ಶಹಾಪುರಕ್ಕೆ ಜಾನಪದ ಲೋಕ/ಸಂಶೋಧನಾ ಕೇಂದ್ರ ಬರಲಿದೆ..ಸಚಿವ ದರ್ಶನಾಪುರ.

ಶಹಾಪುರಕ್ಕೆ ಜಾನಪದ ಲೋಕ/ಸಂಶೋಧನಾ ಕೇಂದ್ರ ಬರಲಿದೆ..ಸಚಿವ ದರ್ಶನಾಪುರ.
ಇಂದು ಕಲಬುರ್ಗಿಗೆ ಆಗಮಿಸಿದ್ದ ಕರ್ನಾಟಕ ಜಾನಪದ ವಿವಿಯ ಕುಲಪತಿಗಳಾದ ಡಾ.ಟಿ.ಎಂ.ಭಾಸ್ಕರ್ ಸರ್ ಅವರಿಗೆ ಕೃತಜ್ಞತೆಗಳು ಹೇಳಿ ಗೌರವಿಸಲಾಯಿತು.
ಕಾಯಕದ ನಿಜ ನಾಯಕರು, ಅಭಿವೃದ್ಧಿ ಬಗ್ಗೆ ಸದಾ ಚಿಂತನಶೀಲರು ಆದ ನಮ್ಮ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರೊಂದಿಗೆ ಮಾತಾಡಿಸಿದೆ. ಜಾನಪದ ವಿವಿಯಿಂದ ಸ್ನಾತಕೋತ್ತರ/ಸಂಶೋಧನಾ ಕೇಂದ್ರ ಶಹಾಪುರ ತಾಲ್ಲೂಕಿನಲ್ಲಿ ಸ್ಥಾಪಿಸಿ ಜಾನಪದ ಲೋಕ ನಿರ್ಮಿಸಲು ಹತ್ತು ಎಕರೆ ಭೂಮಿ ಕೊಡಿಸಲು ಸಚಿವರು ಒಪ್ಪಿಕೊಂಡ ಮಹತ್ವದ ಘಟನೆ ಇಂದು ನಡೆಯಿತು.. ನಮ್ಮ ಸಚಿವರಿಗೆ ಅನಂತ ಧನ್ಯವಾದಗಳು.ನಮ್ಮ ಭಾಗದಲ್ಲಿ ಸ್ನಾತಕೋತ್ತರ ಕೇಂದ್ರ/ಸಂಶೋಧನಾ ಕೇಂದ್ರ ಹಾಗೂ ಜಾನಪದ ಲೋಕ ನಿರ್ಮಿಸಲು ಮುಂದಾದ ಕುಲಪತಿಗಳಿಗೂ ಧನ್ಯವಾದಗಳು. ನಮ್ಮ ಭಾಗದ ವಿದ್ಯಾರ್ಥಿಗಳಿಗೆ,ಜಾನಪದ ಕವಿ ಕಲಾವಿದರಿಗೆ ಇದರಿಂದ ಮುಂದೆ ಬಹಳ ಉಪಯೋಗ ಆಗಲಿದೆ. ಈ ಸಮಾಜಮುಖಿ ಶೈಕ್ಷಣಿಕ ಕೆಲಸಕ್ಕೆ ಮುಂದಾದ ನಮ್ಮ ಸಚಿವರು ಅಭಿನಂದನಾರ್ಹರು .ಅವರಿಗೆ ನಮ್ಮ ಭಾಗದ ಜನತೆ ವತಿಯಿಂದ ಅನಂತ ಧನ್ಯವಾದಗಳು
ಡಾ.ಸಿದ್ಧರಾಮ ಹೊನ್ಕಲ್.