ಹೊಳೆಸಮುದ್ರ ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ

ಹೊಳೆಸಮುದ್ರ ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ

 ಹೊಳೆಸಮುದ್ರ ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ

ಕಮಲನಗರ :ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಶ್ರೀ ಗಣೇಶ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ವಿಧಿ ವಿಧಾನಗಳ ಪ್ರಕಾರ ಕಾರ್ಯಕ್ರಮ ನಡೆಸಲಾಗಿತ್ತು.

 ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಡಿಸೆಂಬರ್ 25ರಂದು ಶ್ರೀ ನವಶಾ ಗಣೇಶ ಮಂಡಳ ಟ್ರಸ್ಟದಿಂದ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಬಹಳ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿತು.

ಶ್ರೀ ಗಣೇಶ ಮಂದಿರದಲ್ಲಿ ದಿನ ರಾತ್ರಿ ಭಜನೆ ಕೀರ್ತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ನಾವೆಲ್ಲರೂ ಶಿವನ ಭಕ್ತರು ಅವನ ಗುಣ ಮಾಡಬೇಕು ಶಿವನ ಮಗನಾಗಿರುವ ಗಣೇಶನು ಈ ಮೂರು ಲೋಕಕ್ಕೆ ದೇವತಾ ದೇವತೆಗಳಲ್ಲಿ ಶ್ರೇಷ್ಠದೇವನೇಯಾಗಿದಾನೆ. ಅವನ ಮಹಿಮೆ ಅಪಾರವಾದದ್ದು ಎಂದು ವರ್ಣಿಸಿರುವ ಕೀರ್ತನಕಾರ ಶರಣಪ್ಪ ಬೆಲ್ದಾಳೆ ಮಹಾರಾಜರು ಕಾರ್ಯಕ್ರಮದಲ್ಲಿ ಗಣೇಶನ ಜೀವನ ಚರಿತ್ರೆ ಕುರಿತು ಮಾತನಾಡಿದರು.

ಮುಂಜಾನೆ ಹರಿನಾಥ ಮಹಾರಾಜ ಮಠದಿಂದ ಸಾವಿರಾರು ಸಂಖ್ಯೆಯಲ್ಲಿ ಸುಮಂಗಲಿಯರು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಕುಂಭ ಕಳಸ ಮೆರವಣಿಗೆಯೊಂದಿಗೆ ಮಂದಿರಕ್ಕೆ ಬಂದು ತಲುಪಿತು.

ನಂತರದಲ್ಲಿ ವಿದ್ಯಾಮಾನ ಶಾಸ್ತ್ರೀಯವರ ಮಾರ್ಗದಲ್ಲಿ ಮಹಾಯಜ್ಞ ,ಹವನ ಪೂಜೆ ನೇರವೇರಿಸಿ, ಮೂರ್ತಿ ಪ್ರತಿಷ್ಠಾಪನೆ ಮಾಡಿ ಕಳಸಾರೋಹಣ ಮಾಡಿದರು.

ಈ ಸಂದರ್ಭದಲ್ಲಿ ಊರಿನ ಹಾಗೂ ನೇರದ ಭಕ್ತರ ಸಮ್ಮುಖದಲ್ಲಿ ಅನೇಕ ಕಾರ್ಯಕ್ರಮಗಳು ನೆರವೇರಿದವುರೊಂದಿಗೆ ಊರಿನ ಸದ್ಭಕ್ತರು ಉಪಸ್ಥಿಯಲ್ಲಿದ್ದರು.

ಹೊಳೆ ಸಮುದ್ರ ಗ್ರಾಮದ ಮಧ್ಯ ಭಾಗದಲ್ಲಿರುವ ಗಣೇಶ ಮೂರ್ತಿ ಸ್ಥಾಪನೆಯನ್ನು ಮಾಡಲಾಗಿತ್ತು. ಕಳಸಾರೋಹಣಕ್ಕೆ ಈ ಊರಿನ ಹೆಣ್ಣು ಮಕ್ಕಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಅಚ್ಚುಕಟ್ಟಾಗಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲ್ಲಾಗಿತು.

ರಾಜಕುಮಾರ್ ವೀರಭದ್ರಪ್ಪ ವಡಗೀರೆ ಇವರು ಬಂದಿರುವ ಭಕ್ತಾದಿಗಳಿಗೆ ಮಾಹಾಪ್ರಸಾದ ವ್ಯವಸ್ಥೆ ಮಾಡಿದರು. 

ಈ ಕಾರ್ಯಕ್ರಮದಲ್ಲಿ ಊರಿನ ಗಣ್ಯರು ಹಾಗೂ ಭಕ್ತರು ಸಂತೀಷ ವಡಗೀರೆ,ಸಂತೀಷ ಜಾಧವ , ಮದನಕುಡ್ಲೇ ,ಮದನ ಜಾಧವ,ಸೋಮ ನೂದನೂರೆ, ದಯಾನಂದ್ ಪಾಟೀಲ್, ಶಂಕರ್ ಪೂಜಾರಿ , ಸುನೀಲ್ ಬಿರ್ಗೆ,ದೀಪಿಕ ವಡಗೀರೆ,ಬಾಳು ಪಾಟೀಲ್,ವಿಠಲ ಪೂಜಾರಿ, ಪ್ರದೀಪ್ ಪಾಟೀಲ್,ಶಂಕರ ನೂದನುರೆ ಇವರೆಲ್ಲರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.

ಸುತ್ತಲಿನ ಡಿಗ್ಗಿ, ಚಾಂಡೇಶ್ವರ, ಕಮಲ್ನಗರ, ಬಸನಾಳ, ಸಾವಳಿ, ಹುಲಸುರ, ಅನೇಕ ಗ್ರಾಮಗಳಿಂದ ಭಕ್ತ ಜನರು ಉಪಸ್ಥಿತರಿದ್ದರು.