ಮಲ್ಲಿಕಾರ್ಜುನ ಹಡಪದ ಸುಗೂರ ಅವರಿಗೆ ಜೀ ಕನ್ನಡ ವಾಹಿನಿಯಿಂದ ಪ್ರಶಸ್ತಿ
ಮಲ್ಲಿಕಾರ್ಜುನ ಬಿ ಹಡಪದ ಸುಗೂರ
ಬೆಂಗಳೂರಿನ ವಸಂತ ನಗರದಲ್ಲಿ ಇರುವ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜೀ ಕನ್ನಡ ವಾಹಿನಿ ಅವರಿಂದ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಬಿ
ಹಡಪದ ಸುಗೂರ ಎನ್ ಅವರು ಕಳೆದ 9 ವರ್ಷಗಳಿಂದ ನಿರಂತರವಾಗಿ ಅಂಧ ಅನಾಥ ಶಾಲಾ ಮಕ್ಕಳಿಗೆ, ನಿರ್ಗತಿಕರಿಗೆ, ಹಿರಿಯ ವೃದ್ದರಿಗೆ. ಬುದ್ಧಿಮಾಂದ್ಯ ಮಕ್ಕಳಿಗೆ, ಅನಾಥರಿಗೆ , ಸಾಧು ಸಂತರಿಗೆ ಪೌರಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಅಂಗವಿಕಲರಿಗೆ, ಸೇರಿದಂತೆ 1350 ಕ್ಕೊ ಹೆಚ್ಚು ಜನರಿಗೆ ಉಚಿತವಾಗಿ ಕ್ಷೌರ ಸೇವೆ ಮಾಡಿದ್ದು ಇವರ ಕಾರ್ಯ ಶ್ಲಾಘನೀಯ, ಇವರ ಸೇವೆಯನ್ನು ಗುರುತಿಸಿ ಅವರಿಗೆ ಕರ್ನಾಟಕ ಬಿಸ್ನೆಸ್ ಸಾಮ್ರಾಟ್ ಅವಾರ್ಡ್ ಪ್ರಶಸ್ತಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಡಾ. ಮಲ್ಲಯ್ಯ ಶಾಂತಮುನಿ ಸ್ವಾಮೀಜಿ , ಶಿವಗಂಗೆ ಉಭಯ ಶ್ರೀಗಳಿಂದ ಪ್ರಶಸ್ತಿ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ನಟಿ ಪ್ರೇಮಾ, ಜೀ ಟಿ ವಿ ವಾಹಿನಿ ನಿರ್ಮಾಪಕರು, ಮಿಮಿಕ್ರಿ ಕಲಾವಿದ ಗೋಪಿ, ಹೆನಿ ಹೆಲ್ಪ್ ಸಂಸ್ಥೆ ಮತ್ತು ಜೀ ಕನ್ನಡ ವಾಹಿನಿಯ , ಮುಖ್ಯಸ್ಥರು ಉಪಸ್ಥಿತರಿದ್ದರು.