ರಮೇಶ ಬಿರಾದಾರ ಜನ ಮೆಚ್ಚಿದ ಮಗ

ರಮೇಶ ಬಿರಾದಾರ ಜನ ಮೆಚ್ಚಿದ ಮಗ

ಹುಟ್ಟು ಹೋರಾಟಗಾರ,ಜನ ಮೆಚ್ಚಿದ ಮಗ, ರಮೇಶ ಬಿರಾದಾರ 

ರಮೇಶ ಬಿರಾದಾರವರು ಮೂಲತಃ ಬೀದರ ಜಿಲ್ಲೆಯ ಔರಾದ ತಾಲೂಕಿನ ಗಡಿಕುಶನೂರ ಪಟ್ಟಣಕ್ಕೆ ಹತ್ತಿರವಿರುವ ಪಾಶಪುರ ಗ್ರಾಮದವರು . ತಂದೆ ವೀರಬಸಪ್ಪ ಬಿರಾದಾರ, ತಾಯಿ ಲಕ್ಮಿಬಾಯಿ ದಂಪತಿಗಳ ಉದರದಲ್ಲಿ 1.6.1970 ರಂದು ಜನಸಿದರು.

ಬಿರಾದಾರ ಅವರು ವೃತಿಯಲ್ಲಿ ಛಾಯಾಗ್ರಾಹಕರು, ಪ್ರವರ್ತಿಯಲ್ಲಿ ಸಮಾಜ ಸೇವೆ ಜೊತೆಗೆ ಹೋರಾಟಗಾರರಾಗಿ ಗುರುತಿಸಿಕೊಂಡವರು. 

ರಮೇಶ ಅವರು ಬಿ. ಎ ಪದವಿ ಓದುತ್ತಿರುವ ದಿನಗಳಿಂದಲೆ ಕನ್ನಡ ಹಾಗೂ ಸಮಾಜಪರ ಹೋರಾಟದಲ್ಲಿ ತೊಡಗಿಸಿಕೊಂಡವರು. 

1992 ರಿಂದ 94 ವರೆಗೆ ಬೀದರ್ ಬಿಜೆಪಿ ಪಕ್ಷದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ಯುವ ಮೋರ್ಚಾ ಅಧ್ಯಕ್ಷರಾಗಿ, ತಾಲೂಕ ಅಧ್ಯಕ್ಷರಾಗಿ ಪಕ್ಷದ ಸೇವೆ ಸಲ್ಲಿಸಿದರು.

ಬೀದರನ1991ರಲ್ಲಿ ಸರ್ಕಾರದ 17 ಎಕರೆ ಜಮೀನು ಅತಿಕ್ರಮ ಮಾಡಿದವರ ವಿರುದ್ಧ ಪ್ರತಿಭಟಿ ಬ್ರಿಮ್ಸ್ ಕಾಲೇಜು ಕಟ್ಟಲು ಕಾರಣಿಕತ್ರರಾದರು.

 ರಾತ್ರಿ ಹೊತ್ತಿನಲ್ಲಿ ಪೊಲೀಸ್ ಕರ್ತವ್ಯ ವೇಳೆ ಹತ್ಯೆಯಾದಾಗ ಪೆದೆಗಳಿಗೆ ಬಂದುಕೂ ಕೊಡಿಸಲು,ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆ ನಡೆಸುತ್ತಿರುವ ವಿರುದ್ಧ ಕ್ರಮಕ್ಕೆ,ರಸ್ತೆ ಬದಿ ಅಂಗಡಿ ನಡೆಸುತ್ತಿರುವರ ವಿರುದ್ಧ ಹೋರಾಟ, ನಗರದ ರಸ್ತೆ ಅಗಲೀಕರಣಕ್ಕೆ , ಬಸ್ ತಂಗುದಾಣ ಖಾಸಗಿಯವರು ಅಕ್ರಮಿಸಿಕೊಂಡ ವಿರುದ್ಧ ಹೋರಾಡಿ ಸರ್ಕಾರದ ಗಮನಕ್ಕೆ ತಂದು ಜನರಿಗೆ ನ್ಯಾಯಾವದಗಿಸಿ ಕೊಟ್ಟಿದ್ದಾರೆ. ಇವರ ಹೋರಾಟಕ್ಕೆ ಜನರು ಜನ ಮೆಚ್ಚಿದ ಮಗ ಎಂದು ಬಿರುದು ನೀಡಿದ್ದಾರೆ.

