ಪ್ರಾಯೋಜಿತ ಸಿದ್ದಸಿರಿ ಹೋರಾಟ ನಿಲ್ಲಿಸಿ ಇಲ್ಲ, ಜಾಗ ಖಾಲಿ ಮಾಡಿ. ತಾಲೂಕ ಆಡಳಿತಕ್ಕೆ ಎಚ್ಚರಿಕೆ ಕೊಟ್ಟ ಶರಣು ಪಾಟೀಲ ಮೋತಕಪಳ್ಳಿ
ಪ್ರಾಯೋಜಿತ ಸಿದ್ದಸಿರಿ ಹೋರಾಟ ನಿಲ್ಲಿಸಿ ಇಲ್ಲ, ಜಾಗ ಖಾಲಿ ಮಾಡಿ.
ತಾಲೂಕ ಆಡಳಿತಕ್ಕೆ ಎಚ್ಚರಿಕೆ ಕೊಟ್ಟ ಶರಣು ಪಾಟೀಲ ಮೋತಕಪಳ್ಳಿ
ಚಿಂಚೋಳಿ : ಚಿಂಚೋಳಿ ಹೊರವಲಯದಲ್ಲಿರುವ ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ ಸಿದ್ದಸಿರಿ ಕಾರ್ಖಾನೆ ಆಡಳಿತದ ಮಂಡಳಿಯ ಪ್ರಯೋಜಕತ್ವದೊಂದಿಗೆ ನವಂಬರ್ 4 ರಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪ್ರಾರಂಭವಾದ ಹೋರಾಟವು, ಸಂಬಂಧಿಸಿದ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ, ಪುರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆಗಳಿಂದ ಯಾವುದೇ ಅನುಮತಿ ಪಡೆಯದೆ ಕಾನೂನು ಬಾಹೀರವಾಗಿ ನಡೆಯುತ್ತಿದೆ ಎಂದು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಹಾಗೂ ವಕೀಲ ಶರಣು ಪಾಟೀಲ ಮೋತಕಪಳ್ಳಿ ಅವರು ಪ್ರಕಟಣೆ ಹೊರಡಿಸಿ ಆರೋಪಿಸಿದ್ದಾರೆ.
ಇಲ್ಲಿನ ಪಟ್ಟಣದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತ ಅತ್ಯಂತ ಜನನಿಬೀಡ ಪ್ರದೇಶವಾಗಿದ್ದು, ನಿತ್ಯ ಸಾವಿರಾರು ವಾಹನಗಳು ಓಡಾಡುವ ನಗರದ ಪ್ರಮುಖ ವೃತ್ತವಾಗಿದೆ. ಕಲಬುರ್ಗಿ, ಬೀದರ, ತಾಂಡೂರ್ ಹಾಗೂ ಸೇಡಂ ರಸ್ತೆಗಳು ಬಸವೇಶ್ವರ ವೃತ್ತದಲ್ಲಿಯೇ ಸೇರುತ್ತವೆ.
ಕಳೆದ ನ. 6 ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಂಚೋಳಿ ತಾಲೂಕ ಘಟಕದವು ಬಸವೇಶ್ವರ ವೃತ್ತದಲ್ಲಿನ ಪ್ರತಿಭಟನೆ ಸ್ಥಳಾಂತರಕ್ಕೆ ಒತ್ತಾಯಿಸಿ ಸಂಬಂಧಿದತ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಡಿದ್ದ ಮನವಿಗೆ ಕ್ಯಾರೆ ಅನ್ನದ ತಾಲೂಕ ಆಡಳಿತ ಎಂದು ಆರೋಪಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ಕಾರ್ಖಾನೆ ಸಂಬಂಧಿತ ಪ್ರಕರಣವು ವಿಚಾರಣೆ ಹಂತದಲ್ಲಿದೆ ಅನ್ನುವ ವಾಸ್ತವವನ್ನು ಅರಿತ ಎಲ್ಲಾ ತಾಲೂಕ ಅಧಿಕಾರಿಗಳು, ಹೋರಾಟಗಾರರು ವೃಥಾ ಸರಕಾರದ ಮೇಲೆ ಆರೋಪ ಮಾಡುವದನ್ನು ತಡೆಯದೆ ಹೋರಾಟಗಾರರಿಗೆ ಇನ್ನು ಹೆಚ್ಚಿನ ಉತ್ತೇಜನ ನೀಡಿದಂತಾಗಿದೆ.
