" ಸಾಧನೆಯ ಸಿಂಹ ಧರ್ಮಸಿಂಗ 88 ನೇ ಜನ್ಮದಿನಾಚರಣೆ"

" ಸಾಧನೆಯ ಸಿಂಹ ಧರ್ಮಸಿಂಗ 88 ನೇ ಜನ್ಮದಿನಾಚರಣೆ"

" ಸಾಧನೆಯ ಸಿಂಹ ಧರ್ಮಸಿಂಗ 88 ನೇ ಜನ್ಮದಿನಾಚರಣೆ"

ಕಲಬುರಗಿ :  ಸಗರ ನಾಡು ಶರಣರ ಬೀಡು, ಶರಣಬಸವೇಶ್ವರ ಜನ್ಮಮಿಸಿದು ಅರಳಗುಂಡಿಗೆಯಲ್ಲಿ . ಜೇವರ್ಗಿ ತಾಲೂಕಿನ ಭೀಮಾ ನದಿತೀರದ

ನೆಲೋಗಿ ಗ್ರಾಮ . ಅಪ್ಪಟ ಕೃಷಿ ಕುಟುಂಬದಲ್ಲಿ ದಿನಾಂಕ 25-12-1936 ರಂದು ಶ್ರೀಮತಿ ಪದ್ಮಾವತಿ ನಾರಾಯಣ ಸಿಂಗರ ನಾಲ್ಕನೇ ಪುತ್ರರಾಗಿ ದಿ.ಧರ್ಮಸಿಂಗ ಅವರು ಜನಿಸಿದರು. ಎನ್ .ಧರ್ಮಸಿಂಗ. ಅವರು ಬಾಲ್ಯದಲ್ಲಿ ಪ್ರಾಥಮಿಕ ಶಿಕ್ಷಣ ನೆಲೋಗಿಯಲ್ಲಿ , ಪ್ರೌಢ ಮತ್ತು ಕಾಲೇಜು ಶಿಕ್ಷಣ ಕಲಬುರಗಿಯಲ್ಲಿ ಓದು ಪೂರ್ಣಗೊಳಿಸಿದರು.ನಂತರ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಎಂ.ಎ. ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿ, ಗುಲ್ಬರ್ಗದಲ್ಲಿ ವಕೀಲಿ ವೃತ್ತಿಯಲ್ಲಿ ತೊಡಗಿದರು . ಗುಲ್ಬರ್ಗ ನಗರ ಸಭೆ ಸದಸ್ಯರಾಗಿ ತಮ್ಮ ರಾಜಕೀಯ ಪಾದಾರ್ಪಣೆ ಮಾಡಿದರು. 

       .1968 ರಲ್ಲಿ ಜೇವರ್ಗಿ ಮತ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಇಂದಿರಾಗಾಂಧಿಯವರ ನೇತೃತ್ವದ ಇಂಡಿಕೇಟ್ ಪಕ್ಷದ "ಆಕಳ ಕರು" ಚಿನ್ನೆಯಿಂದ ಅವರ ಎದುರಾಳಿ ಸಿಂಡಿಕೇಟ್ ಪಕ್ಷದ ದಿ. ಮಹಾದೇವಪ್ಪ ರಾಂಪೂರೆ ಅವರನ್ನು ಸೋಲಿಸಿ ಇವರು ಗೆಲುವು ಸಾಧಿಸಿದ್ದರು. ಮುಂದೆ ಜೇವರ್ಗಿಯಿಂದ ಸತತವಾಗಿ 8 ಬಾರಿ ಶಾಸಕರಾಗಿ ಆಯ್ಕೆಯಾದರು,ನಂತರ ಗುಲಬರ್ಗಾ ಮತ್ತು ಬೀದರ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಜನರ ಸೇವೆ ಸಲ್ಲಿಸುತ್ತಿದ್ದಾರೆ.

ನಂತರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾಗಿ ಮನೆಮಾತಾಗಿ ಕೆಲಸ ಮಾಡಿದರು. 

