ಗದಗ ಕೆ ವಿ ಎಸ್ ಆರ್ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಮಹಾ ಸರಸ್ವತಿ ಪೂಜೆ
ಗದಗ ಕೆ ವಿ ಎಸ್ ಆರ್ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಮಹಾ ಸರಸ್ವತಿ ಪೂಜೆ
ಕೆ ವಿ ಎಸ್ ಆರ್ ಪ್ರೌಢಶಾಲೆಯಲ್ಲಿ ಜರುಗಿದ ಶಾಲಾ ವಾರ್ಷಿಕೋತ್ಸವ ಮತ್ತು ಮಹಾಸರಸ್ವತಿ ಪೂಜಾ ಸಮಾರಂಭದಲ್ಲಿ ನಮ್ಮ ಸಂಸ್ಥೆಯ ಚೇರಮನ್ನರು. ಭಾರತಸರಕಾರದ ಆಹಾರ ನಿಗಮದ ಸದಸ್ಯರಾದ ಶ್ರೀ ರವೀಂದ್ರನಾಥ ದಂಡಿನರವರು ಅಧ್ಯಕ್ಷತೆವಹಿಸಿ ಸಾಧಕರನ್ನು ಸನ್ಮಾನಿಸಿ ಮಾತನಾಡುತ್ತ ಮಕ್ಕಳು ನಿರಂತರ ಶ್ರಮ ವಹಿಸಿ ಓದಿದರೆ ಉತ್ತಮ ಫಲಿತಾಂಶ ಕಾಣಬಹುದು ಎಂದು ನುಡಿದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ಪಾಲಕರ ಪಾದಪೂಜೆ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾಚಾರ್ಯರಾದ ಭಂಡಾರಿ ಗುರುಗಳು ಓದಿನ ಹಂತಗಳ ಕುರಿತು ನುಡಿಗಳನ್ನಾಡಿದರು , ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಪ್ರಾಚಾರ್ಯ ಯು ಎಸ್ ಹಿರೇಮಠ ಮಕ್ಕಳಿಗೆ ಉತ್ತಮ ಕಲಿಕೆಗೆ ಬೇಕಾದ ಪೂರಕ ಅಂಶಗಳ ಕುರಿತು ಮಾತನಾಡಿದರು. ಮುಖ್ಯ ಶಿಕ್ಷಕಿ ಪಿ ಟಿ ಬಿಸನಳ್ಳಿ ಅಭಿನಂದನಾ ನುಡಿಯಾಡಿದರು. ಈ ಸಮಯದಲ್ಲಿ ಶಿಕ್ಷಕ ಎಂ ಕೆ ಬೇವಿನಕಟ್ಟಿ. ಎಸ್ ಎಸ್ ಮುಧೋಳ. ದೀಪಾ ಎಂ. ಎಸ್ ಕೆ ಬಸಾಪುರ. ಬಿ ಎನ್ ಕಮ್ಮಾರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕುಮಾರಿ ಅನ್ನಪೂರ್ಣ ಕಮ್ಮಾರ ಪ್ರಾರ್ಥಿಸಿ. ವಿದ್ಯಾ ಚೇಗರಡ್ಡಿ ಸ್ವಾಗತಿಸಿದರು. ಲಕ್ಷ್ಮಿ ಬಾರ್ಕಿ ನಿರ್ವಹಿಸಿದರು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
