನಿಲ್ಲುತ್ತದೆ; ಆ ಕಾಲ ಸಮೀಪಿಸಿದೆ : ಡಾ. ಸುಧಾ ಹಾಲಕಾಯಿ
ಕಲಬುರಗಿ: ಬಾಂಗ್ಲಾದೇಶದ ಹಿಂದುಗಳ ಮೇಲಿನ ಅಮಾನುಷ ದೌರ್ಜನ್ಯವನ್ನು ಖಂಡಿಸ ಬೇಕಿರುವುದು ಬರೀ ಹಿಂದುಗಳಷ್ಟೇ ಅಲ್ಲ, ಭಾರತದ ಮತ್ತು ವಿಶ್ವದ ಪ್ರತಿಯೊಬ್ಬ ಪ್ರಜೆಯೂ ಆ ಹಿಂಸಾಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸಲೇಬೇಕು. ಅದೇ ನಿಜವಾದ ಮಾನವೀಯ ಧರ್ಮ ಎಂದು ಭಾರತೀಯ ಜನತಾ ಪಕ್ಷ ವೈದ್ಯಕೀಯ ಪ್ರಕೋಷ್ಠ ಬಿಜೆಪಿ ರಾಜ್ಯ ಮಾಧ್ಯಮ ಪ್ಯಾನೆಲಿಸ್ಟ್ನ್ ಡಾ. ಸುಧಾ ಹಾಲಕಾಯಿ ಹೇಳಿದರು.
ಮತಾಂಧರ ನಡುವೆ ನಲುಗುತ್ತಿರುವಂತಹ ಅಮಾಯಕ ಜೀವಗಳು. ವಿಶ್ವ ಇದನ್ನು ಬೆಕ್ಕಸಬೆರಗಾಗಿ ನೋಡುತ್ತಿದೆ. ಜಗತ್ತಿನಲ್ಲಿ ಮತೀಯ ಶಕ್ತಿಗಳು ಉನ್ಮಾದದಿಂದ ಕೇಕೆ ಹಾಕುತ್ತಿವೆ. ಕೆಲವು ದೇಶಗಳು ಈ ಮತಾಂಧ ಶಕ್ತಿಗಳನ್ನು ತಮ್ಮ ಜೀವನದ ಅಂಗ ಎಂಬಂತೆ ಪೋಷಿಸಿರುವುದು ಸತ್ಯ. ಆದರೆ ಇಂದು ಆ ಶಕ್ತಿಗಳು ತಮ್ಮ ಪೋಷಕರನ್ನೇ ಆಹುತಿ ತೆಗೆದುಕೊಳ್ಳುವ ಹಂತಕ್ಕೆ ಬಂದಿವೆ.
ಅಲ್ಪಸAಖ್ಯಾತರು ಮತ್ತು ಅನ್ಯ ಮತಧರ್ಮದವರ ಮೇಲೆ ಹಿಂಸಾಚಾರ, ದೌರ್ಜನ್ಯ ನಡೆಸಿ ಅವರನ್ನು ಹತ್ಯೆ ಮಾಡುತ್ತಿರುವುದು ನಿಜಕ್ಕೂ ಕಳವಳಕಾರಿಯಾದ ಸಂಗತಿ. ಇವತ್ತು ಬಾಂಗ್ಲಾದೇಶದ ಹಿಂದೂಗಳು ಭಯಭೀತರಾಗಿ ಭಾರತಕ್ಕೆ ಓಡಿ ಬರುತ್ತಿರುವುದು, ರಕ್ಷಣೆ ನೀಡುವಂತೆ ಮೊರೆಯಿಡುತ್ತಿರುವುದು ಕೂಡ ಸತ್ಯ. ಈ ಕಾರಣಕ್ಕಾಗಿಯೇ ನಮ್ಮ ಸರಕಾರ ಸಿಎಎ ಜಾರಿಗೊಳಿಸಿದೆ ಮತ್ತು ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿ ಆಶ್ರಯ ಕೋರಿ ಬರುವ ಹಿಂದೂಗಳಿಗೆ ರಕ್ಷಣೆ ನೀಡಲು ಬದ್ಧವಾಗಿದೆ. ಜಗತ್ತಿನಲ್ಲಿ ಕ್ರೈಸ್ತರಿಗೆ, ಮುಸ್ಲಿಮರಿಗೆ ೫೦-೬೦ ದೇಶಗಳಿವೆ. ಆದರೆ ಹಿಂದೂಗಳಿಗೆ ಇರುವುದು ಒಂದೇ ದೇಶ, ಅದು ಭಾರತ ಮಾತ್ರ. ಜಗತ್ತಿನ ಹಿಂದೂಗಳಿಗೆ ಅನಾಥ ರಕ್ಷಕನ ಪಾತ್ರವನ್ನು ಭಾರತ ಮಾಡುತ್ತಿದೆ.
