ಮಲ್ಲಬಾದ ಏತ ನೀರಾವರಿ ರೈತ ಪರ ಹೋರಾಟಗಾರರ ಮೇಲಾದ ಪ್ರಕರಣವನ್ನು ಶಾಸಕ ಡಾ ಅಜಯ ಸಿಂಗ್ ಅವರು ಹಿಂಪಡೇಯಬೇಕು ಶಂಕರ್ ಗೌಡ ಕನ್ನೊಳ್ಳಿ ಆಗ್ರಹ.
ಮಲ್ಲಬಾದ ಏತ ನೀರಾವರಿ ರೈತ ಪರ ಹೋರಾಟಗಾರರ ಮೇಲಾದ ಪ್ರಕರಣವನ್ನು ಶಾಸಕ ಡಾ ಅಜಯ ಸಿಂಗ್ ಅವರು ಹಿಂಪಡೇಯಬೇಕು ಶಂಕರ್ ಗೌಡ ಕನ್ನೊಳ್ಳಿ ಆಗ್ರಹ.
ಯಡ್ರಾಮಿ ತಾಲೂಕಿನ ಮಲ್ಲಾಬಾದ್ ಏತ ನೀರಾವರಿಯ ತಾರತಮ್ಯದ ಮಲತಾಯಿ ದೋರಣೆಯ ವಿರುದ್ಧ ಧ್ವನಿ ಎತ್ತಿದ ಹಲವಾರು ಹೋರಾಟಗಾರರ ಮೇಲೆ ತಾಲೂಕಿನ ಶಾಸಕ ಡಾ ಅಜಯ ಸಿಂಗ್ ಅವರು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದ್ದು ಖಂಡನೀಯವಾಗಿದೆ. ಈ ಹಿಟ್ಲರ ನೀತಿಯನ್ನು ಅನುಸರಿಸಿ ಹೋರಾಟಗಾರರನ್ನು ಹತ್ತಿಕುವಂತಹ ಕೆಲಸ ಇದಾಗಿದ್ದು ಈ ಅನಿಷ್ಟ ಧೋರಣೆಯನ್ನು ಶಾಸಕರು ಕೈ ಬಿಡಬೇಕು. ಹಾಗೂ ಮಲ್ಲಬಾದ ಏತ ನಿರಾವರಿ ರೈತ ಹೋರಾಟಗಾರರ ಮೇಲಾದ ಪ್ರಕರಣವನ್ನು ಶಾಸಕರು ಹಿಂಪಡೆಯಬೇಕು ಆದಷ್ಟು ಶೀಘ್ರದಲ್ಲಿ ಟೆಂಡರ್ ಕರೆದು 30 ವರ್ಷಗಳಿಂದ ನೆನೆಗುದಿಗೆ ಬಿದ್ದ ಮಲ್ಲಬಾದ ಏತ ನೀರಾವರಿ ಯೋಜನೆಯನ್ನು ಅತಿ ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು ಅದೇ ರೀತಿಯಾಗಿ ಮಲ್ಲಾಬಾದ್ ಏತ ನೀರಾವರಿ ರೈತ ಪರ ಹೋರಾಟಗಾರರ ಮೇಲಾದ ಪ್ರಕರಣವನ್ನು ಹಿಂಪಡೆಯದಿದ್ದರೆ ಯಡ್ರಾಮಿ ತಾಲೂಕಿನಲ್ಲಿ ಸರಕಾರದ ವಿರುದ್ಧ ಹಾಗೂ ಶಾಸಕರ ವಿರುದ್ಧ ಹಲವಾರು ರೈತರೊಂದಿಗೆ ರಸ್ತಾರೋಕೋ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಯಡ್ರಾಮಿ ತಾಲೂಕಿನ ಸಾಮಾಜಿಕ ಹೋರಾಟಗಾರ ಶಂಕರಗೌಡ ಕನ್ನೋಳ್ಳಿ ಸುಂಬಡ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ
ವರದಿ ಜೆಟ್ಟೆಪ್ಪ ಎಸ್ ಪೂಜಾರಿ