ಮಾರ್ಚ್ 10ರಂದು ಆಡಕಿಯಲ್ಲಿ ಜೈವಿಕ ಕೃಷಿ ಸಂವಾದ

ಮಾರ್ಚ್ 10ರಂದು ಆಡಕಿಯಲ್ಲಿ ಜೈವಿಕ ಕೃಷಿ ಸಂವಾದ

ಮಾರ್ಚ್ 10ರಂದು ಆಡಕಿಯಲ್ಲಿ ಜೈವಿಕ ಕೃಷಿ ಸಂವಾದ

ಸೇಡಂ: ತಾಲೂಕಿನ ಆಡಕಿ ಗ್ರಾಮದಲ್ಲಿ ಯುವ ಪ್ರೇರಣೆ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯು ರೈತರೊಂದಿಗೆ ಜೈವಿಕ ಕೃಷಿಯ ಕುರಿತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಆಯೋಜಕ ಪ್ರಮೋದ ದೇಶಪಾಂಡೆ ತಿಳಿಸಿದ್ದಾರೆ. ಮಾರ್ಚ್ 10ರಂದು ಸಂಜೆ 5 ಗಂಟೆಗೆ ಗ್ರಾಮದ ಶ್ರೀ ವೆಂಕಟರಮಣ ಸಭಾ ಭವನದಲ್ಲಿ ನಡೆಸಲಾಗುವ ಸಂವಾದದಲ್ಲಿ ರೈತರು ಭಾಗವಹಿಸಿ ಜೈವಿಕ ಕೃಷಿಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು. ಈ ಸಂವಾದದಲ್ಲಿ ಐಪಿಎಲ್ ಬಯೋಲಾಜಿಕಲ್ ಸಂಸ್ಥೆಯ ಪರಿಣಿತರು ರೈತರಿಗೆ ಮಾರ್ಗದರ್ಶನ ನೀಡಲಿದ್ದು, ಆಡಕಿ ಮತ್ತು ಸುತ್ತಮುತ್ತಲಿನ ರೈತರು ಭಾಗವಹಿಸಬಹುದು ಎಂದು ಅವರು ತಿಳಿಸಿದ್ದಾರೆ.