ಎಲ್ಲಾ ರೋಗಕ್ಕೆ ಕಲಬುರಗಿಯ ಮನ್ನೂರ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ
ಮಣ್ಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ಸಾಧನೆ
ಅಪರೂಪದ ಗುಲಿಯನ್ ಬ್ಯಾರೆ ಸಿಂಡ್ರೋಮ್ ಕಾಯಿಲೆಗೆ ಯಶಸ್ವೀ ಚಿಕಿತ್ಸೆ
ಕಲ್ಯಾಣ ಕರ್ನಾಟಕ ಭಾಗದ ವೈದ್ಯರಿಂದಲ್ಲೂ ಹೈ ರಿಸ್ಕ್ ರೋಗಕ್ಕೂ ಚಿಕಿತ್ಸೆ
ಎಲ್ಲಾ ರೋಗಕ್ಕೆ ಕಲಬುರಗಿಯ ಮನ್ನೂರ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ
ಕಲಬುರಗಿ: ಅತಿ ಅಪರೂಪದ ಗುಲಿಯನ್ ಬ್ಯಾರೆ ಸಿಂಡ್ರೋಮ್ ಕಾಯಿಲೆಯಿಂದ ನರಳುತ್ತಿದ್ದ ಯುವಕನಿಗೆ ಇಲ್ಲಿನ ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಸರಿಯಾದ ಸಮಯಕ್ಕೆ ರೋಗವನ್ನು ಪತ್ತೆ ಹಚ್ಚಿ ಬಾಲಕನಿಗೆ ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ರೋಗಿಯ ಜೀವ ಉಳಿಸಲಾಗಿದೆ ಎಂದು ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಡಾ.ಫಾರೂಕ್ ಅಹ್ಮದ್ ಮಣೂರ್ ತಿಳಿಸಿದ್ದಾರೆ
ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿರುವ ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರೂಕ್ ಅಹ್ಮದ್ ಮಣೂರ್ ಅವರು ಮಾತನಾಡಿ ಗುಲಿಯನ್ ಬ್ಯಾರೆ ಸಿಂಡ್ರೋಮ್ ರೋಗ ಅಪರೂಪದ ರೋಗವಾಗಿದ್ದು, ಸಮರ್ಥ್ (೧೪) ಇಂಥದ್ದೊAದು ಸಮಸ್ಯೆಯಿಂದ ೧೦ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾದಾಗ ಆತನ ಕೈ-ಕಾಲು ಆಡಿಸುವ ಶಕ್ತಿ ಸಹ ಇರಲಿಲ್ಲ. ಮೇಲಾಗಿ ಉಸಿರಾಟ ಸಮಸ್ಯೆ ಸಹ ಕಾಡುತ್ತಿತ್ತು. ಹೀಗಾಗಿ ತಕ್ಷಣ ತಜ್ಞ ವೈದ್ಯರಾದ ಡಾ.ಶ್ರೀಕಾಂತ್, ಡಾ.ಮುಝಮ್ಮಿಲ್ ಹಾಗೂ ಡಾ. ಸತೀಶ್ ಶರಣಪ್ಪ ಅವರನ್ನು ಒಳಗೊಂಡ ತಜ್ಞ ವೈದ್ಯರ ತಂಡ ಬಾಲಕನಿಗೆ ಯಶಸ್ವೀ ಚಿಕಿತ್ಸೆ ನೀಡುವಲ್ಲಿ ಸಫಲರಾಗಿದ್ದಾರೆ ಎಂದು ವಿವರಿಸಿದರು.
ಬಾಲಕನ ಕುಟುಂಬಸ್ಥರು ಪಾರ್ಶ್ವವಾಯು/ಹಾವು ಕಡಿತ ಇರಬಹುದು ಎಂದು ಗೊಂದಲಕ್ಕೆ ಒಳಗಾಗಿ ಸುಮಾರು ಒಂದು ವಾರ ಅಲ್ಲಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಮಣೂರ್ ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದರು. ತಕ್ಷಣ ಇಡೀ ದೇಹದ ವೈದ್ಯಕೀಯ ತಪಾಸಣೆ ಬಳಿಕ ಗುಲಿಯನ್ ಬ್ಯಾರೆ ಸಿಂಡ್ರೋಮ್ ಸಮಸ್ಯೆ ಇರುವುದು ಪತ್ತೆಯಾಯಿತು ಎಂದು ಚಿಕಿತ್ಸಾ ವಿಧಾನದ ಕುರಿತು ಹೇಳಿದರು. ಈ ರೋಗದ ಪ್ರಮುಖ ಅಂಶವೆಂದರೆ , ಚಿಕಿತ್ಸೆ ದೊರಕುವುದು ವಿಳಂಬವಾದರೆ ರೋಗಿಯ ಒಂದೊಂದೇ ಅಂಗ ಸ್ವಾಧೀನ ಕಳೆದುಕೊಳ್ಳುತ್ತಾ ಹೋಗುತ್ತದೆ. ಹೀಗಾಗಿ ಸಾವಿನ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಕ್ಕಾಗಿ ಆದಷ್ಟು ಬೇಗ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ಮನುಷ್ಯನಿಗೆ ಕೈ ,ಕಾಲೂ ದೌರ್ಬಲ್ಯ,ಉಸಿರಾಟದಲದಲಿ ತೊಂದರೆ ಆಗುತ್ತದರೆ ಇಂತಹ ಸಮಯದಲ್ಲಿ ನಿರ್ಲಕ್ಷ ಮಾಡದೆ ಸಮಿಪದ ತಜ್ಣ ವೈದ್ಯರಿಗೆ ಭೇಟಿನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಒಂದು ವೇಳೆ ೮ ರಿಂದ ೯ ದಿನ ನಿರ್ಲಕ್ಷ ಮಾಡಿದ್ದಾರೆ ಜೀವಕ್ಕೆ ಅಪಾಯವಾಗುತ್ತದೆ ಎಂದು ಸಲಹೆ ನೀಡಿದ್ದರು.
