ಅಪರಾಧ ಮುಕ್ತ ವಾತಾವರಣ ನಿರ್ಮಾಣ

ಅಪರಾಧ ಮುಕ್ತ ವಾತಾವರಣ ನಿರ್ಮಾಣ

ಅಪರಾಧ ಮುಕ್ತ ವಾತಾವರಣ ನಿರ್ಮಾಣ

ಕಮಲನಗರ: ತಾಲೂಕಿನ ಚಾಂಡೇಶ್ವರ ಗ್ರಾಮದಲ್ಲಿ ಆಧುನಿಕ ಸಮಾಜ ಅಪರಾಧ ಮುಕ್ತ ಸಮಾಜ ರಚನೆಗೆ ಪ್ರತಿಯೊಬ್ಬ ವ್ಯಕ್ತಿಯ ಪಾತ್ರ ಮಹತ್ವದ್ದಾಗಿದೆ ಇದನ್ನು ತಡೆಯುವ ಶಕ್ತಿ ಸಾರ್ವಜನಿಕರಲಿದೆ. ವ್ಯಕ್ತಿಯ ಸ್ವಾರ್ಥಕಮಯ ಬದುಕಿನಿಂದ ಮೇಲೆದ್ದಾಗ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಸುಖ ದುಃಖ ಸಮಾನವಾಗಿ ಅರಿತಾಗ ಈ ಅಪರಾಧ ಪ್ರಕರಣಗಳು ಕಡಿಮೆಯಾಗಿ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಕಮಲನಗರ್ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಶೇಖರ್ ನಿರ್ಣೆ ಹೇಳಿದರು.

 ತಾಲೂಕಿನ ಚಾಂಡೇಶ್ವರ್ ಗ್ರಾಮದಲ್ಲಿ ಕಮಲನಗರ ಪೊಲೀಸ್ ಠಾಣೆಯಿಂದ ಹಮ್ಮಿಕೊಂಡ ಅಪರಾಧ ತಡೆ ಮಾಸಾ ಚರಣೀಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಜನರು ಒಬ್ಬರನ್ನು ಒಬ್ಬರು ಅರಿತು ಬಾಳದೆ ಇಲ್ಲದಿದ್ದರೆ ಕೋರ್ಟು, ಕಚೇರಿಯಂತಲೇ ಪ್ರತಿಯೊಬ್ಬನ ಜೀವನ ಅಲೆಯುವುದರಲ್ಲಿ ಹೋಗುತ್ತೆದೆ. ಹುಟ್ಟಿ ಬಂದು ಜೀವನದ ನಿಜ ಸುಖ ಪಡೆಯದೆ ಹಿಂದಕ್ಕೆ ತಿರುಗಿ ಹೊಗಿದರೆ ಭಗವಂತನಿಗೆ ಏನು ಉತ್ತರ ಕೊಡುವುದು. ಹೀಗಾಗಿ ಸಮಾಜದಲ್ಲಿ ಪರಸ್ಪರ ಪ್ರೀತಿ,, ಭರವಸೆ ಮೂಡಿಸಲು ಈ ರೀತಿಯ ವ್ಯಕ್ತಿತ್ವ ಬೆಳೆಸುವುದು ಅತಿ ಅವಶ್ಯಕತೆಯಾಗಿದೆ ಎಂದು ತಿಳಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಿಪಿಐ ಅಮರಪ್ಪ ಶಿವಬಲ ಮಾತನಾಡಿ. ಜೀವನದ ಸವಿ ಸವಿಯಲು ಅಪರಾಧ ಮುಕ್ತ ಸಮಾಜ ಅವಶ್ಯಕತೆ. ಆದ್ದರಿಂದ ಆರೋಗ್ಯವಂತ ಸಮಾಜಕ್ಕೆ ಎಲ್ಲರೂ ಕೈಜೋಡಿಸಬೇಕು, ಯುವಪೀಳಿಗೆಗೆ ಸುಂದರ ಸಮಾಜದ ನಿರ್ಮಾಣ ಮಾಡಲು ಅಪರಾಧ ಮುಕ್ತ ವಾತಾವರಣ ನಿರ್ಮಿಸಬೇಕು. ತಾನು ಬದುಕಿ ಬೇರೆಯವರು ಬದುಕಲು ಅವಕಾಶ ಮಾಡಿ ಕೊಡುವುದೆ ನಮ್ಮ ಸಾರ್ಥಕ ಬದುಕೆಂಬುವದು ಪ್ರತಿಯೊಬ್ಬರು ಅರಿತು ನಡೆಯಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿದರು, ನಾಗೇಶ್, ವೈಜಿನಾಥ ಸೂರ್ಯವಂಶಿ, ಎಚ್ಸಿ ಲೋಕೇಶ್, ಪರಶುರಾಮ್, ವಸಂತ್, ವೈಜಿನಾಥ್, ಪರಮೇಶ್, ರತಿಕ್ ಸಾಗರ್ ಸೇರಿದಂತೆ ಉಪಸ್ಥಿತರಿದ್ದರು.