ಬಸವಣ್ಣನ ಬಗ್ಗೆ ನಾಲಿಗೆ ಹರಿಬಿಟ್ಟ ಯತ್ನಾಳ್. ಕ್ಷಮೆಗೆ ಬಸವ ಪರ ಒಕ್ಕೂಟ ಆಗ್ರಹ
ಬಸವಣ್ಣನ ಬಗ್ಗೆ ನಾಲಿಗೆ ಹರಿಬಿಟ್ಟ ಯತ್ನಾಳ್.
ಪಶ್ಚಾತ್ತಾಪಕ್ಕಾಗಿ, ಧರ್ಮಕ್ಷೇತ್ರ ಕೂಡಲಸಂಗಮದ ಐಕ್ಯ ಮಂಟಪ ದರ್ಶನ ಮಾಡಿ, ಬಸವಣ್ಣನವರ ಕ್ಷಮೆ ಕೇಳಬೇಕು : ಬಸವ ಪರ ಒಕ್ಕೂಟ ಆಗ್ರಹ
ಚಿಂಚೋಳಿ : ನಾಲಿಗೆ ಹರಿಬಿಟ್ಟು, ವಿಶ್ವ ಧರ್ಮಗುರು ಬಸವಣ್ಣನವರನ್ನು ಅವಹೇಳನಕಾರಿಯಾಗಿ ನಿಂದನೆ ಮಾಡಿದ ಬಸವನಗೌಡ ಪಾಟೀಲ ಯತ್ನಾಳ ಅವರು ಮಾಡಿದ ಧರ್ಮನಿಂದನೆಯಪಶ್ಚಾತ್ತಾಪಕ್ಕಾಗಿ, ಧರ್ಮಕ್ಷೇತ್ರ ಕೂಡಲಸಂಗಮದ ಐಕ್ಯ ಮಂಟಪ ದರ್ಶನ ಮಾಡಿ, ಗುರು ಬಸವಣ್ಣನವರ ಕ್ಷಮೆ ಕೇಳಬೇಕು ಎಂದು ರಾಷ್ಟ್ರೀಯ ಬಸವದಳ ಸಮಿತಿಯ ತಾಲೂಕ ಅಧ್ಯಕ್ಷ ನಂದಿಕುಮಾರ ಪಾಟೀಲ್ ನಂಪಾ ಆಗ್ರಹಿಸಿದ್ದಾರೆ.
ಪಟ್ಟಣದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಕಚೇರಿಯಲ್ಲಿ ಚಿಂಚೋಳಿ ತಾಲೂಕ ಬಸವಪರ ಸಂಘಟನೆಗಳ ಒಕ್ಕೂಟವು ಸುದ್ಧಿಗಾರರೊಂದಿಗೆ ಮಾತನಾಡಿ ತಿಳಿಸಿದರು.
ಬಸವ ಧರ್ಮದ ಯಾವ ತಿಳಿವಳಿಕೆಯೂ ಇಲ್ಲದ, ಬಸವ ಧರ್ಮದ ಸಂಸ್ಕೃತಿ – ಸಂಸ್ಕಾರ ವಿಷಯಗಳ ಬಗ್ಗೆ ಏನೆಂದೂ ಗೊತ್ತಿಲ್ಲದ ಮನುಷ್ಯ ಯತ್ನಾಳ ಅವರು ದೇಶಾಭಿಮಾನ ತೋರಿಸುವ ಭರದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಬೀದರ ಜಿಲ್ಲೆಯಲ್ಲಿ , ರಾಜ್ಯ ವಕ್ಫ್ ಮಂಡಳಿಯಿಂದ ಆಗಿರುವ ರೈತರ ಭೂ ಕಬಳಿಕೆಯ ವಿಷಯವಾಗಿ ನಡೆದ ಜನಜಾಗೃತಿ ಕಾರ್ಯಕ್ರಮದ ಚಳುವಳಿಯ ಸಭೆಯಲ್ಲಿ ಮಾತನಾಡುವಾಗ ತಾಕತ್ತಿದ್ದರೆ ರೈತರೆಲ್ಲರೂ ಈ ಚಳುವಳಿಯಲ್ಲಿ ಭಾಗವಹಿಸಿರಿ. ಇಲ್ಲದಿದ್ದರೆ ಬಸವಣ್ಣ ಹೋಳ್ಯಾಗ್ ಬಿದ್ಹಂಗ್ ಬಿದ್ಧ್ ಸಾಯಿರಿ ಎಂದು ಆವೇಶ ಭರಿತವಾಗಿ ಮಾತನಾಡಿರುವುದು ಎಲ್ಲ ಬಸವಾಭಿಮಾನಿಗಳಿಗೆ ಮಾಡಿರುವ ಅವಮಾನಕರ ಸಂಗತಿಯಾಗಿದೆ. ಧರ್ಮಾಭಿಮಾನ ಮರೆತಿರುವುದು ಅತ್ಯಂತ ವಿಷಾದನಿಯ.
