ಚಿಂಚೋಳಿ : ನ್ಯಾಯಾಲಯ ಕಲಾಪ ಬಹಿಷ್ಕರಿಸಿ ವಕೀಲರು ಪ್ರತಿಭಟನೆ
ವಕೀಲರ ಮೇಲೆ ನಡೆಯುತ್ತಿರು ಹಲ್ಲೆಗೆ ರಕ್ಷಣೆಗಾಗಿ ಘನವೆತ್ತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ
ಚಿಂಚೋಳಿ : ನ್ಯಾಯಾಲಯ ಕಲಾಪ ಬಹಿಷ್ಕರಿಸಿ ವಕೀಲರು ಪ್ರತಿಭಟನೆ
ಚಿಂಚೋಳಿ : ತಮಿಳುನಾಡು ರಾಜ್ಯದ ಹೊಸೂರು ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಯೊಬ್ಬ ವಕೀಲರ ಮೇಲೆ ಬರಬರವಾಗಿ ಹಲ್ಲೆ ನಡೆಸಿರುವ ಘಟನೆಗೆ ಖಂಡಿಸಿ, ಚಿಂಚೋಳಿ ವಕೀಲರ ಸಂಘವು ಒಂದು ದಿನದ ನ್ಯಾಯಾಲಯ ಕಲಾಪಗಳಲ್ಲಿ ಭಾಗಿಯಾಗದೆ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕಲಾಪ ಬಹಿಷ್ಕರಿಸಿ, ಪಟ್ಟಣದ ನ್ಯಾಯಾಲಯ ಪ್ರವೇಶದ ಮುಖ್ಯದ್ವಾರಕ್ಕೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ, ರಾಷ್ಟ್ರದ ಘನವೆತ್ತ ರಾಷ್ಟ್ರಪತಿಗಳಿಗೆ ಚಿಂಚೋಳಿ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.
ಬಳಿಕ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಮಾತನಾಡಿ, ಭಾರತ ದೇಶದಲ್ಲಿನ ವಕೀಲರಿಗೆ ಕೇಂದ್ರ ಮತ್ತು ರಾಜ್ಯ ಸರಾಕರಗಳ ಗೃಹ ಇಲಾಖೆಗಳಿಂದ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ಸಂವಿಧಾನ ರಕ್ಷಣೆಯಲ್ಲಿ ಮತ್ತು ಅದರ ಬದ್ಧ ತೆಯಂತೆ ನ್ಯಾಯಾ ಒದಗಿಸುವ ಕೆಲಸದ ವಕೀಲ ವೃತ್ತಿಯಲ್ಲಿ ತೋಡಗಿಕೊಂಡು ಮಾಡುತ್ತಿರುವ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಲೆ ಇವೆ. ಕಳೆದ ಎರಡು ದಿನಗಳ ಹಿಂದೆ ನಡೆದ ತಮಿಳುನಾಡು ರಾಜ್ಯದ ಹೊಸೂರು ನ್ಯಾಯಾಲಯದಲ್ಲಿ ನ್ಯಾಯ ಒದಗಿಸುವ ವೃತ್ತಿಯ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿ ತೋಡಗಿಕೊಂಡಿದ್ದ ವಕೀಲರ ಮೇಲೆ ವ್ಯಕ್ತಿಯೊಬ್ಬ ಬರಬರವಾಗಿ ಹಲ್ಲೆ ನಡೆಸಿದನ್ನು ಇಡೀ ರಾಷ್ಟ್ರವನ್ನೆ ಬೆಚ್ಚಿ ಬಿಳುವಂತೆ ಮಾಡಿದೆ. ಈ ಹಲ್ಲೆಯಿಂದ ವಕೀಲರ ವೃತ್ತಿಗೆ ಧಕ್ಕೆ ಬರುವುದಲ್ಲದೆ, ವೃತ್ತಿ ಮಾಡುವುದಕ್ಕೂ ಮತ್ತು ಕಲಿಯುವುದಕ್ಕೂ ಹೆದರುವ ಪರಿಸ್ಥಿ ನಿರ್ಮಾಣವಾಗುತ್ತಿದೆ ಹಾಗೂ ಸಾರ್ವಜನಿಕ ಜನಸಾಮಾನ್ಯರಲ್ಲಿಯೂ ಭಯ ಹುಟ್ಟಿಸುವಂತೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಕೀಲರ ಮೇಲಿನ ಹಲ್ಲೆಗಳು ತಡೆಯಲಾಗುತ್ತಿಲ್ಲ. ಹೀಗಾಗಿ ಸರಕಾರ ವಕೀಲರ ಮೇಲಿನ ಹಲ್ಲೆಗಳ ವಿರುದ್ಧ ಗಂಭೀರ ಕ್ರಮಕೈಗೊಂಡು ವಕೀಲರಿಗೆ ರಕ್ಷಣೆ ಮಾಡುವ ಕ್ರಮಕೈಗೊಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಗೃಹ ಇಲಾಖೆಗೆ ಸೂಚನೆ ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರರ ಮುಖಾಂತರ ಘನವೆತ್ತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.
ಹಿರಿಯ ವಕೀಲ ವಿಶ್ವನಾಥ ಬೆನಕಿನ್, ವಸಂತ ರಾಠೋಡ, ಚಂದ್ರಶೆಟ್ಟಿ ಜಾಧವ್, ಶ್ರೀನಿವಾಸ ಭಂಡಿ, ವಿಜಯಕುಮಾರ ರಾಠೋಡ, ದೀಲೀಪ ಚವ್ಹಾಣ, ನಾಗಭೂಷಣ ಎಚ್, ಚಂದು ಮಲಸಾ, ಜಗನ್ನಾಥ ಗಂಜಗಿರಿ, ಶೇಕ್ ಭಕ್ತಿಯಾರ, ಭೀಮಾಶಂಕರ ಕಳಸ್ಕರ್, ರಾಜಶೇಖರ ಉಡಗಿ, ಮಾಣಿಕಾರವ ಅಣವಾರ, ಇರ್ಫಾನ ಮಾಲಿಪಾಟೀಲ, ದೇವೀಂದ್ರ ಜಾಬೀನ್, ರಾಜೇಂದ್ರ ವರಮಾ ಅವರು ಸೇರಿದಂತೆ ಹಲವು ವಕೀಲರು ಪ್ರತಿಭಟನೆಯಲ್ಲಿ ಉಪಸ್ಥಿತರಿದರು.