ಕಲಬುರ್ಗಿಯಲ್ಲಿ ವಾಹನ ಸಂಚಾರಕ್ಕೆ ಮತ್ತು ವಾಹನ ನಿಲುಗಡೆ ಸುಗಮ ದಾರಿಮಾಡಿಕೊಡಲು ಗುರು ಬಂಡಿ ಆಗ್ರಹ
ಕಲಬುರ್ಗಿಯಲ್ಲಿ ವಾಹನ ಸಂಚಾರಕ್ಕೆ ಮತ್ತು ವಾಹನ ನಿಲುಗಡೆ ಸುಗಮ ದಾರಿಮಾಡಿಕೊಡಲು ಗುರು ಬಂಡಿ ಆಗ್ರಹ
ಕಲಬುರಗಿ ನಗರ ಅತೀ ವೇಗವಾಗಿ ಬೆಳೆಯುತ್ತಿರುವ ಟ್ರಾಫಿಕ್ ಜಾಮ್, ಮಹಲ್, ಬಾರ್, ಆಸ್ಪತ್ರೆಗಳಲ್ಲಿ ವಾಹನಗಳ ನಿಲಗಡೆಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಇರುವುದಿಲ್ಲ.
ಇದಕ್ಕೆ ಮಹಾನಗರ ಪಾಲಿಕೆಯವರು ತಕ್ಷಣವೇ ಪರಿಹಾರ ಒದಗಿಸಬೇಕೆಂದು ಗುರು ಬಂಡಿ ಆಗ್ರಹಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾನಗರ ಪಾಲಿಕೆಯವರು ಕಟ್ಟಡ ಪರವಾನಿಗೆ ನೀಡುವ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ಮಾಡದೆ ಪರವಾನಿಗೆ ನೀಡಿರುವುದು ಇದಕ್ಕೆ ಕಾರಣವಾಗುತ್ತದೆ. ಎಂದು ದೂರಿದರು
ಮಹಾನಗರ ಪಾಲಿಕೆ ಜೊತೆಗೆ ಜಿಲ್ಲಾಡಳಿತವು ಕಾರಣವಾಗಿದೆ. ಇದರಿಂದ ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡುವುದರಿಂದ ರಸ್ತೆಯ ಮೇಲೆ ಓಡಾಡುವ ವಾಹನಗಳು ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರೇ ತೊಂದರೆಯಾಗುತ್ತಿದೆ. ಆದ್ದರಿಂದ ಕಲಬುರಗಿ ನಗರದಲ್ಲಿ ವಾಹನಗಳ ನಿಲಗಡೆ ಸ್ಥಳವನ್ನು ವೈಜ್ಞಾನಿಕವಾಗಿ ನಿರ್ಮಿಸಿ ಕಲಬುರಗಿ ನಗರದಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಬೇಕು .ಸಂಚಾರಿ ಪೋಲಿಸ ಇಲಾಖೆಯ ಮಹಾನಗರ ಪಾಲಿಕೆ ,ಜಿಲ್ಲಾ ಆಡಳಿತ ಅಧಿಕಾರಿಗಳ ಗಮನಕ್ಕೆ ಪತ್ರಿಕಾ ಗೋಷ್ಠಿಯ ಮುಖಾಂತರ ತರುತ್ತಿದ್ದೇವೆ. ಎಂದು ತಿಳಿಸಿದರು
ಸಮಸ್ಯೆಗಳನ್ನು ಶೀಘ್ರವೇ ಸರಿಪಡಿಸಿ ವಾಹನ ಚಾಲಕರಿಗೆ, ಪಾದಚಾರಿಗಳಿಗೆ, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ ಯಾವುದೇ ಅಪಘಾತವಾಗದಂತೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ಸಂಘಟನಾ ವೇದಿಕೆ ವತಿಯಿಂದ ಪತ್ರಿಕಾಗೋಷ್ಠಿಯ ಮುಖಾಂತರ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈಶ್ವರ ಹೆಗ್ಗಾ, ಸಾಗರ ಬಾವಿ.ಅಣ್ಣಾರಾವ ಮತ್ತಿಮೂಡ,ಉಮೇಶ ಬಿರಾದಾರ,ಸಿದ್ದು ಖೇಣಿ.ಪ್ರದೀಪ ಓಂಕಾರ,అనిల , ಮುತ್ತಣ್ಣ ಬಚ್ಚನ ಇದ್ದರು.