ಸಚಿವ ಡಾ.ಶರಣಪ್ರಕಾಶ ಪಾಟೀಲರ 58ನೇ ಜನುಮ ದಿನಾಚರಣೆ : ಅಭಿಮಾನಿಗಳಿಂದ ಹಾಲಿನ ಅಭೀಷೆಕ
ಸಚಿವ ಡಾ.ಶರಣಪ್ರಕಾಶ ಪಾಟೀಲರ 58ನೇ ಜನುಮ ದಿನಾಚರಣೆ : ಅಭಿಮಾನಿಗಳಿಂದ ಹಾಲಿನ ಅಭೀಷೆಕ
ಚಿಂಚೋಳಿ :
ಅಭಿವೃದ್ಧಿ ಹರಿಕಾರ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ 58ನೇ ವರ್ಷದ ಜನ್ಮ ದಿನಾಚರಣೆ ನಿಮಿತ್ಯವಾಗಿ ಸುಲೇಪೇಟ ಬಸವೇಶ್ವರ ವೃತ್ತದ ಬಳಿ ಹೋಬಳಿ ಮಟ್ಟದ ಕಾಂಗ್ರೇಸ್ ಕಾರ್ಯಕರ್ತ ಹಾಗೂ ಅಭಿಮಾನಿಗಳಿಂದ ಸಚಿವರ ಭಾವಚಿತ್ರಕ್ಕೆ ಐದು ಲೀಟರ್ ಹಾಲಿನ ಅಭಿಷೇಕ ಮಾಡಿ, ನಾಲ್ಕು ಕೆಜಿ ಕೇಕ್ ಕತ್ತರಿಸುವ ಮೂಲಕ ಸಚಿವ ಶರಣಪ್ರಕಾಶ ಪಾಟೀಲರ ಹುಟ್ಟು ಹಬ್ಬ ಆಚರಿಸಿ ಅಭಿಮಾನದ ಭಕ್ತಿ ಮೇರೆದರು.
ಬಳಿಕ ಸಮುದಾಯ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಮುಖಂಡರಾದ ಮೇಘರಾಜ ರಾಠೋಡ, ಚಾಂದ ಪಾಶಾ ಮೂಬಿನ್, ನಾಸೀರ್ ಹುಸೇನ್ ಮದರಗಿ, ಶಾಮರಾವ ಮಾದೇಶ, ಮಲ್ಲಿಕಾರ್ಜುನ ಗುಲಗುಂಜಿ, ಬಸವರಾಜ ಬಿರಾದಾರ, ರಜಾಕ್ ಪಟೇಲ್, ಸಂಪತ್ತ್ ಕುಮಾರ ಬೆಳ್ಳಿಚುಕ್ಕಿ, ಬಾಬಣ್ಣ ಗುಲಗುಂಜಿ, ಜಾಫರ್ ಖುರೇಶಿ ಅವರು ಉಪಸ್ಥಿತರಿದರು.