ನಂತರ ಆಸ್ಪತ್ರೆಯ ಜನರಲ್ ಮೆಡಿಸಿನ್ ವೈದ್ಯ ಡಾ. ಶ್ರೀಕಾಂತ.ಎ.ಕೆ ಅವರು ಮಾತನಾಡಿ, ರೋಗಿ ದಾಖಲಾದ ಸಮಯದಲ್ಲಿ ಯಾವುದೇ ರೀತಿಯ ಚಲನ ವಲನ ಇರಲ್ಲಿಲ್ಲ. ನಂತರ ಇಮ್ಯುನೊಗ್ಲೋಬಿನ್ ಚಿಕಿತ್ಸೆ ನೀಡಲಾಯಿತು. ಮೊದಲು ಕೆಲ ದಿನ ಚಿಕಿತ್ಸೆಗೂ ಸ್ಪಂದಿಸುತ್ತಿರಲಿಲ್ಲ, ನಂತರ ವೆಂಟಿಲೇಟರ್ ಗೆ ಸ್ಥಳಾಂತರ ಮಾಡಲಾಯಿತು. ಅಗತ್ಯ ಚಿಕಿತ್ಸಾ ಕ್ರಮದ ಜೊತೆಗೆ ಫಿಸಿಯೊಥೆರಪಿ - ಎದೆ, ಮೇಲಿನ ಅಂಗ, ಕೆಳಗಿನ ಅಂಗ ಮತ್ತು ಸಜ್ಜುಗೊಳಿಸುವಿಕೆ ವ್ಯಾಯಾಮಗಳನ್ನು ಮಾಡಿಸುವ ಮೂಲಕ ಬಾಲಕ ಚೇತರಿಸಿಕೊಳ್ಳಲು ಚಿಕಿತ್ಸೆ ನೀಡಲಾಯಿತು ಈಗ ಬಾಲಕ ಸಂಪೂರ್ಣವಾಗಿ ಗುಣಮುಖನಾಗಿದ್ದು, ಪೋಷಕಾಂಶಯುಕ್ತ ಆಹಾರ ಕ್ರಮದ ಕುರಿತು ಬಾಲಕನ ಪೋಷಕರಿಗೆ ಸಲಹೆ ನೀಡಲಾಗಿದೆ ಎಂದರು.
ಡಿ.ಆರ್.ಎನ್.ಬಿ ತಜ್ಞ ವೈದ್ಯ ಡಾ.ಸತೀಶ್ ಶರಣಪ್ಪ ಮಾತನಾಡಿ ಈ ಬಾಲಕ ಆಸ್ಪತ್ರೆಯಲ್ಲಿ ದಾಖಲಾದಗ ೪೦ ಕೆ.ಜಿ ಇದ್ದಿದ್ದ ಇವರಿಗೆ ಇವರ ತೂಕದ ಅನೂಗುಣವಾಗಿ ಐವಿಐಜಿ ೯೦ ಗ್ರಾಮ ಅನ್ನು ೫ ದಿನಗಳಲ್ಲಿ ಹಂತ ಹಂತವಾಗಿ ಕೊಡುವುದರ ಮೂಲಕ ಇವರಿಗೆ ಶಕ್ತಿ ತುಂಬಲಾಯಿತ್ತು. ಇದಕ್ಕೆ ಮುಖ್ಯಕಾರಣ ಬಾಲಕನ ಕುಟುಂಬಸ್ಥರು ಬಾಲಕನ ಆರೋಗ್ಯದಲ್ಲಿ ಏರು ಪೇರಾದಾಗ ನಿರ್ಲಕ್ಷ ಮಾಡದೆ ಕಡಿಮೆ ಸಮಯದಲ್ಲಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆದಕಾರಣ ಬಾಲಕ ಬೇಗ ಗುಣಮುಖ ವಾಗಲು ಸಹಕಾರಿ ಆಯಿತ್ತು ಒಂದು ವೇಳೆ ನಿರ್ಲಕ್ಷ ಮಾಡಿದ್ದರೆ ಬಾಲಕನ ಜೀವಕ್ಕೆ ಅಪಾಯ ವಿತ್ತು ಎಂದು ತಿಳಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಡಾ. ಶ್ರೀಕಾಂತ.ಎ.ಕೆ, ಡಾ.ಸತೀಶ್ ಶರಣಪ್ಪ, ಡಾ. ಮುಜಮ್ಮಿಲ್, ಡಾ.ರೀಜ್ವಾನ, ವಿಕ್ಕಿ ಪವಾರ ಉಪಸ್ಥಿತರಿದ್ದರು.
