ಗಡಿ ಭಾಗದ ವೆಂಕಟಾಪೂರ .ಕೆ ಗ್ರಾಮಕ್ಕೆ ಸ್ಥಗಿತಗೊಂಡಿದ ಸಾರಿಗೆ ವ್ಯವಸ್ಥೆ : ಪ್ರಾರಂಭ
ಗಡಿ ಭಾಗದ ವೆಂಕಟಾಪೂರ .ಕೆ ಗ್ರಾಮಕ್ಕೆ ಸ್ಥಗಿತಗೊಂಡಿದ ಸಾರಿಗೆ ವ್ಯವಸ್ಥೆ : ಪ್ರಾರಂಭ
ಘಟಕದ ವ್ಯವಸ್ಥಾಪಕ, ಚಾಲಕನಿಗೆ ಸನ್ಮಾನಿಸಿ, ಸಿಹಿ ಹಂಚಿ ಸಂಭ್ರಮಿಸಿದ ಗ್ರಾಮಸ್ಥರು,
ಚಿಂಚೋಳಿ :ತೆಲಂಗಾಣ ಗಡಿಭಾಗದ ತಾಲೂಕಿನ ವೆಂಕಟಾಪೂರ ಗ್ರಾಮಸ್ಥರಿಗೆ ರಾತ್ರಿ ವೇಳೆ ಗ್ರಾಮಕ್ಕೆ ತೆರಳಲು ಅನಾನುಕೂಲವಾಗುತ್ತಿದ್ದು, ರಾತ್ರಿ ವೇಳೆ ವೆಂಕಟಾಪೂರ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಚಿಂಚೋಳಿ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಈ ಮೊದಲು 9495 ಬಸ್ ನ್ನು ವೆಂಕಟಾಪೂರ ಗ್ರಾಮದವರೆಗೆ ಸಂಚಾರ ನಡೆಸುತ್ತಿರುವುದನ್ನು ನಿಲ್ಲಿಸಿ, ಕುಂಚಾವರಂ ಗ್ರಾಮದವರೆಗೆ ಸಂಚರಿಸಿ ವಾಸ್ತವಕ್ಕೆ ಅನುಮತಿಸಲಾಗಿತ್ತು. ಇದರಿಂದ ವೆಂಕಟಾಪೂರ ಗ್ರಾಮಸ್ಥರಿಗೆ ರಾತ್ರಿ ವೇಳೆ ಗ್ರಾಮಕ್ಕೆ ಸೇರಿಕೊಳ್ಳಲು ಅನಾನುಕೂಲವಾಗುತ್ತಿದ್ದು ಕೂಡಲೆ ವೆಂಕಟಾಪೂರ .ಕೆ ಗ್ರಾಮದವರೆಗೆ ಸಂಚರಿಸಲು ಕ್ರಮಕೈಗೊಳಬೇಕೆಂದು ಗ್ರಾಮದ ಗ್ರಾ.ಪಂ.ಸದಸ್ಯ ಜಗನ್ನಾಥ ಪಟೇಲ್, ನಾರಾಯಣ, ರಮೇಶಕುಮಾರ, ಎಂ.ಡಿ.ನಿಜಾಮ್,ಪಾಪಯ್ಯ, ಶೇಖರ,ಪ್ರಶಾಂತ, ಎಂ.ಡಿ.ಮನ್ಸೂರ್ ಹಾಗೂ ಗೋಪಾಲ ಭಜಂತ್ರಿ ಅವರು ಚಿಂಚೋಳಿ ಬಸ್ ಡಿಪೋ ಘಟಕದ ವ್ಯವಸ್ಥಾಕರಿಗೆ ಮನವಿ ಸಲ್ಲಿಸಿದರು. ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ವ್ಯವಸ್ಥಾಪಕರು ಈದಿಗ ಬಸ್ ನಂಬರ 9495 ಚಿಂಚೋಳಿ-ಕುಂಚಾವರಂವರೆಗೆ ಸಂಚರಿಸಿ ರಾತ್ರಿ ವಾಸ್ತವ ಮಾಡುತ್ತಿದ್ದ ಬಸ್ ಅನ್ನು ವೆಂಕಟಾಪೂರ ಗ್ರಾಮದವರೆಗೆ ವಿಸ್ತರಿಸಿ, ರಾತ್ರಿ ವಾಸ್ತವ ಮಾಡಲು ಅನುಮತಿಸಲಾಗಿದೆ. ಅಲ್ಲಿಂದ ಬೆಳಿಗ್ಗೆ ವೆಂಕಟಾಪೂರ.ಕೆ ಗ್ರಾಮದಿಂದ ಶ್ರೀನಗರ ತಾಂಡಾ, ಕುಂಚಾವರಂ ಮತ್ತು ಶಾದಿಪೂರ ಗ್ರಾಮದ ಮಾರ್ಗವಾಗಿ ಚಿಂಚೋಳಿ ಕೇಂದ್ರ ಬಸನಿಲ್ದಾಣದವರೆಗೆ ಸಂಚರಿಸುವಂತೆ ಕ್ರಮಕೈಗೊಂಡಿರುವುದರ ಹಿನ್ನಲೆಯಲ್ಲಿ ಬಸ್ ಗೆ ಟೆಂಗಿನ ತೊರಣಗಳು ಕಟ್ಟಿ, ಅದಕ್ಕೆ ಪೂಜೆ ಮಾಡಿ, ಸಾರಿಗೆ ವ್ಯವಸ್ಥಾಪಕರಿಗೆ ಮತ್ತು ಬಸ್ ನ ಚಾಲಕ ಮತ್ತು ಕಂಡಕ್ಟರ್ ಗೆ ಸನ್ಮಾನಿಸಿ ಗೌರವ ಸಲ್ಲಿಸುವ ಮೂಲಕ ವೆಂಕಟಾಪೂರ.ಕೆ ಗ್ರಾಮಸ್ಥರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.