ಈ ಐತಿಹಾಸಿಕ ಸತ್ಯವನ್ನು ಶರಣ ಸಾಹಿತ್ಯ ಮತ್ತು ಧರ್ಮ ಸಂಸ್ಕಾರದ ಗಂಧ – ಗಾಳಿಯೇ ಗೊತ್ತಿಲ್ಲದ ವ್ಯಕ್ತಿ ಬಸವನಗೌಡ ಪಾಟೀಲ ಯತ್ನಾಳ ಆಗಿದ್ದಾರೆ.
ಇದು ಇತಿಹಾಸದ ಸತ್ಯ ಸಂಗತಿಯ ಮೇಲೆ ಎಳೆದ ಬರೆಯಲ್ಲದೇ ಬೇರೇನೂ ಅಲ್ಲ. ತಕ್ಷಣವೇ ಕೂಡಲ ಸಂಗಮದ ಗುರು ಬಸವಣ್ಣನವರ ಕ್ಷಮೆ ಯಾಚಿಸಿ, ಪಶ್ಚಾತಾಪ ಪಡಬೇಕು. ತಾನು ಮಾಡಿದ ತಪ್ಪಿಗೆ ಮಾಡಿಕೊಂಡ ಪ್ರಾಯಶ್ಚಿತದ ವಿಚಾರವು ಬಹಿರಂಗವಾಗಿ ತಿಳಿಸಿ, ಒಪ್ಪಿಕೊಳ್ಳುವ ಎದೆಗಾರಿಕೆ ಅವರು ತೋರಿಸಬೇಕು.
ಇದು ಉದಾಸೀನ ಮಾಡಿದಲ್ಲಿ ಬಸವ ಧರ್ಮದ ಮಠ ಪೀಠಾಧೀಶರು, ಧರ್ಮ ಪ್ರಚಾರಕರು, ಧರ್ಮ ಪ್ರಸಾರದ ಸಂಘ ಸಂಸ್ಥೆಗಳ ಪ್ರಮುಖರು ಒಟ್ಟಾಗಿ ಬಸವನಗೌಡ ಪಾಟೀಲ ಯತ್ನಾಳರಿಗೆ ಕೂಡಲ ಸಂಗಮ ಕ್ಷೇತ್ರಕ್ಕೆ ಕರೆಯಿಸಿ, ಬುದ್ಧಿ ಹೇಳುವ ಕಾರ್ಯ ಮಾಡುವ ಹೋಣೆಗಾರಿಕೆ ತೋರಬೇಕು ಎಂದು ಮನವಿ ಮಾಡಿಕೊಂಡಿದ್ದರಲ್ಲದೇ,
ಬಸವ ಪರವಾಗಿರುವ ಎಲ್ಲ ಪೀಠಾಧಿಪತಿಗಳು, ಬಸವಪರ ಸಂಘಟನೆಗಳ ಪ್ರಮುಖರು, ಬಸವತತ್ವ ಚಿಂತಕರೆಲ್ಲರೂ ಯಾವುದೇ ಮುಲಾಜಿಲ್ಲದೇ ನಿರ್ಧಾಕ್ಷಿಣ್ಯವಾಗಿ ಖಂಡಿಸಲೇಬೇಕು ಎಂದು ಬಸವಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿ ಒತ್ತಾಯಿಸಿದೆ.
ಈ ಸಂಧರ್ಭದಲ್ಲಿ ಅ. ಭಾ. ವೀ. ಲಿಂ. ಮಹಾಸಭಾ ಅಧ್ಯಕ್ಷ ಶರಣು ಪಾಟೀಲ್ ಮೋಟಕಪಳ್ಳಿ, ಬಸವ ಸೇವಾ ಸಮಿತಿ ಅಧ್ಯಕ್ಷ ನೀಲಕಂಠ ಸೀಳಿನ್, ಶಂಕರ ಶಿವಪುರಿ, ವಿರೇಶ ಯಂಪಳ್ಳಿ, ಸೂರ್ಯಕಾಂತ ಹುಲಿ ಅವರು ಇದ್ದರು.