ಅಪರಿಚಿತ ವ್ಯಕ್ತಿಯ ಸಾವು

ಅಪರಿಚಿತ ವ್ಯಕ್ತಿಯ ಸಾವು

ಅಪರಿಚಿತ ವ್ಯಕ್ತಿಯ ಸಾವು 

ಶಹಾಬಾದ್ : ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಾಡಿ ಕ್ರಾಸ್ ಹತ್ತಿರ ಪಾದಚಾರಿ ಜಾಗದ ಮೇಲೆ ದಿನಾಂಕ 28/10/2024 ರಂದು ಒಬ್ಬ ಅಪರಿಚಿತ ಪುರುಷ ವ್ಯಕ್ತಿ 65 ವರ್ಷದವನು ಯಾವುದೋ ಒಂದು ರೋಗದಿಂದ ಅಸ್ವಸ್ಥತೆಯಿಂದ ಬಳಲುತ್ತಿದ್ದ, ಆತನನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. 

ಚಿಕಿತ್ಸೆ ಫಲಕಾರಿಯಾಗದೆ ಸದರಿ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದು, ನಗರ ಪೋಲಿಸ್ ಠಾಣೆಯ ಯುಡಿಆರ ಸಂಖ್ಯೆ 15/2024 ರ ಕಲಂ 194ರ ಬಿಎನಎಸಎಸ 2023 ರಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ. 

ಕಾರಣ ಸಾರ್ವಜನಿಕರು, ಸಂಬಂಧಿಕರು ಅಥವಾ ಸಂಬಂಧ ಪಟ್ಟವರು ಶಹಾಬಾದ ನಗರ ಪೋಲಿಸ್ ಠಾಣೆಯ ನಂ 08474 - 204444 ರನ್ನು ಸಂಪರ್ಕಿಸುವಂತೆ ಕೋರಲಾಗಿದೆ