ಡಿ.27 ರಂದು ಜೀವಾ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಯ ಉದ್ಘಾಟನೆ
ಡಿ.27 ರಂದು ಜೀವಾ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಯ ಉದ್ಘಾಟನೆ
ಕಲಬುರಗಿ ನಗರದ ನ್ಯೂ ಜೇವರ್ಗಿ ರಸ್ತೆಯಲ್ಲಿರುವ ಸಂತೋಷ ಕಾಲೂನಿಯಲ್ಲಿ ಡಿ.27 ರಂದು 12 ಗಂಟೆಗೆ ಜೀವಾ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೀವಾ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಅಜಯ ಗುತ್ತೇದಾರ ತಿಳಿಸಿದ್ದರು.
ಜೀವಾ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿರುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉದ್ಘಾಟನಾ ಸಮಾರಂಭದಲ್ಲಿ ಬಡದಾಳದ ಪೂಜ್ಯ ಚೆನ್ನಮಲ್ಲ ಶಿವಯೋಗಿಗಳು, ಚಿನಮಗೇರಿಯ ಪೂಜ್ಯ ವೀರಮಹಾಂತ ಶಿವಚಾರ್ಯರು. ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ 9 ಪಿಠಾಧಿಪತಿಗಳಾದ ಚಿರಂಜಿವಿ ದೊಡಪ್ಪ ಅಪ್ಪ ಅವರು ಸಾನಿಧ್ಯ ವಹಿಸಲಿದ್ದಾರೆ, ಖ್ಯಾತ ಹೃದಯತಜ್ಙ ವೈದ್ಯರು ಹಾಗೂ ಲೋಕ ಸಭಾ ಸದಸ್ಯರಾದ ಡಾ.ಸಿ.ಎನ್ ಮಂಜುನಾಥ ಅವರು ಉದ್ಘಾಟಿಸಲಿದ್ದಾರೆ .
ಎಲ್ಲಾ ಚಿಕಿತ್ಸಾ ಸೌಲಭ್ಯಗಳು ಒಂದೆ ಸೂರಿನಡಿ ಕಲಬುರಗಿ ಜಿಲ್ಲೆಯ ಜನರಿಗೆ ಸಿಗಲಿದೆ. ಉತ್ತರ ಕರ್ನಾಟಕ ಭಾಗದ ಮೋದಲ ಬಾರಿಗೆ ಕಲಬುರಗಿಯಲ್ಲಿ ಕಾರ್ಮ್ ಆರ್ಥೋಪೆಡಿಕ್ ಚಿಕಿತ್ಸೆ ಸೌಲಭ್ಯ ಜನರಿಗೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಖ್ಯಾತ ಉದ್ದಿಮೆದಾರರಾದ ಅಶೋಕ ಗುತ್ತೇದಾರ ಡಾ. ಸುಶಿಲ್ ಗುತ್ತೇದಾರ, ಡಾ. ದಿವ್ಯಾ ಶ್ರೀ, ಡಾ.ಶಿಫಾಲಿ ಗುತ್ತೇದಾರ, ಸುಮೀತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.