ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ (ರಿ)

ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ (ರಿ)

ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ (ರಿ)

ಜ್ಞಾನದಿಂದ ಅಮೃತತ್ವ ಎಂಬ ಧ್ಯೇಯೋದ್ದೇಶದೊಂದಿಗೆ, ಮಹಿಳಾ ಹರಿದಾಸರನ್ನು ಪ್ರಕಾಶಗೊಳಿಸಿ, ಅವರ ಕೃತಿಗಳನ್ನು ಪ್ರಚಾರ ಹಾಗೂ ಪ್ರಸಾರಗೊಳಿಸಿ, ಮಹಿಳಾ ಹರಿದಾಸ ಸಾಹಿತ್ಯವನ್ನು ಪ್ರಕಟಗೊಳಿಸುವ ಸದುದ್ದೇಶದಿಂದ, ಹಿರಿಯ ಮಹಿಳಾ ಹರಿದಾಸರ ಅನುಗ್ರಹದಿಂದ, ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಇವರ ಮಾರ್ಗದರ್ಶನದೊಂದಿಗೆ ಪ್ರಾರಂಭವಾದ,

 ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ (ರಿ)

ಇದು ದಿನಾಂಕ: 04.03.2025 ರ ಶುಭ ದಿನದಂದು, ರಿಜಿಸ್ಟರ್‌ ಆಗಿ, ಕಾರ್ಯಾರಂಭ ಮಾಡಿದೆ. ಡಾ. ಸುಧಾ ದೇಶಪಾಂಡೆ ಇವರು, ಟ್ರಸ್ಟನ ಮೊದಲ ಅಧ್ಯಕ್ಷರಾಗಿ, ಡಾ.ಶಾಂತಾ ರಘೂತ್ತಮ ಇವರು ಉಪಾಧ್ಯಕ್ಷರಾಗಿ, ಡಾ.ವಿದ್ಯಾಶ್ರೀ ಕುಲ್ಕರ್ಣಿ ಇವರು ಕೋಶಾಧ್ಯಕ್ಷರಾಗಿ, ಡಾ.ವೃಂದಾ ಸಂಗಮ್‌ ಇವರು ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಸಹ ಕಾರ್ಯದರ್ಶಿಗಳಾಗಿ ಡಾ.ವಿದ್ಯಾ ಕಸ್ಬೆ, ಡಾ.ಶೀಲಾ ದಾಸ್‌, ಶ್ರೀಮತಿ ಮಾನಸ ಜಯರಾಜ್ ಕಾರ್ಯ ನಿರ್ವಹಿಸಲಿದ್ದಾರೆ. ಶ್ರೀಮತಿ ಗೌರಿ ಜಡೆ, ವಕೀಲರು ರಜಿಸ್ಟ್ರೇಶನ್‌ ಕಾರ್ಯಕ್ಕೆ ಸಹಕರಿಸಿದ್ದಾರೆ.

ಮಹಿಳಾ ಹರಿದಾಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಗೊಳಿಸುವುದು, ಅವರ ಕೃತಿಗಳನ್ನು ಪ್ರಕಟಿಸುವುದು, ರಾಗ ಸಂಯೋಜಿಸಿ ಹಾಡುವ ಮೂಲಕ ವೆಬ್‌ ಸೈಟ್‌, ಯೂ ಟ್ಯೂಬ್‌, ಪತ್ರಿಕೆಗಳು ಮುಂತಾದ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು, ಅನ್ಯ ಭಾಷೆಗಳಿಗೆ ಅನುವಾದಿಸುವುದು, ವಿಚಾರ ಸಂಕಿರಣಗಳನ್ನು ಏರ್ಪಡಿಸುವುದು, ಹಿರಿಯ ಹರಿದಾಸರನ್ನು ಗುರುತಿಸಿ ಗೌರವಿಸುವುದು, ವಾರ್ಷಿಕ ಪ್ರಶಸ್ತಿಗಳನ್ನು ನೀಡುವುದು ಮುಂತಾದ ಸಮಾಜ ಸೇವೆಯ ಕಾರ್ಯಗಳ ಗುರಿಯೊಂದಿಗೆ, ಟ್ರಸ್ಟ ರಿಜಿಸ್ಟ್ರೇಶನ್‌ ಕಾರ್ಯದೊಂದಿಗೆ ಶುಭಾರಂಭ ಮಾಡಿದೆ.

Maitreyitrust.org ಎಂಬ ವೆಬ್‌ ಸೈಟ್‌ ಹಾಗೂ https://mytreyi-kmh-trustblogspot.com ಎಂಬ ಬ್ಲಾಗ್‌ ಹಾಗೂ https://youtube.com/@maitreyi ಎಂಬ ಮಾಧ್ಯಮಗಳಲ್ಲಿ ಮೈತ್ರೇಯಿ ಮಹಿಳಾ ಹರಿದಾಸ ಟ್ರಸ್ಟ್‌ ನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಯಕಾರಿ ಮಂಡಲಿ ತಿಳಿಸಿದ್ದಾರೆ.