ಶಕುಂತಲಾ ಭೀಮಳ್ಳಿ ನಿಧನಕ್ಕೆ ನ್ಯಾಯವಾದಿ ಚಂದ್ರಕಾಂತ ಕಾಳಗಿ ಸಂತಾಪ ಸೂಚಿಸಿದ್ದಾರೆ
ಶಕುಂತಲಾ ಭೀಮಳ್ಳಿ ನಿಧನಕ್ಕೆ ನ್ಯಾಯವಾದಿ ಚಂದ್ರಕಾಂತ ಕಾಳಗಿ ಸಂತಾಪ ಸೂಚಿಸಿದ್ದಾರೆ
ಕಲಬುರಗಿ : ಇಲ್ಲಿಯ ಪ್ರತಿಷ್ಠಿತ ಭೀಮಳ್ಳಿ ಮನೆತನದ ಹಿರಿಯರು ಬಸವಾಭಿಮಾನಿಗಳು, ಸಮಾಜ ಚಿಂತಕರಾದ ಶ್ರೀಮತಿ ಶಕುಂತಲಾ ಭೀಮಳ್ಳಿ ಯವರ ನಿಧನಕ್ಕೆ ನ್ಯಾಯವಾದಿ ಚಂದ್ರಕಾಂತ ಕಾಳಗಿ ಅವರು ಸಂತಾಪ ಸೂಚಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶ್ರೀ ಬಸವರಾಜ ಭೀಮಳ್ಳಿ ಯವರ ಧರ್ಮಪತ್ನಿ ಹಾಗೂ ಎಚ್ಕೆಇ ಸಂಸ್ಥೆಯ ಹಾಲಿ ಉಪಾಧ್ಯಕ್ಷರಾದ ಶ್ರೀ ರಾಜಾ ಭೀಮಳ್ಳಿ ಯವರ ತಾಯಿಯವರಾದ ಶಕುಂತಲಾ ಭೀಮಳ್ಳಿ ಯವರು ತ್ರಿಕಾಲ ಪೂಜಾ ನಿಷ್ಠರಾಗಿದ್ದರು.
ನಗರದ ಮಕ್ತಂಪೂರದ ಬಡಾವಣೆಯ ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.
ದಾನ ,ಧರ್ಮ, ಪರೋಪಕಾರ ಮಾಡುತಿದ್ದರು. ಶಕುಂತಲಾ ಭೀಮಳ್ಳಿ ಯವರು ಇತ್ತೀಚೆಗೆ ನಡೆದ ಮಹಾದೇವಿ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ ,ಬಸವಾದಿ ಶರಣರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು.
ಶರಣಬಸವೇಶ್ವರರು , ಗದುಗಿ ಮಠದ ಶ್ರೀಗಳು ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನ್ಯಾಯವಾದಿ ಚಂದ್ರಕಾಂತ ಕಾಳಗಿ ಪ್ರಾರ್ಥಿಸಿದ್ದಾರೆ.