ಕಮಲನಗರ ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ 2025ರ ಹೊಸ ವರ್ಷಕ್ಕೆ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಅದ್ಧೂರಿ ಸ್ವಾಗತ ಮಾಡಿದರು.
ಕಮಲನಗರ ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ 2025ರ ಹೊಸ ವರ್ಷಕ್ಕೆ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಅದ್ಧೂರಿ ಸ್ವಾಗತ ಮಾಡಿದರು.
ಭಾಗಿರಥಿ ಶಾಲೆಯಲ್ಲಿ 2025ರ ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ
ಕಮಲನಗರ: ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ನೂತನ ವರ್ಷದ ಹಿನ್ನಲೆಯಲ್ಲಿ ಬುಧವಾರ ಶಾಲಾ ಮಕ್ಕಳಿಗೆ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇಡೀ ಜಗತ್ತೇ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದಂತೆ ಶಾಲೆ ಮಕ್ಕಳು ಸಂಭ್ರಮಿಸಿದರು. ನೂರಾರು ಮಕ್ಕಳು ಖೂಷಿ, ಬೇಸರದ 2024ಕ್ಕೆ ಗುಡ್‍ಬೈ ಹೇಳಿ, ಕೋಟೊ ಕೋಟಿ ಕನಸಿನ 2025ರ ವರ್ಷಕ್ಕೆ ಹಾಯ್, ಹಾಯ್ ಎಂದು ಸಂಭ್ರಮದಿಂದ ವೆಲ್ ಕಮ್ ಮಾಡಿದರು.
ಶಾಲೆಯ ವರ್ಗ ಕೋಣೆಗಳು ಸ್ವಚ್ಛಗೊಳಿಸಿ ಸಿಂಗರಿಸಿದರು. ಶಾಲೆ ಮುದ್ದು ಮಕ್ಕಳಿಂದ ಡಿಜೆ ಹಾಡಿಗೆ ಮಕ್ಕಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಮಕ್ಕಳಿಂದ ಕೇಕ್ ಕತ್ತರಿಸಿ ಪರಸ್ಪರ ಹೊಸ ವರ್ಷದ ಶೂಭ ಕೋರಿದ ಮೇಲೆ ಸಿಹಿಕೇಕ್ ಮತ್ತು ಸಮೋಸಾ ತಿನ್ನುವÀ ಮೂಲಕ ಸಂಭ್ರಮಿಸಿದರು.
ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ, ಶೇಕ್ ಇಜಾಜ್, ಶ್ರೀದೇವಿ ಸೋನಕಾಂಬಳೆ, ದೀಪಮಾಲಾ ಸೂರ್ಯವಂಶಿ, ರಾಜಶ್ರೀ ಸಿರಗಿರೆ, ಶೀತಲ ನಂದಕುಮಾರ ಹಂಗರಗೆ, ಉಷಾ ವಿದ್ಯಾಸಾಗರ, ಅಂಜಲಿ ಸ್ವಾಮಿ, ಪಂಚಫೂಲಾ, ಅಶ್ವೀನಿ ಸೇರಿದಂತೆ ಶಾಲೆ ಮುದ್ದು ಮಕ್ಕಳು ಪಾಲ್ಗೊಂಡಿದರು.