 ಇವರು ಪ್ರಪ್ರಥಮವಾಗಿ ಗುಂಡೂರಾವ ಸರ್ಕಾರದಲ್ಲಿ ನಗರಾಭಿವೃದ್ಧಿ ಮತ್ತು ಗ್ರಹ ಮಂಡಳಿಯ ಮಂತ್ರಿಯಾಗಿದ್ದಾಗ ಗುಲಬರ್ಗಾ ನಗರಸಭೆ ಇದುದ್ದನ್ನು ಮಹಾನಗರ ಪಾಲಿಕೆ ಮಾಡಿದ್ದು ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಅದರಂತೆ ಗೃಹಮಂಡಳಿ ಮಂತ್ರಿಯಾಗಿ ಬಡವ, ಸಾಮಾನ್ಯ ವರ್ಗದವರಿಗೆ, ನಗರವಾಸಿಗಳಿಗೆ ಗೃಹಮಂಡಳಿಯ ಮನೆಗಳನ್ನು ದೊರಕಿಸಿ ಕೊಟ್ಟಿರುವುದು ಅವರ ಪಾತ್ರ ಮುಖ್ಯವಾಗಿದೆ. ಅದರಂತೆ ಮುಂದೆ ಸನ್ಮಾನ್ಯ ಎಸ್.ಎಂ. ಕೃಷ್ಣಾ, ಎಂ. ವೀರಪ್ಪ ಮೊಯ್ಲಿ, ಬಂಗಾರಪ್ಪಾ ಮಂತ್ರಿಮಂಡಲದಲ್ಲಿ ಅಬಕಾರಿ, ಸಮಾಜ ಕಲ್ಯಾಣ, ಲೋಕೋಪಯೋಗಿ, ಗೃಹಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದು, ಕರ್ನಾಟಕದಲ್ಲಿಯೇ ಅಲ್ಲದೆ ಹೈದ್ರಾಬಾದ ಕರ್ನಾಟಕದಲ್ಲಿಯೇ ಹಲವಾರು ಜನಪರ ಕೆಲಸ-ಕಾರ್ಯ ಮಾಡಿ ಜನರ ಮೆಚ್ಚಿಗೆ ಪಡೆದ ಮಂತ್ರಿಯಾಗಿ ಅಜಾತಶತ್ರು ಆಗಿದ್ದರು.

   ಅದರಂತೆ ರಾಜ್ಯದಲ್ಲಿ ಹೊಸ ರಸ್ತೆಗಳು. ಹೆದ್ದಾರಿಗಳು, ಕೃಷ್ಣಾ ಮೇಲ್ದಂಡೆ ಯೋಜನೆ ಜೇವರ್ಗಿ ತಾಲೂಕಿಗೆ ಶಾಖಾ ಕಾಲುವೆ ಕಲ್ಪಿಸಿ ಭೀಮಾ ನದಿಗೆ ಹಲವಾರು ಬ್ಯಾರೇಜಗಳು ನಿರ್ಮಾಣ ಮಾಡಿ ರೈತರಿಗೆ ಹಸಿರು ಕ್ರಾಂತಿ ಹರಿಕಾರರಿವರು , ಗೃಹ ಮಂತ್ರಿಯಾದ ಸಂದರ್ಭದಲ್ಲಿ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ನಕ್ಸಲರ ಹಾವಳಿ ಹೆಚ್ಚಾಗಿದ್ದು ನೂರಾರು ನಕ್ಸಲರನ್ನು ಸದೆಬಡೆದ ಕೀರ್ತಿ ಇವರಿಗೆ ಸಲ್ಲುತ್ತದೆ.

  ಮಂತ್ರಿಯಾಗಿ ಕರ್ನಾಟಕದಲ್ಲಿ ಹಲವಾರು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿ ಅತ್ಯಂತ ಜನಮೆಚ್ಚಿಗೆ ಪಡೆದ ಮುಖ್ಯ ಮಂತ್ರಿಗಳಾಗಿದ್ದರು, ಅಲ್ಲದೆ ಏಷ್ಟೋ ವರ್ಷಗಳಿಂದ ಕಾಡುಗಳ್ಳ ವೀರಪ್ಪನ್ ಹಾವಳಿಯಿಂದ ಅರಣ್ಯದಲ್ಲಿ ಐ.ಪಿ.ಎಸ್, ಐ.ಎಫ್.ಎಸ್ ಅಧಿಕಾರಿಗಳನ್ನು ಕೊಚ್ಚಿಹಾಕಿ ಮತ್ತು ಕರ್ನಾಟಕದ ರಾಜ್ಯದ ಮಂತ್ರಿಯಾದ ನಾಗಪ್ಪ ಅವರನ್ನು ಅಪಹರಿಸಿ ಕೊಲೆ ಮಾಡಿದ್ದು ನೂರಾರು ಪೊಲೀಸ್ ಅಧಿಕಾರಿಗಳು ಅರಣ್ಯಾಧಿಕಾರಿಗಳ ಅಪಹರಿಸಿ ಕೊಲೆ ಮಾಡಿದ್ದಲ್ಲದೆ ವರನಟ ಡಾ. ರಾಜಕುಮಾರ್ ಅವರನ್ನು ಅಪಹರಿಸಿ ಕರ್ನಾಟಕದ ಜನಗಳು ದಿನಾಲು ಕಣ್ಣಿರಿಂದ ಕೈತೊಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಒಬ್ಬ ದುಷ್ಟ ಕಾಡುಗಳ್ಳ ವೀರಪ್ಪನನ್ನು ಸದೆಬಡೆದಿದ್ದು ಇವರ ಅಧಿಕಾರ ಅವಧಿಯಲ್ಲಿಯೇ.