1)2004-2008ರಲ್ಲಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ ).

2) 1995-2000ರಲ್ಲಿ ಬಸವ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮತ್ತು ಸಂಘಟನಾ ಕಾರ್ಯದರ್ಶಿಗಳಾಗಿ ಸೇವೆ.

3)1996-1999ರಲ್ಲಿ ಕುವೆಂಪು ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ, ಸಲ್ಲಿಸುವ ಜೊತೆ ಜೊತೆಗೆ 1990ರಲ್ಲಿ ಬೀದರ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷರಾಗಿ , ಜ್ನ್ಯಾನತರಂಗ ಗ್ರಂಥಾಲಯ ಸ್ತಾಪನೆ ಮಾಡಿ ಓದುಗರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ .

ರಮೇಶ ಬಿರಾದಾರ ಅವರು ಭಾಷಣ, ಉಪನ್ಯಾಸ, ಕವನ ವಾಚನ ಕಥೆ, ಲೇಖನ ಬರೆಯುವ ಹವ್ಯಾಸಇದೆ ಇವರ ಕಾವ್ಯ ನಾಮ 'ರಾಮಲಿಂಗ" (2009) ನೀಲಮ್ಮನ ಬಳಗದ ಆಧುನಿಕ ವಚನಗಳ ಕೃತಿಗಳು ಪ್ರಕಟಣೆ ಡಾ.ಬಾಬಾಸಾಹೇಬ ಅಂಬೇಡ್ಕರ್, ಹಿಂದೂ ಕೊಡಬಿಲ್ (ಹಿಂದಿಯಿಂದ ಕನ್ನಡಕ್ಕೆ ಅನುವಾದ ), ಗವಿರನ ತತ್ವಪದಗಳು, ಪಾಪನಾಶ ಲಿಂಗ ವಚನಗಳು ರಾಮಲಿಂಗ ತ್ರಿಪದಿಗಳು ಮುಂಜಾವಿಗೆ ಮಂಜುಕವಿದಾಗ ಕವನ ಸಂಕಲನಗಳು ಪ್ರಕಟಣೆ ಹಂತದಲ್ಲಿವೆ

ಬೀದರ ಜಿಲ್ಲಾ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷರಾಗಿ ಬೀದರ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷರಾಗಿ, ಕರ್ನಾಟಕ ಜ್ನ್ಯಾನ ವಿಜ್ಞಾನ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗಿ, ಸೇವೆ ಸಲ್ಲಿಸಿದ್ದಾರೆ.

1)ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಗೌರವ ಸನ್ಮಾನ (3.11.2015)

2)ಶ್ರವಣ ಬೆಳಗೊಳದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ ,

3)ಜಿಲ್ಲಾಡಳಿತದಿಂದ ಸಮಾಜ ಸೇವಾ ಪ್ರಶಸ್ತಿ (26.11.1994)

4)ಜಿಲ್ಲಾಡಳಿತದಿಂದ ಕನ್ನಡ ಹೋರಾಟಗಾರ ಪ್ರಶಸ್ತಿ ( 1.11.1997).

5) ಜಿಲ್ಲಾಡಳಿತದಿಂದ ಸಾಹಿತ್ಯ ಸೇವಾರತ್ನ ಪ್ರಶಸ್ತಿ (1.11.2017)

6) ಭಾಲ್ಕಿ ಶ್ರೀಗಳಿಂದ ಗೌರವ ಸನ್ಮಾನ(1996)

7) ಡಾ. ಚಂದ್ರಶೇಖರ ಕಂಬಾರ ಅವರಿಂದ ಸನ್ಮಾನ,

8)ದೇಶಪಾಂಡೆ ಪ್ರತಿಷ್ಟಾನ ಬೀದರವರಿಂದ "ಹುಟ್ಟು ಹೋರಾಟಗಾರ ಪ್ರಶಸ್ತಿ "ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಇವರ ಸಾಮಾಜಿಕ ಸಾಹಿತ್ಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದರು.  

-ಓಂಕಾರ ಪಾಟೀಲ

ಕಾರ್ಯದರ್ಶಿ :-ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.

ಮೊ. 6360413933