ಮನುಷ್ಯನ ನಾಗರಿಕ ಪ್ರಜ್ಞೆ ಇವತ್ತು ಅತ್ಯಂತ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದೆ. ಕಾರಣಗಳೇನೇ ಇರಲಿ, ಒಂದು ಪ್ರದೇಶದಲ್ಲಿ ಯಾರು ಅಲ್ಪಸಂಖ್ಯಾತರಾಗಿರುತ್ತಾರೋ ಅವರನ್ನು ಗೌರವಪೂರ್ವಕವಾಗಿ ನೋಡಿಕೊಳ್ಳಬೇಕಾಗಿರುವುದು ಅಲ್ಲಿನ ಬಹುಸಂಖ್ಯಾತ ಜನರ ಕರ್ತವ್ಯ
ಇವತ್ತು ಬಾಂಗ್ಲಾದೇಶದಲ್ಲಿ ನಡೆಯುವ ಘಟನೆ, ಅಲ್ಪಸಂಖ್ಯಾತ ಹಿಂದೂಗಳಿಗೆ ನಡೆಯುತ್ತಿರುವ ಅನ್ಯಾಯ- ದೌರ್ಜನ್ಯಗಳನ್ನು ಯಾವ ದೇವರೂ ಒಪ್ಪಲಾರ ಮತ್ತು ಕ್ಷಮಿಸಲಾರ.
ಯಾವುದೇ ದೇಶದಲ್ಲಿ ಕಡಿಮೆ ಸಂಖ್ಯೆಯ ಜನರ ಮೇಲೆ ಮತದ ಆಧಾರದಲ್ಲಿ ದೌರ್ಜನ್ಯ ನಡೆಸುವುದು ಅನಾಗರಿಕತೆಯೇ ಹೊರತು ನಾಗರಿಕ ಧರ್ಮದ ಕೆಲಸವಲ್ಲ. ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಅದನ್ನು ಗೌರವಿಸುವುದು ಮಾನವೀಯ ಧರ್ಮ. ಅನಿವಾರ್ಯವಾದ, ಅನಿರೀಕ್ಷಿತವಾದ ಪ್ರಕೃತಿ ವಿಕೋಪಗಳು ಬೇರೆ ರೀತಿ. ಅದಕ್ಕೆ ಒಂದಷ್ಟು ಕಾರಣಗಳಿರುತ್ತವೆ. ಅಂತಹ ದುರಂತಗಳಾದಾಗ ಸಮಾಧಾನ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಯಾವುದೇ ಕಾರಣವಿಲ್ಲದೆ, ಕೇವಲ ಧಾರ್ಮಿಕ ಆಧಾರದ ಮೇಲೆ, ಜನರನ್ನು ಕೊಲ್ಲುವುದು ಅತ್ಯಂತ ಹೇಯ ಮತ್ತು ನೀಚ ಕೃತ್ಯ. ನಿಮ್ಮ ನಂಬಿಕೆಯನ್ನು ನೀವು ಮಾಡಿಕೊಳ್ಳಿ. ಆದರೆ ಅದಕ್ಕಾಗಿ ಬೇರೆಯವರ ಪ್ರಾಣವನ್ನು ತೆಗೆಯುವುದು ಧರ್ಮವಿರೋಧಿ ಮಾತ್ರವಲ್ಲ, ದೇವರ ವಿರೋಧಿ ಕೃತ್ಯವೂ ಹೌದು.
