ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಕಲಬುರಗಿ : ಹಿಂದೂ ಸಮುದಾಯವು ವಿಶ್ವಾದ್ಯಂತ ಮಹಾನ್ ಋಷಿ-ಕವಿ ವಾಲ್ಮೀಕಿ ಅವರ ಜನ್ಮವನ್ನು ಆಚರಿಸುತ್ತೇವೆ ಎಂದು ಕರವೇ(ಪ್ರವೀಣ ಶೆಟ್ಟಿ) ಬಣದ ಕಲಬುರಗಿ ತಾಲೂಕಾ ಅಧ್ಯಕ್ಷ ವಿಜಯಕುಮಾರ ಅಂಕಲಗಿ ಹೇಳಿದರು
ನಗರದ ರಾಜೀವ ಗಾಂಧಿ ಬಡಾವಣೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ
ವಾಲ್ಮೀಕಿಯುವರು ರಾಮಾಯಣ" ಮಹಾಕಾವ್ಯವನ್ನು ರಚಿಸಿದ್ದಾರೆ. ಕ್ರಿಸ್ತಪೂರ್ವ 5 ನೇ ಶತಮಾನದಲ್ಲಿ ಅವರು ಅಮರ ಮಹಾಕಾವ್ಯವಾದ "ರಾಮಾಯಣ" ದಲ್ಲಿ ಭಗವಾನ್ ರಾಮನ ಕಥೆಯನ್ನು ಸಂಯೋಜಿಸಿದರು. ಅವರು ಸಂಸ್ಕೃತ ಭಾಷೆಯಲ್ಲಿ ಮಹಾಕಾವ್ಯ 24,000 'ಶ್ಲೋಕಗಳು ಸಂಕಲಿಸಿದ್ದಾರೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ,ಕಾಂಗ್ರೆಸ ಮುಖಂಡ ಉಮೇಶ ರಾಠೋಡ,ಮಹಾನಗರ ಪಾಲಿಕೆಯ ಜೆಇಗಳಾದ ಬಾಬುರಾವ ಹಾಗೂ ಅಲ್ಲಾವುದ್ದಿನ,ಮತ್ತು ರಾಜೀವ ಗಾಂಧಿ ಬಡಾವಣೆಯ ಮುಖಂಡರಾದ ಶಂಕರ ಡೊಣ್ಣೂರ,ಸಚೀನ ಬಬಲಾದಕರ್ ಸೇರಿದಂತೆ ಇತರರು ಇದ್ದರು.
.