ಕಲ್ಯಾಣ ಕರ್ನಾಟಕದಲ್ಲಿ ಮಾದಕ ವಸ್ತುಗಳಿಗೆ ಕಡಿವಾಣ ಯಾವಾಗ..?

ಕಲ್ಯಾಣ ಕರ್ನಾಟಕದಲ್ಲಿ ಮಾದಕ ವಸ್ತುಗಳಿಗೆ ಕಡಿವಾಣ ಯಾವಾಗ..?

ಕಲ್ಯಾಣ ಕರ್ನಾಟಕದಲ್ಲಿ ಮಾದಕ ವಸ್ತುಗಳ ಮಾರಾಟ ಹೆಚ್ಚಳ

ಉಡ್ತಾ ಪಂಜಾಬ ಆಗುವತ್ತ ಸಾಗುತ್ತಿದೆ ಶರಣರು-ದಾಸರು ನಡೆದಾಡಿದ ನಾಡು

ಕಲಬುರಗಿ: ಜುಲೈ ೩೧,

ಕಲ್ಯಾಣ ಕರ್ನಾಟಕದಲ್ಲಿ ಸೂಫಿ ಸಂತರು ಶರಣು ನಡೆದಾಡಿದ ಪುಣ್ಯಭೂಮಿ, ಜೇವರ್ಗಿಯ ಷಣ್ಮುಖ ಶಿವಯೋಗಿಗಳು, ಕಲಬುರಗಿ ಶ್ರೀ ಶರಣಬಸವೇಶ್ವರರು, ಕಲ್ಯಾಣದಲ್ಲಿ ಅಣ್ಣ ಬಸವಣ್ಣನವರು ಅನುಭವ ಮಂಟಪವನ್ನು ಕಟ್ಟಿ ಮೇಲು, ಕೀಳು ಎನ್ನದೆ ಸರ್ವರನ್ನು ಒಪ್ಪಿಕೊಂಡು ಸಮಾನತೆ ಸಾರಿದ ನಾಡು .ಈ ನಾಡಿಗೆ ಕೆಟ್ಟ ಹೆಸರು ತಟ್ಟುತ್ತಿದೆ.

ಕಲಬುರಗಿಯಲ್ಲಿ ಈಗ ಗಾಂಜಾ,ಅಫೀಮು ಸೇರಿದಂತೆ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣಿಕೆ ಪ್ರಕರಣಗಳಿಂದ ಕೆಟ್ಟ ಹೆಸರು ಬರುತ್ತಿದೆ. 

ಗ್ರಹ ಇಲಾಖೆಯ ಮಾಹಿತಿ ಪ್ರಕಾರ, 2021 ರಿಂದ 2024 ಜುಲೈ ಮಾಸದ ಇಂದಿನವರೆಗೆ ಕಲ್ಯಾಣ ಕರ್ನಾಟಕದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ 1985 ರ (NDPS) ಅಡಿಯಲ್ಲಿ 564 ಪ್ರಕರಣಗಳು ದಾಖಲಾಗಿವೆ.

ಸಂಬಂಧಪಟ್ಟ 694 ಆರೋಪಿಗಳನ್ನು ಬಂಧಿಸಲಾಗಿದೆ. 

ಕಲಬುರಗಿ ನಗರ ಮತ್ತು ಜಿಲ್ಲೆ ಸೇರಿ 269 ಪ್ರಕರಣಗಳು , ಬಳ್ಳಾರಿ 104 , ಬೀದರ್ 59, ವಿಜಯನಗರ 59, ರಾಯಚೂರು 39, ಯಾದಗಿರಿ 15, ಕೊಪ್ಪಳದಲ್ಲಿ 21, ಪ್ರಕರಣಗಳು ದಾಖಲಾಗಿ,

2024 ಜೂನ್ 1 ರ ವರೆಗೆ 57 ಪ್ರಕರಣಗಳಲ್ಲಿ 37 ಆರೋಪಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.