ಬಾಂಗ್ಲಾದೇಶದಲ್ಲಿ ನಡೆದಿರುವ ಈ ವಿದ್ಯಮಾನಗಳನ್ನು ತಮಗೆ ಬೇಕಾದಂತೆ 'ಸೆಲೆಕ್ಟಿವ್' ಪ್ರಕರಣಗಳನ್ನು ಮಾತ್ರ ಬಳಸಿಕೊಂಡು ದೊಡ್ಡದಾಗಿ ಬಿಂಬಿಸುವುದು ಕೆಲವು ಸೋಗಲಾಡಿಗಳ ಜಾಯಮಾನ ಆಗಿಬಿಟ್ಟಿದೆ. ನಮ್ಮ ದೇಶದ ಬುದ್ಧಿ ಜೀವಿಗಳ ರೂಪದಲ್ಲಿ ಸ್ವಯಂಘೋಷಿತ ಸಮಾಜ ಸುಧಾರಕರ ರೂಪದಲ್ಲಿ (ಅವಾರ್ಡ್ ವಾಪ್ಸಿಗಳು) ಕಾಣ ಸಿಕೊಳ್ಳುವವರು ಸೆಲೆಕ್ಟಿವ್ ಆಗಿ ಶಾಂತಿ ಮೆರವಣ ಗೆ ಮಾಡುವುದು, ಕ್ಯಾಂಡಲ್ ಲೈಟ್ ಮೆರವಣ ಗೆ ಮಾಡುವುದು, ಗಾಂಧಿ ಪ್ರತಿಮೆ ಮುಂದೆ ಕೂರುವುದು ಮಾಡುತ್ತಾರೆ. ಆದರೆ ಇಂತಹ ಸಾಲಿಗೆ ಸೇರಿರುವ ಒಬ್ಬನೇ ಒಬ್ಬ ಬುದ್ಧಿಜೀವಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿಲ್ಲ. ಮತಾಂಧರ ಮತಾಂಧತೆಯನ್ನು ಧಿಕ್ಕರಿಸಿ ಮೆಡಲ್ ವಾಪಸ್ ಮಾಡಿಲ್ಲ. ತಮಗೆ ಅನುಕೂಲವಾಗುವ ಸಂದರ್ಭದಲ್ಲಿ ಮಾತ್ರ ಹೋರಾಟ ಮಾಡುವುದು, ಹಿಂದೂಗಳ ವಿಚಾರ ಬಂದಾಗ ತಾತ್ಸಾರ ಮಾಡುವುದು, ಕೆಟ್ಟ ರೀತಿಯಲ್ಲಿ ನೋಡುವುದು ಇವತ್ತಿನ ರಾಜಕೀಯ ಪಕ್ಷಗಳ ಪರಿಪಾಠ ಆಗಿದೆ.
ಮೊನ್ನೆ ಮೊನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಮಾತನಾಡುತ್ತ, ಹಿಂದೂಗಳೇ ಹಿಂಸೆಗೆ ಕಾರಣರಾದವರು ಎಂದು ಹೇಳುತ್ತಾರೆ. ಆದರೆ ಇವತ್ತಿನ ಬಾಂಗ್ಲಾದೇಶದ ಬೆಳವಣ ಗೆ ನೋಡಿದಾಗ ಯಾವುದು ಸತ್ಯ ಎಂದು ಗೊತ್ತಾಗುತ್ತದೆ. ನಮ್ಮ ಭಾರತ ದೇಶದಲ್ಲೂ ಹಿಂದೂಗಳನ್ನು ಸರ್ವನಾಶ ಮಾಡಬೇಕೆಂದೂ ಅನೇಕಾ ದುಷ್ಠ ಶಕ್ತಿಗಳು ಸಂಚು ಹಾಕುತಿದೆ , ಇದನ್ನೆಲ್ಲ ನಾವು ಹಿಂದೂಗಳು ಒಗ್ಗಟ್ಟಾಗಿ ಎದ್ದು ನಿಂತರೆ ಎದುರಿಸಲು ಸಾಧ್ಯ. ಹಿಂದೂಗಳು ಎದ್ದು ನಿಂತರೆ ದೇಶ ಎದ್ದು ನಿಲ್ಲುತ್ತದೆ. ಆ ಕಾಲ ಈಗ ಹತ್ತಿರ ಬಂದಿದೆ. ಎಂದು ಡಾ. ಸುಧಾ ಹಾಲಕಾಯಿ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.