ಕಾರ್ಖಾನೆ ಪ್ರಾಯೋಜಿತ ಹೋರಾಟಗಾರರು ದಿನ ಬೆಳಗಾದರೆ ಸರಕಾರ ಮತ್ತು ಸಚಿವರನ್ನು ವೃಥಾ ಕಾರಣ ಆರೋಪಿಸುವದನ್ನು ಕಂಡು ಕೇಳಿಯೂ ತಹಶೀಲ್ದಾರ, ಡಿವೈಎಸ್ಪಿ ಹಾಗೂ ಪುರಸಭೆ ಮುಖ್ಯ ಅಧಿಕಾರಿಗಳು ತೆಪ್ಪಗೆ ಕುಳಿತಿದ್ದಾರೆ.
ಪೊಲೀಸರ ವಾಹನಗಳ ಮುಂದೆಯೇ ಪಟ್ಟಣದ ವಾರದ ಸಂತೆಯಲ್ಲಿ ಬೀದಿ ಬೀದಿಗಳಲ್ಲಿ ಮೈಕ್ ಮುಖಾಂತರ ಸಾರ್ವಜನಿಕರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುವ ಹೋರಾಟಗಾರರ ಕೆಲಸವನ್ನು ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಸಾಮರಸ್ಯ ಹಾಳು ಮಾಡುತ್ತಿರುವದು ಅಪರಾಧ ಎನ್ನುವುದು ತಿಳಿದು ಕೂಡ ತಾಲೂಕ ಆಡಳಿತ ಕ್ರಮ ಕೈಗೊಳ್ಳದಿರುವುದು ನೋಡಿದರೆ ಅಧಿಕಾರಿಗಳೇ ಆಸಕ್ತರಾಗಿದ್ದಾರೆ ಎನ್ನುವದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿ ಹಬ್ಬಿದೆ.
ಈ ವಿಷಯದ ಕುರಿತು ಹಲವು ಬಾರಿ ಡಿವೈಎಸ್ಪಿ ಅವರಿಗೆ ಮನವಿ ಮಾಡಿದ್ದರೂ ಸಿದ್ದಸಿರಿ ಆಡಳಿತ ಮಂಡಳಿಗೆ ಹೆದರಿ ಯಾವುದೇ ಕ್ರಮ ಕೈಗೊಳ್ಳದೇ, ನನಗೆ ಕುಂಡಿ ತುರಿಸಿಕೊಳ್ಳಲು ಸಮಯ ಇಲ್ಲ ನಿಮ್ಮ ಮನವಿಗೆ ಸ್ಪಂದಿಸಲು ಆಗಲ್ಲೇನ್ನುವ ಉಡಾಫೆ ಉತ್ತರ ಕೊಟ್ಟಿದ್ದಾರೆ .
ತಾಲೂಕ ಆಡಳಿತವು ಎರಡು ದಿನಗಳಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಹೋರಾಟ ನಿಲ್ಲಿಸಬೇಕು.
ಸಚಿವ ಶ್ರೀ ಈಶ್ವರ ಖಂಡ್ರೆ ಅವರ ವಿರುದ್ಧ, ಸರಕಾರದ ವಿರುದ್ಧ ಇನ್ನು ಮುಂದೆ ಒಂದೇ ಒಂದು ಸುಳ್ಳು ಆರೋಪ ಕಿವಿಗೆ ಬಿದ್ದಲ್ಲಿ ಮುಂದೆ ಆಗುವ ಅನಾಹುತಕ್ಕೆ ತಾಲೂಕ ಆಡಳಿತ ನೇರ ಹೊಣೆ ಹೊರಬೇಕಾಗುತ್ತದೆ. ಒಂದು ವೇಳೆ ಕ್ರಮ ಕೈಗೊಳ್ಳಲು ನಿಮ್ಮಿಂದ ಸಾಧ್ಯವೇ ಇಲ್ಲ ಅಂದಲ್ಲಿ ಹುದ್ದೆಯಿಂದ ಜಾಗ ಖಾಲಿ ಮಾಡಬೇಕು ಅಶಕ್ತರ ಅವಶ್ಯಕತೆ ನಮ್ಮ ಚಿಂಚೋಳಿಗೆ ಇಲ್ಲ ಎಂದು ವಕ್ತಾರ ಮೋತಕಪಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.