ಡೊಂಗರಗಾಂವ ಗ್ರಾಮ ಪಂಚಾಯತಗೆ ಅವಿರೋಧ ಆಯ್ಕೆ

ಡೊಂಗರಗಾಂವ ಗ್ರಾಮ ಪಂಚಾಯತಗೆ ಅವಿರೋಧ ಆಯ್ಕೆ

ಡೊಂಗರಗಾಂವ ಗ್ರಾಮ ಪಂಚಾಯತಗೆ ಅವಿರೋಧ ಆಯ್ಕೆ

ಕಮಲಾಪೂರ: ತಾಲೂಕಿನ ಡೊಂಗರಗಾಂವ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅನೀಲಕುಮಾರ ಪಿ.ಬೆಳಕೇರಿ ಉಪಾಧ್ಯಕ್ಷೆಯಾಗಿ ಸಂಗೀತ ಉಮೇಶ ರಾಠೋಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರರಾದ ಮೊಹಮ್ಮದ ಮೊಶಿನ ಅಹಮದ್ ಅವರು ತಿಳಿಸಿದ್ದಾರೆ.

     ಒಟ್ಟು 18 ಸದಸ್ಯ ಬಲ ಹೊಂದಿರುವ ಡೊಂಗರಗಾಂವ ಗ್ರಾಮ ಪಂಚಾಯತವು, ಇಂದು ನಡೆದ ಚುನಾವಣೆಯಲ್ಲಿ 16 ಸದಸ್ಯರು ಹಾಜರಿದ್ದರು.ಅದ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ,ಉಪಾದ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆ ಮೀಸಲಾಗಿತ್ತು. ಈ ಚುನಾವಣೆಯಲ್ಲಿ ಅನೀಲಕುಮಾರ ಪಿ ಬೇಳಕರಿ ಅವರು ಅವಿರೋಧವಾಗಿ ಆಯ್ಕೆ ಮಾಡಲಾಯಿತು.