     ಸುಮಾರು 25 ವರ್ಷಗಳಿಂದ ಅನೇಕ ಮುಖ್ಯಮಂತ್ರಿಗಳು ಆಗಿ ಹೋದರೂ ಸನ್ಮಾನ್ಯ ಧರ್ಮ ಸಿಂಗ್ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕಾಡುಗಳ್ಳನಾದ ವೀರಪ್ಪನನನ್ನು ಸದೆಬಡೆದ ಕೀರ್ತಿ ಇವರಿಗೆ ಸಲ್ಲುತ್ತದೆ, ಹಾಗೂ ರಾಜ್ಯದಲ್ಲಿ ಪಿಡುಗಾಗಿ ಪರಿಣಮಿಸಿದ ನಕ್ಸಲ್ ಹಾವಳಿಯನ್ನುಸದೆ ಬಡಿದದ್ದು ಶ್ರೀ ಧರ್ಮಸಿಂಗ್ ಅವರ ಅಧಿಕಾರವಧಿಯಲ್ಲಿಯೇ. 

    ಇಂತಹ ನಾಯಕನ ರಾಜಕೀಯ ಜೀವನದಲ್ಲಿ ಎಲ್ಲಿಯೂ ಸಹ ಕಪ್ಪು ಚುಕ್ಕೆ ಇಲ್ಲದೆ ಜನ ಹಿತೈಸಿಯಾಗಿ ನಿಷ್ಟಾವಂತ ರಾಜಕೀಯ ಧುರೀಣರಾಗಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷಕ್ಕಾಗಿ ಹಾಗೂ ಪ್ರಜೆಗಳಿಗಾಗಿ ಹಗಲಿರುಳು ಸೇವೆ ಮಾಡಿದವರು. ಅಂದಿನಿಂದ ಇಲ್ಲಿಯವರೆಗೆ ಅವರ ಸೇವೆಯನ್ನು ಪರಿಗಣಿಸಿ ದಿ. ಶ್ರೀ ಧರ್ಮಸಿಂಗ್ ರವರ ಕರ್ನಾಟಕ ರಾಜ್ಯದಲ್ಲಿ ಒಂದು ಸ್ಮಾರಕ ಅಥವಾ ಮೂರ್ತಿ ಸ್ಥಾಪನೆ ಆಗಿಲ್ಲದಿರುವುದು. ದೇಶದ ಯಾವುದೇ ಶೌರ್ಯ ಹಾಗೂ ಸಾಹಸ, ಪ್ರತಿಷ್ಠಿತ ಪ್ರಶಸ್ತಿಯಾಗಲಿ. ಕರ್ನಾಟಕ ರತ್ನ ಪ್ರಶಸ್ತಿ ಯಾಗಲಿ ಲಭಿಸಿರುವುದಿಲ್ಲ. ಇವರ 88 ನೇ ಜನ್ಮದಿನದ ಅಂಗವಾಗಿ ಕರ್ನಾಟಕದ ವಿಧಾನಸೌಧದ ಮುಂಭಾಗದಲ್ಲಿ ಅವರ ಮೂರ್ತಿ ಸ್ಥಾಪನೆ ಮಾಡಿ ಇವರ ರಾಜಕೀಯ ಜೀವನದ ಚರಿತ್ರೆಯನ್ನು ಮುಂದಿನ ಜನರಿಗೆ ಆಶಾದಾಯಕವಾಗಲು ಸರ್ಕಾರ ಕ್ರಮ ವಹಿಸಬೇಕೆಂದು ಕೋರುತ್ತೇವೆ.

-ಬಿ.ಎಂ.ನೆಲೋಗಿ