{೧೪ ವರ್ಷದ ಬಾಲಕ ಸಮರ್ಥ್ನಿಗೆ ಕೈ / ಕಾಲುಗಳಲ್ಲಿ ದೌರ್ಬಲ್ಯ ಕಂಡು ಕುಟುಂಬಸ್ಥರು ಪಾರ್ಶ್ವವಾಯು ಹಾವೂ ಹಾವು ಕಡಿತ ಎಂದು ಗೊಂದಲಕಿಡಾಗಿದ್ದರು ರೋಗಿಯು ಸುಮಾರು ಒಂದು ವಾರದ ನಂತರ ಮನ್ಬೂರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು, ಆವಾಗ ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಸರಿಯಾದ ಸಮಯಕ್ಕೆ ರೋಗವನ್ನು ಪತ್ತೆ ಹಚ್ಚಿ ನುರಿತ ವೈದ್ಯರ ತಂಡದಿಂದ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ರೋಗಿಯ ಜೀವ ಉಳಿಸಲಾಗಿದೆ.
ಡಾ. ಫಾರುಕ್ ಅಹ್ಮದ ಮಣ್ಣೂರ
ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮುಖ್ಯಸ್ಥರು ಕಲಬುರಗಿ}
ನನಗೆ ಆಸ್ಪತ್ರೆಗೆ ಬಂದಾಗ ಕೈ, ಕಾಲು ಏನು ಅಲುಗಾಡಿಸಲು ಬರುತ್ತಿರಲಿಲ್ಲಾ ನೋವು ಸೇರಿದಂತೆ ಎಲ್ಲಾ ಸ್ಪರ್ಷವನ್ನು ಅನುಭವಿಸುತ್ತಿದೆ ಹಾಗೂ ತಿಳಿಯುತ್ತಿದೆ ಆದರೆ ಚಲನೆ ಮಾಡಲು ಆಗುತ್ತಿರಲಿಲ್ಲಾ ಮನ್ನೂರ ಆಸ್ಪತ್ರೆಯ ವೈದ್ಯರು ನನಗೆ ಕುಟುಂಬದ ಸದಸ್ಯನಂತೆ ಆರೈಕೆ ಮಾಡಿದ್ದಾರೆ ಅವರಿಗೆ ಧನ್ಯವಾದಗಳು.
ಸಮರ್ಥ್, ಬ್ಯಾರೆ ಸಿಂಡ್ರೋಮ್ ಕಾಯಿಲೆಗೆ ಯಶಸ್ವೀ ಚಿಕಿತ್ಸೆ ಪಡೆದ ಬಾಲಕ
{ಈ ಬಾಲಕ ೧೨ ದಿನ ವೆಟಿಂಲೇಟರ್ ಮೇಲೆ ಇರುವ ಕಾರಣ ತುಂಬಾ ಹೈ ರಿಸ್ಕ್ ಕೇಸ್ ಆಗಿದಕಾರಣ ಬಾಲಕನ ತುಕ. ಕಡಿಮೆ ಆಗಬಾರದೆಂದು ನಿರಂತರವಾಗಿ ನಳಿಗೆ ಮೂಲಕ ಅನ್ನನಾಳಕ್ಕೆ ಪೌಷ್ಠಿಕ ಆಹಾರವನ್ನು ಪ್ರತಿ ೨ ಗಂಟೆಗೊಮ್ಮೆ ನೀಡಲಾಯಿತ್ತು. ಅಗತ್ಯ ಚಿಕಿತ್ಸಾ ಕ್ರಮದ ಜೊತೆಗೆ ಫಿಸಿಯೊಥೆರಪಿ ಜೊತೆಗೆ ಬಾಲಕ ಚೇತರಿಸಿಕೊಳ್ಳಲು ಚಿಕಿತ್ಸೆ ನೀಡಲಾಯಿತು
ಡಾ. ಮುಜಮ್ಮಿಲ್,ಅರವಳಿಕೆ ತಜ್ಞ ವೈದ್ಯರು ,ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ,ಕಲಬುರಗಿ}